NationalTechnology

ಫೇಸ್ ಬುಕ್, ಇನ್ಸ್ಟಾ ಸರ್ವರ್ ಡೌನ್; ಇದ್ದಕ್ಕಿದ್ದಂತೆ ಲಾಗೌಟ್

ನವದೆಹಲಿ; ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು, ಇದಕ್ಕಿದ್ದಂತೆ ಬಹುತೇಕ ಅಕೌಂಟ್ ಗಳು ಲಾಗೌಟ್ ಆಗಿವೆ. ಲಾಗ್ ಇನ್ ಮಾಡಿದರೂ ಆಗುತ್ತಿಲ್ಲ. ಇದರಿಂದ ಇದ್ದಕ್ಕಿದ್ದಂತೆ ಏನಾಯ್ತು ಎಂದು ಜನ ತಲೆ ಕೆಡಿಸಿಕೊಂಡಿದ್ದಾರೆ.

ಬೆಂಗಳೂರು, ದೆಹಲಿ ಸೇರಿದಂತೆ ಭಾರತದ ಬಹುತೇಕ ಕಡೆಗಳಲ್ಲಿ ಜನ ಈ ಸಮಸ್ಯೆ ಎದುರಿಸಿದ್ದಾರೆ. ಹ್ಯಾಕ್ ಆಗಿರಬಹುದೇ ಎಂದು ಆತಂಕದಿಂದ ಕೆಲವರು ಚೆಕ್ ಮಾಡಿದ್ದಾರೆ. ಸರ್ವರ್ ಡೌನ್ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿರಬಹುದೆಂದು ಹೇಳಲಾಗುತ್ತಿದೆ.

Share Post