NationalPolitics

Amith Sha; ಇಂದು ಮೈಸೂರಿಗೆ ಅಮಿತ್‌ ಶಾ, ನಾಳೆ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ!

ಮೈಸೂರು; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಮೇಲೆ ಕೇಂದ್ರ ಗೃಹ ಸಚಿವ ಅಮಿತ್‌ ಕರ್ನಾಟಕದ ಕಡೆ ತಲೆ ಹಾಕಿರಲಿಲ್ಲ. ಆದ್ರೆ ಈಗ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸೋದಕ್ಕೆ ಅಮಿತ್‌ ಶಾ ರೆಡಿಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅಮಿತ್‌ ಶಾ ಅವರು ರಣತಂತ್ರ ಹೆಣೆದಿದ್ದರು. ಆದ್ರೆ ಅಮಿತ್‌ ಶಾ ತಂತ್ರಗಾರಿಕೆ ಇಲ್ಲಿ ನಡೆಯಲೇ ಇಲ್ಲ. ಇದರಿಂದ ಅವಮಾನಿತರಾದಂತಿದ್ದ ಅಮಿತ್‌ ಶಾ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅತಿದೊಡ್ಡ ಗೆಲುವು ತಂದುಕೊಡಲು ಹೊಸ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಇದಕ್ಕಾಗಿ ನಾಳೆ ಮೈಸೂರಿನಲ್ಲಿ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ; Citizenship Amendment Act; ಚುನಾವಣೆಗೆ ಮೊದಲು CAA ಜಾರಿ; ಅಮಿತ್‌ ಶಾ

ನಾಳೆ ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಶಾ;

ನಾಳೆ ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಲಿರುವ ಶಾ; ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ವಿಶೇಷ ವಿಮಾನದಲ್ಲಿ ಇಂದು ರಾತ್ರಿ 10.50ಕ್ಕೆ ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಬಂದು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅನಂತರ ನಾಳೆ ಬೆಳಗ್ಗೆಯೇ ಅವರು ಚಾಮುಂಡೇಶ್ವರಿ ದರ್ಶನ ಮಾಡಿಕೊಳ್ಳುತ್ತಾರೆ. ಅನಂತರ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅನಂತರ ಖಾಸಗಿ ಹೋಟೆಲ್‌ಗೆ ಬರಲಿರುವ ಅಮಿತ್‌ ಶಾ, ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ಜೊತೆ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ.

ಇದನ್ನೂ ಓದಿ; Pakistan Election; ಗೆಲುವು ಇಮ್ರಾನ್‌ ಖಾನ್‌ ಅವರದ್ದಾ, ನವಾಜ್‌ ಷರೀಫ್‌ ಅವರದ್ದಾ..?

ನಾಳೆ ಮಧ್ಯಾಹ್ನ 2.40ಕ್ಕೆ ಅಮಿತ್‌ ಶಾ ಮಹತ್ವದ ಸಭೆ;

ನಾಳೆ ಮಧ್ಯಾಹ್ನ 2.40ಕ್ಕೆ ಅಮಿತ್‌ ಶಾ ಮಹತ್ವದ ಸಭೆ; ಸುತ್ತೂರು ಮಠಕ್ಕೆ ಭೇಟಿ ನೀಡಿದ ಮೇಲೆ ಅಮಿತ್‌ ಶಾ ಅವರು ನೇರವಾಗಿ ಖಾಸಗಿ ಹೋಟೆಲ್‌ಗೆ ಬರಲಿದ್ದಾರೆ. ಈಗಾಗಲೇ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಿಗೆ ಅಲ್ಲಿಗೆ ಬರುವಂತೆ ಸೂಚನೆ ನೀಡಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ-ಜೆಡಿಎಸ್‌ ನಡುವಿನ ಸೀಟು ಹಂಚಿಕೆ, ಯಾರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲುತ್ತಾರೆ..? ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಸೋಲಿಸೋದು ಹೇಗೆ ಎಂಬುದರ ಬಗ್ಗೆ ಚರ್ಚೆಗಳು ನಡೆಯಲಿವೆ. ಹೀಗಾಗಿ ನಾಳೆ ಸಾಕಷ್ಟು ಮಹತ್ವದ್ದಾಗಿದೆ. ನಅಳೆಯೇ ಸೀಟು ಹಂಚಿಕೆ ಹಾಗೂ ಹಲವು ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್‌ ಆಗೋ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ನಾಳೆ ಅಮಿತ್‌ ಶಾ ಅವರು ಏನು ತೀರ್ಮಾನ ಮಾಡುತ್ತಾರೆ ಎಂಬುದರ ಮೇಲೆ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ; Sumalatha; ಸುಮಲತಾಗೆ ಟಿಕೆಟ್‌ ಭರವಸೆ ಕೊಟ್ಟರಾ ಪ್ರಧಾನಿ ಮೋದಿ?

ಮಂಡ್ಯ ಕ್ಷೇತ್ರದಿಂದ ಸುಮಲತಾನಾ, ಕುಮಾರಸ್ವಾಮಿನಾ..?;

ಮಂಡ್ಯ ಕ್ಷೇತ್ರದಿಂದ ಸುಮಲತಾನಾ, ಕುಮಾರಸ್ವಾಮಿನಾ..?; ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಸುಮಲತಾ ಅವರು ಬಿಜೆಪಿ ಟಿಕೆಟ್‌ ಬಯಸಿದ್ದಾರೆ. ಆದ್ರೆ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ ಕೇಳುತ್ತಿದೆ. ಇಲ್ಲಿ ನಿಖಿಲ್‌ ಕುಮಾರಸ್ವಾಮಿ ಅಥವಾ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸುಮಲತಾ ಅವರು ದೆಹಲಿಯಲ್ಲಿ ಎಲ್ಲಾ ನಾಯಕರನ್ನೂ ಭೇಟಿಯಾಗಿ ಲಾಭಿ ಮಾಡಿ ಬಂದಿದ್ದಾರೆ. ಆದ್ರೆ ಮೂಲಗಳ ಪ್ರಕಾರ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಕಣಕ್ಕಿಳಿದರೆ, ಇತರ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಿಗೆ ಆಭವಾಗುತ್ತೆ ಅನ್ನೋ ಲೆಕ್ಕಾಚಾರ ಬಿಜೆಪಿಯದ್ದು ಎಂದು ಹೇಳಲಾಗುತ್ತಿದೆ.

ಮಂಡ್ಯದಲ್ಲಿ ಕುಮಾರಸ್ವಾಮಿ ಮಂಡ್ಯದಲ್ಲಿ ಕಣಕ್ಕಿಳಿದರೆ ಮೈಸೂರು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲೋದಕ್ಕೆ ಸುಲಭವಾಗುತ್ತದೆ. ಕುಮಾರಸ್ವಾಮಿಯವರ ಪ್ರಭಾವ ಸುತ್ತಮುತ್ತಲ ಕ್ಷೇತ್ರಗಳಿಗೆ ಬೀಳುತ್ತೆ ಅನ್ನೋ ಲೆಕ್ಕಾಚಾರ ಬಿಜೆಪಿಯದ್ದು. ಹೀಗಾಗಿ ಕುಮಾರಸ್ವಾಮಿಯರವ ಮನವೊಲಿಸಿ, ಮಂಡ್ಯದಲ್ಲಿ ಅವರ ಸ್ಪರ್ಧೆಗೆ ಒಪ್ಪಿಸುವ ಸಾಧ್ಯತೆ ಇದೆ.

ಜೆಡಿಎಸ್‌ಗೆ ಎಷ್ಟು ಕ್ಷೇತ್ರ ಸಿಗಬಹುದು..?

ಜೆಡಿಎಸ್‌ಗೆ ಎಷ್ಟು ಕ್ಷೇತ್ರ ಸಿಗಬಹುದು..?; ಜೆಡಿಎಸ್‌ ನಾಯಕರು ಒಟ್ಟು ಆರು ಕ್ಷೇತ್ರಗಳನ್ನು ಕೇಳುತ್ತಿದ್ದಾರೆ. ಆದ್ರೆ ಬಿಜೆಪಿ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು. ಜೆಡಿಎಸ್‌ ನಾಯಕರು ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು-ಕೊಡಗು, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಮೂಲಗಳ ಪ್ರಕಾರ, ಮಂಡ್ಯ, ಹಾಸನ, ಕೋಲಾರ ಹಾಗೂ ಯಾವುದಾದರೂ ಒಂದು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಹುದು ಎಂದು ಹೇಳಲಾಗುತ್ತಿದೆ. ನಾಳಿನ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲಿದೆ.

Share Post