Lifestyle

ಬೇಸಿಗೆಯಲ್ಲಿ ಇರುವೆಗಳ ಸಮಸ್ಯೆ; ನಿವಾರಣೆ ತುಂಬಾ ಸುಲಭ!

ಬೆಂಗಳೂರು; ಬೇಸಿಗೆ ಬಂದಾಯ್ತು, ಈಗ ಮನೆಗಳಲ್ಲಿ ಎಲ್ಲೆಂದರಲ್ಲಿ ಇರುವೆಗಳದ್ದೇ ಕಾರುಬಾರು.. ಏನೇ ಸಿಕ್ಕರೂ ಅದಕ್ಕೆ ಇರುವೆಗಳು ಮುತ್ತಿಕೊಂಡುಬಿಡುತ್ತವೆ. ಸಿಹಿ ಪದಾರ್ಥಗಳು, ಯಾವುದೇ ಆಹಾರ ಪದಾರ್ಥಗಳು ಇಟ್ಟರೂ ಅದರ ತುಂಬಾ ಇರುವೆಗಳು ಮುತ್ತಿರುತ್ತವೆ. ಯಾವ ಗೋಡೆಯ ಮೇಲೆ ನೋಡಿದರೂ ಸಾಲು ಸಾಲು ಇರುವೆಗಳು ಕಾಣಿಸುತ್ತವೆ. ಇದರಿಂದ ಬೇಸಿಗೆ ಮೂರು ತಿಂಗಳು ಜನ ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ.. ಈಗಾಗಲೇ ನಿಮ್ಮ ಮನೆಗಳಲ್ಲಿ ಈ ಇರುವೆ ಸಮಸ್ಯೆ ಅನುಭವಿಸುತ್ತಿರುವುದು. ಇವುಗಳ ನಿಯಂತ್ರಣ ಹೇಗೆ ಅನ್ನೋ ತೆಲೆನೋವು ಕೂಡಾ ಶುರುವಾಗಿರಬಹುದು. ಹಾಗಾದ್ರೆ, ಈ ಇರುವೆಗಳನ್ನು ಓಡಿಸೋದಕ್ಕೆ ಹಲವು ಉಪಾಯಗಳಿವೆ.. ಅವುಗಳನ್ನು ಹೇಳುವ ಪ್ರಯತ್ನವನ್ನು ನಾವು ಇಲ್ಲಿ ಮಾಡಿದ್ದೇವೆ..

ಇದನ್ನೂ ಓದಿ; Bomb blast case; ನಾಲ್ವರು ಶಂಕಿತರ ವಿಚಾರಣೆ; ಸಿಕ್ಕಿಬಿದ್ದರಾ ಸ್ಫೋಟ ಆರೋಪಿಗಳು..?

ಉಪ್ಪು ಇರುವೆಗಳನ್ನು ಓಡಿಸುತ್ತಂತೆ;

ಉಪ್ಪು ಇರುವೆಗಳನ್ನು ಓಡಿಸುತ್ತಂತೆ; ವಿಶೇಷವಾಗಿ ಬೇಸಿಗೆಯಲ್ಲಿ ಮನೆಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಬೇಕು.. ಅದರಲ್ಲೂ ಅಡುಗೆ ಮನೆಯಲ್ಲಿ ಆಹಾರ ಪದಾರ್ಥಗಳು ಚೆಲ್ಲದಂತೆ ನೋಡಿಕೊಳ್ಳಬೇಕು.. ಎಲ್ಲವನ್ನೂ ಬಿಗಿಯಾಗಿ ಮುಚ್ಚಿಡಬೇಕು. ಸಕ್ಕರೆ ಮುಂತಾದ ಸಿಹಿ ಪದಾರ್ಥಗಳನ್ನು ಓಪನ್‌ ಮಾಡಿಡದೆ ಮುಚ್ಚಿಡಬೇಕು.. ಹೀಗೆ ಮಾಡಿದ ನಂತರವೂ ಇರುವೆಗಳು ಬರುತ್ತಿದ್ದರೆ, ಉಪ್ಪು ನಿಮ್ಮ ಸಹಾಯಕ್ಕೆ ಬರುತ್ತದೆ.

ಇರುವೆ ಹಾಗೂ ಕೀಟಗಳಿಂದ ದೂರ ಇರಬೇಕು ಅಂದ್ರೆ ನೀವು ಉಪ್ಪು ಬಳಸಬೇಕಾಗುತ್ತದೆ… ಉಪ್ಪನ್ನು ನೀರಿನಲ್ಲಿ ಕರಗಿಸಿ, ಆ ಉಪ್ಪು ನೀರನ್ನು ಉರುವೆಗಳು ಓಡಾಡುವ ಕಡೆ ಸಿಂಪಡಣೆ ಮಾಡಬೇಕು. ಹಾಗೆ ಮಾಡುವುದರಿಂದ ಉಪ್ಪು ನೀರಿನ ವಾಸನೆ ತಡೆಯಲಾಗದೆ ಇರುವೆಗಳು ಅಲ್ಲಿಂದ ಕಾಲ್ಕೀಳುತ್ತವೆ.

ಇದನ್ನೂ ಓದಿ;Rameshwaram cafe blast; ಬಾಂಬ್‌ ಸ್ಫೋಟ ಪ್ರಕರಣ; ಶಂಕಿತನ ಚಹರೆ ಪತ್ತೆ!

ಬೇವಿನ ಎಣ್ಣೆಯಿಂದಲೂ ಇರುವೆ ದೂರ;

ಬೇವಿನ ಎಣ್ಣೆಯಿಂದಲೂ ಇರುವೆ ದೂರ; ಇರುವೆಗಳಿಂದ ಮುಕ್ತಿ ಹೊಂದಲು ಬೇವಿನ ಎಣ್ಣೆ ಕೂಡಾ ನಿಮಗೆ ಸಹಾಯ ಮಾಡುತ್ತದೆ. ಮನೆಯ ಮೂಲೆಗಳಲ್ಲಿ ಬೇವಿನ ಎಣ್ಣೆಯನ್ನು ಹಚ್ಚಿದರೆ ಅದರ ವಾಸನೆಗೆ ಇರುವೆಗಳಾಗಲೀ, ಇತರೆ ಕ್ರಿಮಿಗಳಾಗಲೀ ದೂರ ಹೋಗುತ್ತವೆ. ಬೇವಿನ ಎಣ್ಣೆ ವಾಸನೆ ಹಾಗೂ ಅದು ಕಹಿ ಇರುವುದರಿಂದ ಇರುವೆಗಳು ಅದರ ಹತ್ತಿರ ಬರುವುದಿಲ್ಲ. ಇದರಿಂದಾಗಿ ನಮಗೆ ಇರುವೆ ತಲೆನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ; ಪಾಕ್ ಪರ ಘೋಷಣೆ ಕೂಗಿದ್ದು‌ ನಿಜ; ಆರೋಪಿ ಪತ್ತೆಗೆ ತಯಾರಿ

ಬೆಳ್ಳುಳ್ಳಿ ಎಣ್ಣೆಯಿಂದಲೂ ಇರುವೆ ದೂರ;

ಬೆಳ್ಳುಳ್ಳಿ ಎಣ್ಣೆಯಿಂದಲೂ ಇರುವೆ ದೂರ; ಇನ್ನು ಎಲ್ಲರ ಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ಅದನ್ನು ಜಜ್ಜಿ ಮೂಲೆ ಮೂಲೆಯಲ್ಲಿ ಹಚ್ಚುವುದರಿಂದ ಇರುವೆಗಳು ಓಡಿಹೋಗುತ್ತವೆ.. ಇಲ್ಲವೇ ಅಂಗಡಿಯಲ್ಲಿ ಸಿಗುವ ಬೆಳ್ಳುಳ್ಳಿ ಎಣ್ಣೆಯನ್ನು ತಂದು ಅಲ್ಲಲ್ಲಿ ಸಿಂಪಡಿಸಬೇಕು.. ಇರುವೆಗಳು ಹೆಚ್ಚಾಗಿ ಓಡಾಡುವ ಜಾಗದಲ್ಲಿ ಇದನ್ನು ಇಟ್ಟರೆ, ಇರುವೆಗಳು ಅಲ್ಲಿಂದ ಪರಾರಿಯಾಗುತ್ತವೆ.

ನಿಂಬೆ ರಸ ಸಿಂಪಡಿಸಿದರೂ ಇರುವೆ ನಾಶ;

ನಿಂಬೆ ರಸ ಸಿಂಪಡಿಸಿದರೂ ಇರುವೆ ನಾಶ; ನಿಂಬೆ ನೀರು ಅಡಿಗೆ ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ನಿಂಬೆ ರಸವು ಇರುವೆಗಳು ಮತ್ತು ಕೀಟಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಕೀಟಗಳು ಮತ್ತು ಇರುವೆಗಳು ಕಂಡುಬಂದಲ್ಲಿ ನಿಂಬೆರಸವನ್ನು ಸಿಂಪಡಿಸಿದರೆ ಓಡಿಹೋಗುತ್ತವೆ.

ಇದನ್ನೂ ಓದಿ; Carrot Juice; ಕ್ಯಾರೆಟ್‌ ಜ್ಯೂಸ್‌ನಿಂದಲೂ ಸೈಡ್‌ ಎಫೆಕ್ಟ್‌ ಆಗುತ್ತಾ..?

ಕರಿಮೆಣಸು, ಖಾರದ ಪುಡಿ;

ಕರಿಮೆಣಸು, ಖಾರದ ಪುಡಿ; ಕರಿಮೆಣಸಿನ ಪುಡಿ ಮತ್ತು ಕೆಂಪು ಮೆಣಸಿನಕಾಯಿಗಳೆರಡೂ ಘಾಟು ವಾಸನೆ ಹೊಂದಿರುತ್ತವೆ. ಆದುದರಿಂದ ಇರುವೆಗಳು ಇವುಗಳಿರುವ ಸ್ಥಳಕ್ಕೆ ಬರುವುದಿಲ್ಲ. ಅಗತ್ಯವಿರುವಲ್ಲಿ ಸ್ವಲ್ಪ ಮೆಣಸಿನ ಪುಡಿಯನ್ನು ಚಿಮುಕಿಸಿ. ಕರಿಮೆಣಸಿನ ಪುಡಿಯನ್ನು ಕೂಡಾ ಇದಕ್ಕೆ ಬಳಸಬಹುದು.

ಬೇಸಿಗೆಯಲ್ಲಿ ಹೊರಗಡೆ ವಿಪರೀತ ಬಿಸಿಲಿರುತ್ತದೆ. ಈ ಹಿನ್ನೆಲೆಯಲ್ಲಿ ಇರುವೆಗಳೆಲ್ಲಾ ಮನೆಗಳು ಸೇರುತ್ತವೆ. ಮನೆಯ ತುಂಬಾ ಗೋಡೆಗಳ ಮೇಲೆ ಸಾಲುಗಟ್ಟಿ ಓಡಾಡುತ್ತಿರುತ್ತವೆ. ಎಲ್ಲೇ ಆಹಾರ ಸಕ್ಕರೂ ಅದನ್ನು ಮುತ್ತಿಕೊಳ್ಳುತ್ತವೆ. ಇದನ್ನು ಹೋಗಲಾಡಿಸಲು ನೀವು ಮೇಲಿನ ವಿಧಾನಗಳನ್ನು ಅನುಸರಿಸಬಹುದು. ಮನೆಯಲ್ಲೇ ಸಿಗುವ ವಸ್ತುಗಳಿಂದ ನಾವು ಇರುವೆ ಸಮಸ್ಯೆಯನ್ನು ದೂರ ಮಾಡಬಹುದು.

ಇದನ್ನೂ ಓದಿ; Turmeric; ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಬೇಕೇಬೇಕು ಅರಿಶಿನ!

Share Post