ಕತ್ತಿಹಿಡಿದು ಮಾಜಿ ಮೇಯರ್ ಪುತ್ರನ ಗೂಂಡಾ ವರ್ತನೆ; ಯುವಕನ ಮೇಲೆ ಮಾರಣಾಂತಿಕ ಹಲ್ಲೆ!
ಬಳ್ಳಾರಿ; ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಪ್ರಭಾವಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳುವಾಗ ಗೂಂಡಾ ವರ್ತನೆ ತೋರುವುದು, ಮಚ್ಚು-ಲಾಂಗು ಪ್ರದರ್ಶನ ಮಾಡುವ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಇನ್ನೂ ಕೆಲವರು ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸುವವರೂ ಇದ್ದಾರೆ.. ಇಂತಹದ್ದೇ ಒಂದು ಘಟನೆ ಬಳ್ಳಾರಿಯಲ್ಲಿ ನಡೆದಿದೆ. ರಸ್ತೆಯಲ್ಲಿ ರಾಜಕಾರಣಿಯ ಮಗನೊಬ್ಬ ವಿಜೃಂಬಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಮಚ್ಚು ಹಿಡಿದು ಝಳಪಿಸಿದ್ದಾನೆ. ಈ ವೇಳೆ ಪ್ರಶ್ನೆ ಮಾಡಿದ ಯುವಕನಿಗೆ ಮಾರಣಾಂತಿಕ ಹಲ್ಲೆ ಕೂಡಾ ಮಾಡಲಾಗಿದೆ.
ಇದನ್ನೂ ಓದಿ; ಭಾರತ ದೇಶವಲ್ಲ, ಮೂರ್ಖರಿಗೆ ಮಾತ್ರ ಜೈ ಶ್ರೀರಾಮ್ ಘೋಷಣೆ; ವಿವಾದ ಸೃಷ್ಟಿಸಿದ ಎ.ರಾಜಾ
ಜಾಗ ಬಿಡಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ;
ಜಾಗ ಬಿಡಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ; ಬಳ್ಳಾರಿಯ ಮಾಜಿ ಮೇಯರ್ ಮಗ ರಘು ಎಂಬಾತ ನಿನ್ನೆ ಹುಟ್ಟುಹಬ್ಬವನ್ನು ವಿಜೃಂಬಣೆಯಿಂದ ಆಚರಿಸಿಕೊಂಡಿದ್ದಾನೆ. ರಸ್ತೆಯಲ್ಲಿ ಡಿಕೆ ಹಾಕಿಕೊಂಡು, ತಲ್ವಾರ್ ಝಳಪಿಸುತ್ತಾ ಸಂಭ್ರಮಿಸಿದ್ದಾರೆ. ತಲವಾರ್ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲೇ ಯುವಕನೊಬ್ಬ ಬಂದಿದ್ದಾರೆ. ರಸ್ತೆಗೆ ಅಡ್ಡಲಾಗಿ ಡ್ಯಾನ್ಸ್ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ದಾರಿ ಬಿಡುವಂತೆ ಆಗ್ರಹ ಮಾಡಿದ್ದಾನೆ. ಇದರಿಂದ ಕೆರಳಿದ ರಘು ಹಾಗೂ ಆತನ ಸ್ನೇಹಿತರ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರಂತೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತಿಪ್ಪೇಸ್ವಾಮಿ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿತ;
ತಿಪ್ಪೇಸ್ವಾಮಿ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿತ; ರಾತ್ರಿ ವೇಳೆ ನೂರಾರು ಜನ ಸೇರಿದ್ದು, ರಸ್ತೆಯಲ್ಲೇ ಡಿಜೆ ಹಾಕಿ ಕುಣಿಯುತ್ತಿದ್ದರು. ಇದರಿಂದಾಗಿ ಜನರ ಓಡಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ತಿಪ್ಪೇಸ್ವಾಮಿ ಎಂಬ ಯುವಕ ಇದನ್ನು ಪ್ರಶ್ನೆ ಮಾಡಿದ್ದಾನೆ. ಜನರ ಓಡಾಟಕ್ಕೆ ದಾರಿ ಮಾಡಿಕೊಡಿ ಎಂದು ಹೇಳಿದ್ದಾನೆ. ಇದರಿಂದಾಗಿ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವವರು ಕೆರಳಿದ್ದಾರ. ದೊಣ್ಣೆಯಿಂದ ಆತನ ಮೇಲೆ ದಾಳಿ ಮಾಡಿದ್ದಾರೆ. ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದಾಗಿ ತಿಪ್ಪೇಸ್ವಾಮಿಯವರ ತಲೆ ಹಾಗೂ ದೇಹದ ಹಲವು ಭಾಗಕ್ಕೆ ಗಾಯಗಳಾಗಿವೆ.
ಇದನ್ನೂ ಓದಿ; ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ವಿರುದ್ಧ 3 ಕೋಟಿ ಮಾನನಷ್ಟ ಮೊಕದ್ದಮೆ
ಏಳು ಮಂದಿಯನ್ನು ಬಂಧಿಸಿದ ಪೊಲೀಸರು;
ಏಳು ಮಂದಿಯನ್ನು ಬಂಧಿಸಿದ ಪೊಲೀಸರು; ತಿಪ್ಪೇಸ್ವಾಮಿಗೆ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಆತನಿಗೆ ಗಂಭೀರ ಗಾಯಗಳಾಗಿವೆ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಒಟ್ಟು ಏಳು ಮಂದಿಯನ್ನು ಬಂಧಿಸಿದ್ದಾರೆ. ಒಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪ್ರಮುಖ ಆರೋಪಿ ರಘು ಸೇರಿ ಏಳು ಮಂದಿಯ ಬಂಧನವಾಗಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; 2022ರಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್; ಸೇಡಿನ ರಾಜಕಾರಣ ಆರೋಪ!