InternationalPolitics

Pakistan Election; ಗೆಲುವು ಇಮ್ರಾನ್‌ ಖಾನ್‌ ಅವರದ್ದಾ, ನವಾಜ್‌ ಷರೀಫ್‌ ಅವರದ್ದಾ..?

ಕರಾಚಿ; ಗಲಭೆಗಳು, ಗಲಾಟೆಗಳು, ಕೊಲೆಗಳು, ಅರಾಜಕತೆಯ ನಡುವೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಮುಗಿದಿದೆ. ಫಲಿತಾಂಶವೂ ಪ್ರಕಟವಾಗಿದೆ. ಯಾರಿಗೂ ಕೂಡಾ ಸ್ಪಷ್ಟ ಬಹುಮತ ಬಂದಿಲ್ಲ. ಆದ್ರೆ, ನವಾಜ್‌ ಷರೀಫ್‌ ಅವರು ನಮ್ಮ ಪಕ್ಷದ್ದೇ ಗೆಲುವು, ನಾವೇ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಜೈಲಿನಲ್ಲಿರುವ ಇಮ್ರಾನ್‌ ಖಾನ್‌ ಅವರು ನಮ್ಮದೇ ಅತಿದೊಡ್ಡ ಗೆಲುವು. ನಮ್ಮದೇ ಸರ್ಕಾರ ಎನ್ನುತ್ತಿದ್ದಾರೆ. ಆದ್ರೆ ಯಾರು ಅಧಿಕಾರ ಮಾಡುತ್ತಾರೋ ಗೊತ್ತಿಲ್ಲ. ಆದ್ರೆ ಇಮ್ರಾನ್‌ ಖಾನ್‌ ಅವರು ತಮ್ಮ ಪಕ್ಷದ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅವಕಾಶ ಸಿಗದಿದ್ದರಿಂದ ಪಕ್ಷೇತರರನ್ನಾಗಿ ನಿಲ್ಲಿಸಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಂಡಿದ್ದಾರೆ.. ಹೀಗಾಗಿ, ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋದೇ ಕುತೂಹಲ..

ಇದನ್ನೂ ಓದಿ; Cheating; ನಿರ್ಮಲಾ ಸೀತಾರಾಮನ್‌ ಹೆಸರೇಳಿಕೊಂಡ ವಂಚನೆ; ಲೋನ್‌ ಕೊಡಿಸ್ತೀನಿ ಅಂತ ಕೋಟಿ ಕೋಟಿ ಲೂಟಿ!

98 ಸ್ಥಾನಗಳಲ್ಲಿ ಇಮ್ರಾನ್‌ ಖಾನ್‌ ಬೆಂಬಲಿತರ ಗೆಲುವು!

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ವಿವಿಧ ಪ್ರಕರಣಗಳಲ್ಲಿ ಶಿಕ್ಷೆಯಾಗಿ ಜೈಲು ಸೇರಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು. ಅಂದರೆ ತಮ್ಮ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)ಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಹೀಗಾಗಿ ಇಮ್ರಾನ್‌ ಖಾನ್‌ ಅವರು ತಮ್ಮ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ನಿಲ್ಲಿಸಿದ್ದರು.

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಬೆಂಬಲಿತರು 98 ಸ್ಥಾನಗಳಲ್ಲಿ ಗೆದ್ದಿದ್ದು,  ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್)-ಪಿಎಂಎಲ್-ಎನ್ 69 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನೊಂದೆಡೆ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 51 ಸ್ಥಾನಗಳನ್ನು ಪಡೆದಿದೆ.

ಇದನ್ನೂ ಓದಿ; Rashi Phala; ಇಂದಿನ ರಾಶಿಫಲ ಹೇಗಿದೆ..?; ಈ ರಾಶಿಯವರಿಗೆ ಇವತ್ತು ಬಂಪರ್‌!

ಸರಳ ಬಹುಮತಕ್ಕೆ 133 ಸ್ಥಾನ ಬೇಕು..!

ಪಾಕಿಸ್ತಾನ ಸಂಸತ್ತಿನಲ್ಲಿ 336 ಸ್ಥಾನಗಳಿವೆ. ಇದರಲ್ಲಿ 266 ಜನಪ್ರತಿನಿಧಿಗಳು ನೇರವಾಗಿ ಜನರಿಂದ ಆಯ್ಕೆಯಾದರೆ, ಉಳಿದ 70 ಸ್ಥಾನಗಳಿಗೆ ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಸದ್ಯ 265 ಸ್ಥಾನಗಳಿಗೆ ಮತದಾನ ನಡೆದಿತ್ತು. ಒಂದು ಕ್ಷೇತ್ರದಲ್ಲಿ ಮತದಾನಕ್ಕೆ ಮೊದಲೇ ಅಭ್ಯರ್ಥಿಯೊಬ್ಬರು ಮೃತಪಟ್ಟಿದ್ದರಿಂದ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ.

ಅಂದಹಾಗೆ, ಪಾಕಿಸ್ತಾನದಲ್ಲಿ ಸರ್ಕಾರ ರಚನೆ ಮಾಡಲು 133 ಸ್ಥಾನಗಳು ಬೇಕು. ಆದ್ರೆ ಘೋಷಣೆಯಾದ 260 ಸ್ಥಾನಗಳ ಫಲಿತಾಂಶದಲ್ಲಿ ಇಮ್ರಾನ್ ಬೆಂಬಲಿತ ಅಭ್ಯರ್ಥಿಗಳು 98 ಸ್ಥಾನಗಳಲ್ಲಿ ಗೆದ್ದಿದ್ದಾರೆ, ನವಾಜ್‌ ಷರೀಫ್‌ ಅವರ ಪಿಎಂಎಲ್-ಎನ್ 69 ಸ್ಥಾನಗಳನ್ನು ಗೆದ್ದರೆ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 51 ಸ್ಥಾನಗಳಲ್ಲಿ ಜಯ ಸಾಧಿಸಿದೆ.  ಇತರ ಸಣ್ಣ ಪಕ್ಷಗಳು 20 ಸ್ಥಾನಗಳನ್ನು ಗೆದ್ದುಕೊಂಡಿವೆ. ಹೀಗಾಗಿ ಯಾರೇ ಸರ್ಕಾರ ರಚನೆ ಮಾಡಬೇಕೆಂದರೆ ಪಿಪಿಪಿ ಹಾಗೂ ಇತರೆ ಪಕ್ಷಗಳ ಬೆಂಬಲ ಪಡೆಯಲೇಬೇಕಾಗುತ್ತದೆ.

ಇದನ್ನೂ ಓದಿ; Sumalatha; ಸುಮಲತಾಗೆ ಟಿಕೆಟ್‌ ಭರವಸೆ ಕೊಟ್ಟರಾ ಪ್ರಧಾನಿ ಮೋದಿ?

ಇಮ್ರಾನ್‌ ಖಾನ್‌ಗೆ ನಿಷೇಧ ಹೇರಿದ್ದ ಚುನಾವಣಾ ಆಯೋಗ

ಪಾಕಿಸ್ತಾನ ಚುನಾವಣಾ ಆಯೋಗ ಇಮ್ರಾನ್ ಖಾನ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿತ್ತು. ಪಿಟಿಐನ ಚುನಾವಣಾ ಚಿಹ್ನೆ ಬ್ಯಾಟ್ ಅನ್ನು ಕೂಡಾ ರದ್ದುಗೊಳಿಸಿತ್ತು. ಇದರಿಂದ ಪಿಟಿಐ ಪರವಾಗದ ಅಭ್ಯರ್ಥಿಗಳು ನೇರವಾಗಿ ಸ್ಪರ್ಧಿಸುವ ಬದಲು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಆದರೆ, ಕಿರಿಯ ಮತದಾರರು ಇಮ್ರಾನ್ ಅವರ ಬಲಿಷ್ಠ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಜೈಲಿನಲ್ಲಿರುವ ಕಾರಣ ಇಮ್ರಾನ್ ನೇರವಾಗಿ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ. ಸಾಮಾಜಿಕ ಮಾಧ್ಯಮ ಮತ್ತು AI ನಂತಹ ತಂತ್ರಜ್ಞಾನದ ಸಹಾಯದಿಂದ ಅಭಿಯಾನವನ್ನು ನಡೆಸಲಾಯಿತು. ಆದರೆ, ಈ ಪ್ರಯತ್ನಗಳಿಗೂ ಅಡ್ಡಿಯಾಯಿತು.

ಇದನ್ನೂ ಓದಿ; King Charls-3; ಬ್ರಿಟೀಷ್‌ ಕಿಂಗ್ ಚಾರ್ಲ್ಸ್ -3ಗೆ ಕ್ಯಾನ್ಸರ್‌; ಈಗ ಅವರ ಸ್ಥಿತಿ ಹೇಗಿದೆ..?

ಪಿಪಿಪಿ ಬೆಂಬಲ ಪಡೆಯುತ್ತಾರಾ ನವಾಜ್‌ ಷರೀಫ್‌..?

ಮತ್ತೊಂದೆಡೆ, ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಬಯಸಿರುವ ನವಾಜ್ ಷರೀಫ್ ಅವರು ಪಿಪಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಆದೇಶದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಷರೀಫ್ ಕರೆ ನೀಡಿದ್ದಾರೆ. ಮತ್ತೊಂದೆಡೆ, ಪಿಟಿಐ ಯಾರನ್ನೂ ಭೇಟಿ ಮಾಡುವುದಿಲ್ಲ ಮತ್ತು ಸ್ವಂತವಾಗಿ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ನವಾಜ್ ಷರೀಫ್ ಒಂದು ಸ್ಥಾನ ಮಾತ್ರ ಗೆದ್ದಿದ್ದಾರೆ. ಲಾಹೋರ್‌ನಿಂದ ಗೆದ್ದು ಮನ್ಸೆಹರಾದಲ್ಲಿ ಸೋತರು.

ಇದನ್ನೂ ಓದಿ; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದಂಪತಿಗೆ 14 ವರ್ಷ ಜೈಲು ಶಿಕ್ಷೆ!

Share Post