NationalPolitics

ಭಾರತ ದೇಶವಲ್ಲ, ಮೂರ್ಖರಿಗೆ ಮಾತ್ರ ಜೈ ಶ್ರೀರಾಮ್‌ ಘೋಷಣೆ; ವಿವಾದ ಸೃಷ್ಟಿಸಿದ ಎ.ರಾಜಾ

ಚೆನ್ನೈ; ಭಾರತ ದೇಶವಲ್ಲವಂತೆ, ಶ್ರೀರಾಮನಿಗೆ ಶತ್ರುಗಳಂತೆ.. ಹೀಗಂತ ಹೇಳಿದವರು ಬೇರೆ ಯಾರೂ ಅಲ್ಲ, ಕೇಂದ್ರದ ಮಾಜಿ ಸಚಿವ ಹಾಗೂ ಡಿಎಂಕೆ ಸಂಸದ ಎ.ರಾಜಾ. ಸದಾ ಸನಾತನ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡುತ್ತಾ ಬಂದಿರುವ ಡಿಎಂಕೆ ನಾಯಕರು ಈಗ ಮತ್ತೆ ವಿವಾದಲ್ಲಿ ಸಿಲುಕಿದ್ದಾರೆ. ಡಿಎಂಕೆ ನಾಯಕರಲ್ಲಿ ಒಬ್ಬರಾದ ಎ.ರಾಜಾ ಅವರು ಭಾಷಣವೊಂದರಲ್ಲಿ ನಾಲಿಗೆ ಹರಿಬಿಟ್ಟಿದ್ದು, ದೇಶ ಹಾಗೂ ಶ್ರೀರಾಮನ ಬಗ್ಗೆ ಮಾತನಾಡಿದ್ದಾರೆ. ಭಾರತ ಒಂದು ದೇಶವೇ ಅಲ್ಲ ಎಂದು ಅವರು ಹೇಳಿದ್ದು, ಈ ಹೇಳಿಕೆ ಭಾರಿ ವಿವಾದವನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ; ಪಾಕಿಸ್ತಾನ ಮಹಿಳೆ ಸೀಮಾ ಹೈದರ್‌ ವಿರುದ್ಧ 3 ಕೋಟಿ ಮಾನನಷ್ಟ ಮೊಕದ್ದಮೆ

ಜೈ ಶ್ರೀರಾಮ್‌, ಭಾರತ್‌ ಮಾತಾಕಿ ಜೈ ಘೋಷಣೆ ಒಪ್ಪಲ್ಲ;

ಜೈ ಶ್ರೀರಾಮ್‌, ಭಾರತ್‌ ಮಾತಾಕಿ ಜೈ ಘೋಷಣೆ ಒಪ್ಪಲ್ಲ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಭಾಷಣ ಮಾಡಿರುವ ಎ.ರಾಜಾ, ನಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ,  ಜೈ ಶ್ರೀರಾಮ್‌ ಘೋಷಣೆಯನ್ನು ನಾವು ಒಪ್ಪೋದಿಲ್ಲ ಎಂದಿದ್ದಾರೆ. ನಾವು ಶ್ರೀರಾಮನ ಶತ್ರುಗಳು ಎಂದಿರುವ ಎ.ರಾಜಾ, ಭಾರತ್‌ ಮಾತಾಕಿ ಜೈ ಎಂಬ ಘೋಷಣೆಯನ್ನೂ ನಾನು ಒಪ್ಪೋದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಹಲವು ಬಾರಿ ಸನಾತನ ಧರ್ಮದ ವಿರುದ್ಧ ಮಾತನಾಡಿದ್ದ ಎ.ರಾಜಾ, ಈಗ ದೇಶದ ವಿರುದ್ಧವೇ ಮಾತನಾಡಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿಯ ರಾಮ ಅಹಸ್ಯಕರ ಎಂದ ಎ.ರಾಜಾ;

ಬಿಜೆಪಿಯ ರಾಮ ಅಹಸ್ಯಕರ ಎಂದ ಎ.ರಾಜಾ; ಬಿಜೆಪಿ ಪಕ್ಷದ ರಾಮ ಅಸಹ್ಯಕರ ಎಂದು ಎ.ರಾಜಾ ಹೇಳಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಭಾಷಣದಲ್ಲಿ ರಾಮ ಮಂದಿರದ ಬಗ್ಗೆ ಮಾತನಾಡಿರುವ ಅವರು, ನಮ್ಮ ರಾಮ ಜಾತಿ-ಧರ್ಮ ನೋಡೋದಿಲ್ಲ. ಆದ್ರೆ ಬಿಜೆಪಿ ರಾಮ ಮಾತ್ರ ಅಸಹ್ಯಕರ, ತಮಿಳುನಾಡಿನ ಜನ ಬಿಜೆಪಿಯ ರಾಮನನ್ನು ಎಂದಿಗೂ ಒಪ್ಪೋದಿಲ್ಲ ಎಂದು ಎ.ರಾಜಾ ಹೇಳಿದ್ದಾರೆ. ತಮಿಳುನಾಡಿನ ಜನ ಎಂದಿಗೂ ರಾಮಾಯಣದ ಮೇಲೆ ನಂಬಿಕೆ ಇಟ್ಟಿಲ್ಲ. ಮೂರ್ಖರಿಗೆ ಮಾತ್ರ ಜೈಶ್ರೀರಾಮ್‌ ಘೋಷಣೆ ಎಂದೂ ಹೇಳಿದ್ದಾರೆ. ಎ.ರಾಜಾ ಅವರ ಈ ಮಾತುಗಳ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಎ.ರಾಜಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ; 2022ರಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್;‌ ಸೇಡಿನ ರಾಜಕಾರಣ ಆರೋಪ!

ಭಾರತ ದೇಶವೇ ಅಲ್ಲ ಎಂದಿರುವ ಡಿಎಂಕೆ ನಾಯಕ;

ಭಾರತ ದೇಶವೇ ಅಲ್ಲ ಎಂದಿರುವ ಡಿಎಂಕೆ ನಾಯಕ; ರಾಮಾಯಣ ಒಂದು ಕಡೆಯಾದರೆ ಭಾರತ ದೇಶದ ಬಗ್ಗೆಯೂ ಎ.ರಾಜಾ ಮಾತನಾಡಿದ್ದಾರೆ. ಅವರ ಪ್ರಕಾರ ಭಾರತ ಒಂದು ದೇಶವೇ ಅಲ್ಲವಂತೆ. ಭಾರತವನ್ನು ಒಂದು ಉಪಖಂಡ ಎಂದು ಎ.ರಾಜಾ ಕರೆದಿದ್ದಾರೆ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ಒಂದು ರಾಷ್ಟ್ರವಾಗುತ್ತದೆ. ಆದ್ರೆ, ಭಾರತದಲ್ಲಿ ನಾನಾ ಭಾಷೆಗಳಿವೆ, ನಾನಾ ಸಂಸ್ಕೃತಿಗಳಿವೆ. ಹೀಗಾಗಿ ಭಾರತ ದೇಶವಲ್ಲ ಒಂದು ಉಪಖಂಡ. ತಮಿಳುನಾಡೇ ಒಂದು ದೇಶ, ಕೇರಳನೇ ಒಂದು ದೇಶ, ಒಡಿಶಾನೇ ಒಂದು ದೇಶ. ಇಡೀ ಭಾರತ ಒಂದು ಉಪಖಂಡ ಎಂದು ಎ.ರಾಜಾ ಹೇಳಿದ್ದಾರೆ. ಅವರ ಈ ವ್ಯಾಖ್ಯಾನ ಕೂಡಾ ಹಲವರನ್ನು ಕೆರಳಿಸಿದೆ.

ಈ ಹಿಂದೆಯೂ ಹಿಂದೂ ಧರ್ಮದ ವಿರುದ್ಧ ಮಾತು;

ಈ ಹಿಂದೆಯೂ ಹಿಂದೂ ಧರ್ಮದ ವಿರುದ್ಧ ಮಾತು; ಡಿಎಂಕೆ ನಾಯಕ ಎ.ರಾಜಾ ಅವರು ಈ ಹಿಂದೆ ಕೂಡಾ ಹಿಂದೂ ಧರ್ಮದ ವಿರುದ್ಧ ಮಾತನಾಡಿದ್ದರು. ಸನಾತನ ಧರ್ಮವನ್ನು ಹೆಚ್‌ಐವಿ, ಕುಷ್ಠರೋಗಕ್ಕೆ ಹೋಲಿಸಿ ಏನೇನೋ ಮಾತನಾಡಿದ್ದರು.. ಇದು ದೇಶಾದ್ಯಂತ ದೊಡ್ಡ ಚರ್ಚೆಯಾಗಿತ್ತು. ಎ.ರಾಜಾ ವಿರುದ್ಧ ಹೋರಾಟಗಳು ನಡೆದಿದ್ದವು. ಇದೀಗ ಮತ್ತೆ ಎ.ರಾಜಾ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ.. ಈ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ; ಲೋಕಸಭಾ ಚುನಾವಣೆ; ರಾಜ್ಯದ 28 ಕ್ಷೇತ್ರಗಳಿಗೆ ಬಿಜೆಪಿ ಸಂಭಾವ್ಯರ ಪಟ್ಟಿ ಸಿದ್ಧ; ಇವರೇನಾ ಅಭ್ಯರ್ಥಿಗಳು..?

 

Share Post