Politics

ಬೈಕ್ ಮೇಲೆ ಹರಿದ ಲಾರಿ; ಲಾರಿ ಡೋರ್ ಹಿಡಿದು ಪಾರಾದ ಸವಾರ

ಹೈದರಾಬಾದ್; ಲಾರಿಯೊಂದು ಬೈಕ್ ಮೇಲೆ ಹರಿದಿದ್ದು ಈ ವೇಳೆ ಬೈಕ್ ಸವಾರ ತಪ್ಪಿಸಿಕೊಂಡು ಲಾರಿಗೆ ನೇತಾಡಿ ಪ್ರಾಣ ಉಳಿಸಿಕೊಂಡಿದ್ದಾನೆ. ಕ್ಷಣಾರ್ಧದಲ್ಲಿ ಬೈಕ್ ಸವಾರ ಪ್ರಾಣ ಕಾಪಾಡಿಕೊಂಡಿದ್ದಾನೆ. ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

   ಹತ್ತು ಚಕ್ರದ ಲಾರಿ ಬೈಕ್ ಮೇಲೆ ಹರಿದಿದ್ದು, ಬೈಕ್ ಅನ್ನು ಒಂದಷ್ಟು ದೂರ ಎಳೆದೊಯ್ದಿದೆ. ಈ ವೇಳೆ ಬೈಕ್ ಸವಾರ ಲಾರಿಯ ಕನ್ನಡಿ ಹಿಡಿದುಕೊಂಡು ಫುಟ್ ಬೋರ್ಡ್ ಮೇಲೆ ನಿಂತಿದ್ದಾನೆ. ಇದರಿಂದಾಗಿ ಬೈಕ್ ಸವಾರ ಪಾರಾಗಿದ್ದಾನೆ.

  ಬೈಕ್ ಎಳೆದೊಯ್ಯುವಾಗ ಬೆಂಕಿ ಕಾಣಿಸಿಕೊಂಡಿದೆ. ಇತ್ತ ಲಾರಿಯ ಬಾಗಿಲು ಹಿಡಿದು ನಿಂತ ಸವಾರ ಕೂಗಿಕೊಳ್ಳುತ್ತಿದ್ದರೂ ಲಾರಿ ಮಾತ್ರ ವೇಗವಾಗಿಯೇ ಚಲಿಸಿದೆ. ಕೊನೆಗೂ ಬೈಕ್ ಸವಾರ ಪಾರಾಗಿದ್ದಾನೆ. ಆದ್ರೆ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.

 

Share Post