Kumaraswamy; ಕುಮಾರಸ್ವಾಮಿ ಈ 6 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ತಾರಂತೆ!
ಬೆಂಗಳೂರು; ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಜೋರಾಗಿ ನಡೆದಿವೆ. ಅದ್ರಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡ ಮೇಲೆ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ಬೇರೆಯದೇ ರೀತಿ ಇವೆ. ಮಾಜಿ ಸಿಎಂ ಕುಮಾರಸ್ವಾಮಿಯವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂತ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತ್ತಷ್ಟು ಲಾಭವಾಗುತ್ತೆ ಅನ್ನೋ ಲೆಕ್ಕಾಚಾರ ಬಿಜೆಪಿಗಿರುವಂತಿದೆ. ಹೀಗಿರುವಾಗಲೇ ಕುಮಾರಸ್ವಾಮಿಯವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ಸಮೀಕ್ಷೆ ನಡೆದಿದೆಯಂತೆ. ಈ ಸಮೀಕ್ಷೆಯಲ್ಲಿ ಆರು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಎಲ್ಲಿ ನಿಂತರೂ ಗೆಲುವು ಪಕ್ಕಾ ಎಂಬ ವರದಿ ಸಿಕ್ಕಿದೆಯಂತೆ.. ಈ ಸಮೀಕ್ಷೆಯನ್ನು ದೃಢಪಡಿಸುವವರು ಯಾರೂ ಇಲ್ಲದಿದ್ದರೂ, ಈ ಬಗ್ಗೆ ಮಾಹಿತಿಯಂತೂ ಹರಿದಾಡುತ್ತಿದೆ.
ಇದನ್ನೂ ಓದಿ; Amith Sha; ಇಂದು ಮೈಸೂರಿಗೆ ಅಮಿತ್ ಶಾ, ನಾಳೆ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ!
ಯಾವ ಕ್ಷೇತ್ರ ಕುಮಾರಸ್ವಾಮಿಗೆ ಸುಲಭವಾಗುತ್ತದೆ..?
ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಸಿ, ಅವರನ್ನು ಕೇಂದ್ರ ಮಂತ್ರಿ ಮಾಡಬೇಕೆಂಬ ಆಸೆ ಬಿಜೆಪಿ ನಾಯಕರಿಗಿದೆಯಂತೆ. ಕುಮಾರಸ್ವಾಮಿಯವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಒಕ್ಕಲಿಗರ ಪ್ರಾಬಲ್ಯವಿರುವ ಸುತ್ತಮುತ್ತಲ ಕ್ಷೇತ್ರಗಳಾದ ಮಂಡ್ಯ-ಕೊಡಗು, ಚಿಕ್ಕಮಗಳೂರು, ತುಮಕೂರು ಮುಂತಾದ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಅನ್ನೋ ಲೆಕ್ಕಾಚಾರ ಬಿಜೆಪಿ ನಾಯಕರದ್ದು. ಹೀಗಿರುವಾಗಲೇ ಕುಮಾರಸ್ವಾಮಿಯವರು ಎಲ್ಲಿ ನಿಂತರೆ ಒಳ್ಳೆಯದು ಎಂಬುದರ ಬಗ್ಗೆ ಸಮೀಕ್ಷೆ ನಡೆದಿದೆಯಂತೆ. ಗುಪ್ತ ಸಮೀಕ್ಷೆ ಪ್ರಕಾರ, ಕುಮಾರಸ್ವಾಮಿಯವರು, ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಅತ್ಯಂತ ಸುಲಭವಾಗಿ ಗೆಲ್ಲುತ್ತಾರೆ. ಇದಲ್ಲದೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಹಾಸನ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲುವು ಖಚಿತ ಎಂದು ಸಮೀಕ್ಷೆ ಹೇಳುತ್ತಿದೆಯಂತೆ.
ಇದನ್ನೂ ಓದಿ; ED Raids; ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್‌ರೆಡ್ಡಿ ಮನೆ ಮೇಲೆ ಇಡಿ ದಾಳಿ
ಹಾಸನಕ್ಕೆ ಪ್ರಜ್ವಲ್ ರೇವಣ್ಣ ಫಿಕ್ಸ್;
ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಇದ್ದಾರೆ. ಈ ಬಾರಿ ಅವರಿಗೇ ಜೆಡಿಎಸ್ ಟಿಕೆಟ್ ಸಿಗೋದು ಪಕ್ಕಾ. ಯಾಕಂದ್ರೆ, ಮಾಜಿ ಪ್ರಧಾನಿ ದೇವೇಗೌಡರೇ ಇದನ್ನು ಬಹಿರಂಗವಾಗಿ ಹೇಳಿಬಿಟ್ಟಿದ್ದಾರೆ. ಉಳಿದಂತೆ ನಿಖಿಲ್ ಕುಮಾರಸ್ವಾಮಿ ಕೂಡಾ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡೋ ಚಾನ್ಸಸ್ ಇದೆ ಎನ್ನಲಾಗ್ತಿದೆ. ಮಂಡ್ಯ ಕ್ಷೇತ್ರವಾದರೆ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು. ಸೋತ ಸ್ಥಳದಲ್ಲಿ ಗೆದ್ದು ತೋರಿಸಬೇಕು ಎಂಬ ಛಲ ನಿಖಿಲ್ ಕುಮಾರಸ್ವಾಮಿಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; Pakistan Election; ಗೆಲುವು ಇಮ್ರಾನ್ ಖಾನ್ ಅವರದ್ದಾ, ನವಾಜ್ ಷರೀಫ್ ಅವರದ್ದಾ..?
ಜೆಡಿಎಸ್‌ಗೆ 4 ಕ್ಷೇತ್ರ ಬಿಟ್ಟುಕೊಡುವ ಸಾಧ್ಯತೆ;
ಜೆಡಿಎಸ್ ನಾಯಕರು ಆರು ಕೇತ್ರಗಳನ್ನು ಕೇಳುತ್ತಿದ್ದಾರೆ. ಆದ್ರೆ ಬಿಜೆಪಿಯವರು ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡುವ ಸಾಧ್ಯತೆ ಇದೆ. ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳು ಜೆಡಿಎಸ್ ತೆಕ್ಕೆಗೆ ಬರಬಹುದು ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ. ಇನ್ನು ನಿಖಿಲ್ ಪಟ್ಟು ಹಿಡಿದರೆ ಮಂಡ್ಯದಿಂದ ಅವರಿಗೆ ಟಿಕೆಟ್ ಕೊಡಬಹುದು. ಇನ್ನು ಕುಮಾರಸ್ವಾಮಿಯವರು ಲೋಕಸಭೆಗೆ ಸ್ಪರ್ಧೆ ಮಾಡಿ, ಕೇಂದ್ರ ಸಚಿವರಾಗಬೇಕೆಂಬ ಆಸೆ ಇದ್ದರೆ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಬಹುದು. ಆದ್ರೆ ಈ ಯೋಚನೆ ಅವರಿಗೆ ಇನ್ನೂ ಬಂದಿಲ್ಲದಿರಬಹುದಾದರೂ, ಅವಕಾಶವಂತೂ ಇದ್ದೇ ಇದೆ. ಯಾಕಂದ್ರೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಸೋತಿದ್ದರು. ಇನ್ನೊಂದೆಡೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಸೋತಿದ್ದರು. ಇಬ್ಬರೂ ಮತ್ತದೇ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ, ಸೋತ ಸ್ಥಳದಲ್ಲೀಯೇ ಗೆದ್ದು ಬೀಗುವುದಕ್ಕೆ ಅವಕಾಶವಿದೆ. ಇನ್ನು ಕೋಲಾರದಲ್ಲಿ ಮುಳಬಾಗಿಲು ಶಾಸಕನನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸುಮಲತಾಗೆ ಮಂಡ್ಯ ಕ್ಷೇತ್ರ ಕೊಟ್ಟರೆ, ಕುಮಾರಸ್ವಾಮಿಗೆ ಬೆಂಗಳೂರು ಉತ್ತರ
ಸುಮಲತಾ ಅವರು ಕೇಂದ್ರದಲ್ಲಿ ಲಾಬಿ ಮಾಡುತ್ತಿದ್ದಾರೆ. ಕೊಟ್ಟರೆ ನನಗೆ ಮಂಡ್ಯ ಕ್ಷೇತ್ರವನ್ನೇ ಕೊಡಿ ಎಂದು ಕೇಳುತ್ತಿದ್ದಾರೆ. ಒಂದು ವೇಳೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ ಹೋದರೆ ಅಲ್ಲಿ ಸುಮಲತಾ ಅವರಿಗೇ ಟಿಕೆಟ್ ಸಿಗಬಹುದು. ಹಾಗೇನಾದರೂ ಆದರೆ ಕುಮಾರಸ್ವಾಮಿಯವರ ಮನವೊಲಿಸಿ, ಅವರನ್ನು ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡುವಂತೆ ಮನವೊಲಿಸಬಹುದು. ಬೆಂಗಳೂರು ನಗರದಲ್ಲಿ ಜೆಡಿಎಸ್ ಪ್ರಾಬಲ್ಯ ಅಷ್ಟೊಂದಿಲ್ಲ. ಹೀಗಾಗಿ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡಿ, ಬೆಂಗಳೂರು ನಗರದಲ್ಲಿ ಜೆಡಿಎಸ್ ಬಲಪಡಿಸಲು ಕುಮಾರಸ್ವಾಮಿಗೆ ಸಹಕಾರಿಯಾಗುತ್ತದೆ. ಅದೇ ಲೆಕ್ಕಾಚಾರ ಕುಮಾರಸ್ವಾಮಿ ಮಾಡಿದರೆ, ಬೆಂಗಳೂರು ಉತ್ತರಕ್ಕೆ ಓಕೆ ಎನ್ನಲೂಬಹುದು.