Politics

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಡಬಲ್‌ ಡಿಜಿಟ್‌ ʻಗ್ಯಾರೆಂಟಿʼ?; ಹೋಪ್‌ ಕಳೆದುಕೊಳ್ತಿದೆಯಾ ಬಿಜೆಪಿ..?

ಬೆಂಗಳೂರು; ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟ 28 ಕ್ಕೆ 28 ಕ್ಷೇತ್ರಗಳು ಗೆಲ್ಲುತ್ತೇವೆ ಎಂದು ಹೇಳುತ್ತಿದೆ.. ಬಹುತೇಕರು ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬರುತ್ತವೆ ಎಂದು ಮಾತನಾಡುತ್ತಿದ್ದಾರಾದರೂ ಗ್ರೌಂಡ್‌ ಲೆವೆಲ್‌ ನಲ್ಲಿ ಪರಿಸ್ಥಿತಿ ಬೇರೆಯೇ ಇದೆ ಎಂದು ಎಲ್ಲರಿಗೂ ನಿಧಾನವಾಗಿ ಅರ್ಥವಾಗುತ್ತಿದೆ.. ಎಲ್ಲೋ ಒಂದು ಕಡೆ ಗ್ರಾಮೀಣ ಜನರು ಗ್ಯಾರೆಂಟಿಗಳ ಕಾರಣಕ್ಕಾಗಿ ಕಾಂಗ್ರೆಸ್‌ ಒರವಾದಂತಹ ಒಲವು ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಹೀಗಾಗಿಯೇ ಸರ್ವೇಗಳು ದಿನದಿಂದ ದಿನಕ್ಕೆ ಕಾಂಗ್ರೆಸ್‌ಗೆ ಬರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗುತ್ತಿವೆ..

ಇದನ್ನೂ ಓದಿ; 270 ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌; ಪೊಲೀಸರಿಗೆ ತಲೆನೋವಾದ ಮಹಿಳೆ..!

ಮೊದಲು ಒಂದೆರಡು ಸೀಟು ಎಂದಿದ್ದ ಸರ್ವೆಗಳು..!

ಲೋಕಸಭಾ ಚುನಾವಣೆ ಮೂರು ತಿಂಗಳಿದೆ ಎಂದಾಗ ಒಂದಷ್ಟು ಸರ್ವೇಗಳು ಹೊರಬಿದ್ದಿದ್ದವು.. ಇದರಲ್ಲಿ ಕಾಂಗ್ರೆಸ್‌ಗೆ ಒಂದೆರಡು ಸೀಟುಗಳಷ್ಟೇ ಬರುತ್ತವೆ ಎಂದು ಸರ್ವೇಗಳು ಹೇಳಿದ್ದವು.. ಆದ್ರೆ, ಇತ್ತೀಚಿನ ಸರ್ವೇಗಳಲ್ಲಿ ಕಾಂಗ್ರೆಸ್‌ಗೆ ಆರೇಳು ಸೀಟುಗಳು ಬರಲಿವೆ ಎಂದು ಹೇಳುತ್ತಿವೆ.. ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನೂ 20 ದಿನಗಳು ಬಾಕಿ ಇವೆ.. ಇಷ್ಟರಲ್ಲಿ ಮತದಾರರ ಮೂಡ್‌ ಇನ್ನೂ ಬದಲಾಗುವ ಸಾಧ್ಯತೆ ಇದೆ.. ಕಾಂಗ್ರೆಸ್‌ನವರು ಗ್ಯಾರೆಂಟಿಗಳ ಜಾರಿ ಬಗ್ಗೆ  ಜನರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುತ್ತಿದ್ದಾರೆ.. ಇದರ ಜೊತೆಯಲ್ಲೇ ಕಾಂಗ್ರೆಸ್‌ ಸೋಲಿಸಿದರೆ, ಬಿಜೆಪಿಯವರಿಂದ ಗ್ಯಾರೆಂಟಿಗಳಿಗೆ ತೊಂದರೆ ಇದೆ ಎಂದು ಹೇಳುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ಗ್ಯಾರೆಂಟಿಗಳ ಫಲಾನುಭವಿಗಳು ಕಾಂಗ್ರೆಸ್‌ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎನ್ನಲಾಗ್ತಿದೆ.. ಹೀಗಾಗಿ ಬಿಜೆಪಿ ಕೂಡಾ ಪ್ರಚಾರದ ತಂತ್ರಗಾರಿಕೆ ಬದಲಿಸಲು ಮುಂದಾಗಿದೆ..

ಇದನ್ನೂ ಓದಿ; ಅಕ್ಕಿಯನ್ನು ಹೀಗೆ ಬಳಸಿದರೆ ಮುಖ ಫಳಫಳ ಹೊಳೆಯುತ್ತದೆ..!

ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಒಲವು ಜಾಸ್ತಿ;

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ.. ಇದರಲ್ಲಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ 1 ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು.. ಆದ್ರೆ ಈ ಬಅರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಜೊತೆಗೆ ಐದು ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಲಾಗಿದೆ.. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ ನಾಯಕರು ಕರಸತ್ತು ಮಾಡುತ್ತಿದ್ದಾರೆ.. ಇದರ ನಡುವೆ ಸಮೀಕ್ಷೆಗಳು ಕಾಂಗ್ರೆಸ್‌ಗೆ ವಿರುದ್ಧವಾಗಿ ವರದಿಗಳನ್ನು ನೀಡಿದ್ದರೂ ಕೂಡಾ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿ ಕಾಂಗ್ರೆಸ್‌ ಕೈ ಹಿಡಿಯುತ್ತಾರೆ.. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ..

ಇದನ್ನೂ ಓದಿ; ಮೆಟ್ರೋ ನಿಲ್ದಾಣದಲ್ಲೇ ಗುಂಡು ಹಾರಿಸಿಕೊಂಡ ಸಿಬ್ಬಂದಿ!

ಮೀಸಲು ಕ್ಷೇತ್ರಗಳು ಕಾಂಗ್ರೆಸ್‌ ಕೈ ಹಿಡಿಯುವ ಸಾಧ್ಯತೆ;

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 5 ಲೋಕಸಭಾ ಕ್ಷೇತ್ರಗಳನ್ನು ಎಸ್ಸಿಗೆ ಹಾಗೂ ಎರಡು ಲೋಕಸಭಾ ಕ್ಷೇತ್ರಗಳನ್ನು ಎಸ್‌ಟಿಗೆ ಮೀಸಲಿಡಲಾಗಿದೆ.. ಈ ಏಳು ಕ್ಷೇತ್ರಗಳು ಕಾಂಗ್ರೆಸ್‌ ಕೈಹಿಡಿಯಲಿದೆ ಎಂದು ಹೇಳಲಾಗುತ್ತಿದೆ.. ಯಾಕಂದ್ರೆ ರಾಜ್ಯ ಸರ್ಕಾರ ಐದು ಉಚಿತ ಭರವಸೆಗಳು ಹೆಚ್ಚಾಗಿ ಬಡ ಜನತೆಗೆ ತಲುಪಿವೆ.. ಎಸ್‌ಸಿ, ಎಸ್‌ಟಿ ಸಮಯದಾಯದವರು ಈ ಯೋಜನೆಗಳನ್ನು ಪಡೆದುಕೊಂಡು ತಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳುತ್ತಿದ್ದಾರೆ.. ಈ ಹಿನ್ನೆಲೆಯಲ್ಲಿ ಎಸ್ಸಿಗೆ ಮೀಸಲಾದ, ಕಲಬುರಗಿ, ವಿಜಯಪುರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ ಹಾಗೂ ಎಸ್ಟಿಗೆ ಮೀಸಲಾದ ರಾಯಚೂರು ಮತ್ತು ಬಳ್ಳಾರಿಯಲ್ಲಿ ಮತದಾರರು ಕಾಂಗ್ರೆಸ್‌ ಕೈಹಿಡಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ..

ಇದನ್ನೂ ಓದಿ; ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿ ಪರ ನಿಲ್ಲಿ; ಈಶ್ವರಪ್ಪಗೆ ವಿಜಯೇಂದ್ರ ಮನವಿ

ದಲಿತರು, ಹಿಂದುಳಿದವರು, ಮುಸ್ಲಿಮರು ಹೆಚ್ಚಿರುವ ಕಡೆಯೂ ಬೆಂಬಲ;

ಏಳು ಮೀಸಲು ಕ್ಷೇತ್ರಗಳಲ್ಲದೆ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಂ ಮತದಾರರು ಹೆಚ್ಚಿದ್ದಾರೆ.. ಗೃಹಲಕ್ಷ್ಮೀ, ಗೃಹಜ್ಯೋತಿಯಂತಹ ಯೋಜನೆಗಳು ಇವರಿಗೆ ಹೆಚ್ಚಾಗಿ ತಲುಪಿವೆ.. ಇವರಿಗೆ ಇದರಿಂದಾಗಿ ಸಾಕಷ್ಟು ಅನುಕೂಲಗಳೂ ಆಗುತ್ತಿವೆ.. ಸರ್ಕಾರಿ ಯೋಜನೆಗಳಿಂದಲೇ ಹಲವು ಖುಷಿಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.. ಬಡವರ ಜೀವನಮಟ್ಟ ಸುಧಾರಿಸಿದೆ.. ಹೀಗಾಗಿ ದಲಿತರು, ಹಿಂದುಳಿದವರು ಹಾಗು ಮುಸ್ಲಿಮರು ಕಾಂಗ್ರೆಸ್‌ ಪರ ಹೆಚ್ಚಾಗಿದ್ದಾರೆ ಎಂದು ಹೇಳಲಾಗುತ್ತಿದೆ.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ದಲಿತ ಮತಗಳು ಸುಮಾರು 6.5 ಲಕ್ಷದಷ್ಟಿದೆ.. ಇದರ ಜೊತೆಗೆ ರಾಜ್ಯದ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ 30 ಸಾವಿರದಿಂದ 40 ಸಾವಿರ ದಲಿತ ಮತಗಳಿವೆ.. ಲೋಕಸಭಾ ಕ್ಷೇತ್ರವಾರು ನೋಡಿದರೆ ದಲಿತರ ಮತಗಳು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 3.5 ರಿಂದ 4 ಲಕ್ಷದಷ್ಟಿವೆ.. ಹೀಗಾಗಿ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಗ್ಯಾರೆಂಟಿಗಳ ಕಾರಣದಿಂದ ಕಾಂಗ್ರೆಸ್‌ ಪರವಾಗಿ ಹಾಕಿದರೆ ಕಾಂಗ್ರೆಸ್‌ಗೆ ದೊಡ್ಡ ಗೆಲುವು ಸಿಗುವ ಎಲ್ಲಾ ಸಾಧ್ಯತೆ ಇದೆ..

ಇದನ್ನೂ ಓದಿ; ಬಿಜೆಪಿ ಸಂಸದೆ ಮೇಲೆ ಅಟ್ಯಾಕ್‌; ಮೊಬೈನ್‌ನಲ್ಲಿ ದೃಶ್ಯ ಸೆರೆ

ಕೋಲಾರದಲ್ಲಿ ಎಡ-ಬಲ ಜಗಳ;

ಕೋಲಾರ ಲೋಕಸಭಾ ಕ್ಷೇತ್ರ ಎಸ್‌ಸಿ ಮೀಸಲು ಕ್ಷೇತ್ರ.. ಇಲ್ಲಿ ಕಾಂಗ್ರೆಸ್‌ನ ಕೆ.ಹೆಚ್‌.ಮುನಿಯಪ್ಪ ಏಳು ಬಾರಿ ಗೆದ್ದಿದ್ದಾರೆ.. ಕಳೆದ ಬಾರಿ ಅವರು ಕಾಂಗ್ರೆಸ್‌ ನಾಯಕರ ಕಾರಣದಿಂದೇ ಸೋತಿದ್ದಾರೆ.. ಈ ಬಾರಿ ಅವರ ಅಳಿಯನಿಗೆ ಟಿಕೆಟ್‌ ಕೇಳಿದ್ದರು.. ಇದಕ್ಕಾಗಿ ಎರಡು ಗುಂಪುಗಳಾಗಿದ್ದರು.. ಈಗ ಮೂರನೇಯವರಿಗೆ ಟಿಕೆಟ್‌ ನೀಡಲಾಗಿದೆ.. ಇಲ್ಲಿ ಎರಡೂ ಗುಂಪುಗಳು ಒಂದಾಗದಿದ್ದರೆ ಮತ್ತೆ ಮೈತ್ರಿ ಪಕ್ಷಕ್ಕೆ ಲಾಭವಾಗಲಿದೆ.. ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ನಾಯಕರ ಒಗ್ಗಟ್ಟು ಹೇಗಿರುತ್ತೆ ನೋಡಬೇಕು..

 

 

Share Post