ED Raids; ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್‌ರೆಡ್ಡಿ ಮನೆ ಮೇಲೆ ಇಡಿ ದಾಳಿ
ಬಳ್ಳಾರಿ; ನಾರಾ ಭರತ್ ರೆಡ್ಡಿ ( Nara Bharath Reddy).. ಇವರು ಬಳ್ಳಾರಿ ನಗರ ಕಾಂಗ್ರೆಸ್ ಶಾಸಕರು.. ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಪತ್ನಿ ಅರುಣಾ ಅವರನ್ನು ಸೋಲಿಸಿ ಶಾಸಕರಾಗಿದ್ದಾರೆ.. ನಿನ್ನೆ ಮೊನ್ನೆಯತನಕ ನಾರಾ ಭರತ್ ರೆಡ್ಡಿ ಬಗ್ಗೆ ಜನಕ್ಕೆ ಅಷ್ಟೊಂದು ಗೊತ್ತಿರಲಿಲ್ಲ. ಆದ್ರೆ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ನಾರಾ ಭರತ್ ರೆಡ್ಡಿ ಅಬ್ಬರಿಸಿದ್ದರು. ಶಾಸಕ ಜನಾರ್ದನರೆಡ್ಡಿ ಅವರನ್ನು ಏಕವಚನದಲ್ಲಿ ಮಾತನಾಡಿದ್ದರು. ಸಾಕು ಕೂತ್ಕೋಳಯ್ಯ ಎಂದು ತೆಲುಗಿನಲ್ಲಿ ಹೇಳಿದ್ದರು. ಇದಾದ ಮೇಲೆ ನಾರಾ ಭಾರತ್ ರೆಡ್ಡಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ನಾರಾ ಭರತ್ ರೆಡ್ಡಿ ಪ್ರಚಾರದಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ಇಂದು ಬೆಳಗ್ಗೆ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿರುವ ದಾಳಿ.
ಇದನ್ನೂ ಓದಿ;Fingering in the nose; ಮೂಗಲ್ಲಿ ಬೆರಳಿಟ್ಟುಕೊಂಡರೆ ಮರೆವು ಕಾಯಿಲೆ ಗ್ಯಾರೆಂಟಿ!
ಬೆಳಗ್ಗೆಯೇ ಇಡಿ ಅಧಿಕಾರಿಗಳಿಂದ ಪರಿಶೀಲನೆ;
ಬೆಳಗ್ಗೆಯೇ ಇಡಿ ಅಧಿಕಾರಿಗಳಿಂದ ಪರಿಶೀಲನೆ; ಇಂದು ಮುಂಜಾನೆಯೇ ಇಡಿ ಅಧಿಕಾರಿಗಳು ಬಳ್ಳಾರಿಯಲ್ಲಿ ಸದ್ದು ಮಾಡಿದ್ದಾರೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರ ಮನೆ ಹಾಗೂ ಕಚೇರಿ, ಅವರ ತಂದೆಯವರ ಮನೆ ಹಾಗೂ ಕಚೇರಿ ಇದಲ್ಲದೆ ಶಾಸಕ ನಾರಾ ಭರತ್ ರೆಡ್ಡಿಯವರ ಚಿಕ್ಕಪ್ಪನ ಮನೆ ಹಾಗೂ ಕಚೇರಿ ಮೇಲೆಯೂ ದಾಳಿ ಮಾಡಲಾಗಿದೆ. ಎಲ್ಲಾ ಕಡೆ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಇಲ್ಲಿ ಸಿಕ್ಕ ದಾಖಲೆಗಳು, ಹಣ ಮತ್ತಿತರ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ; Ghee Health Benefits; ತುಪ್ಪವನ್ನು ಹೀಗೆ ತಿಂದರೆ ನಿಮ್ಮ ಕಾಯಿಲೆಗಳೆಲ್ಲಾ ಮಾಯ!
ನಾಲ್ಕು ಕಡೆಗಳಲ್ಲಿ ನಡೆಯುತ್ತಿದೆ ತೀವ್ರ ತಪಾಸಣೆ;
ನಾಲ್ಕು ಕಡೆಗಳಲ್ಲಿ ನಡೆಯುತ್ತಿದೆ ತೀವ್ರ ತಪಾಸಣೆ; ಸುಮಾರು ನಾಲ್ಕು ಕಡೆಗಳಲ್ಲಿ ಇಡಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯೇ 6.30ಕ್ಕೆ ಈ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ. ಶಾಸಕರ ಚಿಕ್ಕಪ್ಪ ಪ್ರತಾಪ ರೆಡ್ಡಿ ಅವರ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
ಇದನ್ನೂ ಓದಿ; Shoebill Bird; ಡೈನೋಸಾರ್‌ನಂತೆ ಕಾಣುತ್ತೆ; ಮೊಸಳೆಯನ್ನೇ ತಿನ್ನುತ್ತೆ ಪಕ್ಷಿ..!
43 ಸಾವಿರ ಕುಕ್ಕರ್‌ಗಳನ್ನು ಹಂಚಿದ್ದ ಭರತ್ ರೆಡ್ಡಿ;
43 ಸಾವಿರ ಕುಕ್ಕರ್‌ಗಳನ್ನು ಹಂಚಿದ್ದ ಭರತ್ ರೆಡ್ಡಿ; ನಾರಾ ಭರತ್ ರೆಡ್ಡಿಯವರು ಚುನಾವಣೆ ಸಮಯದಲ್ಲಿ 43 ಸಾವಿರ ಕುಕ್ಕರ್‌ಗಳನ್ನು ಹಂಚಿಕೆ ಮಾಡಿದ್ದರು. ಇದಕ್ಕಾಗಿ ಎಲ್ಲಿಂದ ಹಣ ಬಂತು. ಇದನ್ನು ಯಾವ ಲೆಕ್ಕದಲ್ಲಿ ತೋರಿಸಿದ್ದಾರೆ. ತೆರಿಗೆ ಸರಿಯಾಗಿ ಕಟ್ಟಿದ್ದಾರೆಯೇ..? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ; Pakistan Election; ಗೆಲುವು ಇಮ್ರಾನ್ ಖಾನ್ ಅವರದ್ದಾ, ನವಾಜ್ ಷರೀಫ್ ಅವರದ್ದಾ..?