Siddramaiah; ರಾಜ್ಯಕ್ಕೆ ಬರುವ ಮೊದಲು ನಮ್ಮ ಪ್ರಶ್ನೆಗೆ ಉತ್ತರಿಸ್ತೀರಾ ಅಮಿತ್ ಶಾ..?
ಬೆಂಗಳೂರು; ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೈಸೂರಿಗೆ ಆಗಮಿಸಿದ್ದಾರೆ. ನಾಳೆ ಅವರು ಮೈಸೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಲೋಕಸಭಾ ಸೀಟು ಹಂಚಿಕೆ ಕುರಿತಂತೆ ಜೆಡಿಎಸ್ ನಾಯಕರ ಜೊತೆ ಮಾತನಾಡಿದ್ದಾರೆ. ಜೊತೆಗೆ ಬಿಜೆಪಿ ಟಿಕೆಟ್ ಹಂಚಿಕೆ ಬಗ್ಗೆಯೂ ಚರ್ಚೆ ನಡೆಯಲಿದೆ. ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು, ನೀವು ರಾಜ್ಯಕ್ಕೆ ಕಾಲಿಡುವ ಮೊದಲು ನಮ್ಮ ಪಶ್ನೆಗಳಿಗೆ ಉತ್ತರ ಕೊಡಿ ಗೃಹ ಸಚಿವರೇ ಎಂದು ಕೇಳಿದ್ದಾರೆ.
ಇದನ್ನೂ ಓದಿ; Amith Sha; ಇಂದು ಮೈಸೂರಿಗೆ ಅಮಿತ್ ಶಾ, ನಾಳೆ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ!
ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಪೋಸ್ಟ್;
ನಾವು ರಾಜ್ಯದ ಬರ ಪರಿಹಾರಕ್ಕೆ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳೇ ಕಳೆದುಬಿಟ್ಟಿದೆ. ಕೇಂದ್ರದ ತಜ್ಞರ ತಂಡ ರಾಜ್ಯಕ್ಕೆ ಬಂದು ಬರ ಸಮೀಕ್ಷೆ ನಡೆಸಿದ್ದಾರೆ. ವರದಿ ಕೂಡಾ ನೀಡಿದ್ದಾರೆ. ಗೃಹ ಸಚಿವರು ಉನ್ನತಾಧಿಕಾರ ಸಭೆ ನಡೆಸಿ ತಜ್ಞರ ವರದಿಗೆ ಅನುಮೋದನೆ ನೀಡಬೇಕಾಗುತ್ತದೆ. ಸಣ್ಣ ಸಭೆ ನಡೆಸೋದಕ್ಕೆ ನಾಲ್ಕು ತಿಂಗಳಿಂದ ಗೃಹಸಚಿವ ಅಮಿತ್ ಶಾಗೆ ಸಮಯವಿಲ್ಲ. ರಾಜ್ಯಕ್ಕೆ ಬರಪರಿಹಾರ ನೀಡಲು ಅನುಮೋದನೆ ನೀಡಲು ಸಮಯವಿಲ್ಲದ ಗೃಹ ಸಚಿವರು ರಾಜಕೀಯಕ್ಕಾಗಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ‘ಗೃಹಮಂತ್ರಿಗಳ ಉತ್ತರಕ್ಕಾಗಿ ಕಾದಿವೆ ಕನ್ನಡಿಗರ ಅಮಿತ ಪ್ರಶ್ನೆಗಳು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡುದ್ದಾರೆ.
ಇದನ್ನೂ ಓದಿ; Kumaraswamy; ಕುಮಾರಸ್ವಾಮಿ ಈ 6 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ತಾರಂತೆ!
ಯಾವಾಗ ಬರ ಪರಿಹಾರ ನೀಡುತ್ತೀರಿ? ಅಮಿತ್ ಶಾ ಅವರೇ?
ಯಾವಾಗ ರಾಜ್ಯಕ್ಕೆ ಬರ ಪರಿಹಾರ ನೀಡುತ್ತೀರಿ..? ಉತ್ತರ ಕೊಡುವರೇ ಅಮಿತ್ ಶಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಮಹದಾಯಿ ಕಳಸಾ ನಾಲಾ ತಿರುವು ಯೋಜನೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆ ಮಾಡೋದಕ್ಕೆ ನಿರಾಕರಣೆ ಮಾಡಲಾಗಿದೆ. ನಮ್ಮ ಇನ್ನೂ ಹತ್ತು ಹಲವು ಬೇಡಿಕೆಗಳು ತಿರಸ್ಕಾರಗೊಂಡಿವೆ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಹೀಗಿರುವಾಗ ನಾವು ಅನುದಾನ ಕೊಟ್ಟಿಲ್ಲ ಎಂದು ಕನ್ನಡಿಗರಿಗೆ ಹೇಳಲು ರಾಜ್ಯಕ್ಕೆ ಬರುತ್ತಿದ್ದೀರಾ ಅಮಿತ್ ಶಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
33 ರೂಪಾಯಿ ಕೊಡ್ತೀವಿ ಅಂದ್ರೂ ಅಕ್ಕಿ ಕೊಡಲಿಲಿಲ್ಲ;
ನಾವು ಬಡವರಿಗೆ ಉಚಿತವಾಗಿ ಅಕ್ಕಿ ಹಂಚಬೇಕು. ಕೆಜಿಗೆ 33 ರೂಪಾಯಿ ಕೊಡುತ್ತೇವೆ ಅಕ್ಕಿ ಪೂರೈಕೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದ್ದೆವು. ಆದ್ರೆ ಅವರು ನಮಗೆ ಅಕ್ಕಿ ಕೊಡೋದಕ್ಕೆ ಒಪ್ಪಲಿಲ್ಲ. ನಮ್ಮ ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಆದ್ರೆ ಅದೇ ಅಕ್ಕಿಯನ್ನು ಕೇಂದ್ರ ಸರ್ಕಾರ ಭಾರತ್ ಬ್ರಾಂಡ್ ಹೆಸರಿನಲ್ಲಿ ಒಂದು ಕೆಜಿಗೆ 29 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಕನ್ನಡಿಗರ ಹಸಿವು ಹಸಿವಲ್ಲವೇ..? ನಾವು ಉಚಿತ ಕೊಡುತ್ತೇವೆ ಎಂದರೆ ಯಾಕೆ ನಮಗೆ ಅಕ್ಕಿ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.