ಪಾದಯಾತ್ರೆಯಲ್ಲಿ ಪ್ರೀತಂಗೌಡ ಎಂಟ್ರಿ ಏನು ಹೇಳುತ್ತೆ..?; ಜೆಡಿಎಸ್ ನಿಲುವೇನು..?
ಮಂಡ್ಯ; ಮುಡಾ ಹಗರಣ ಹಾಗೂ ವಾಲ್ಮೀಕಿ ನಿಮಗದಲ್ಲಿನ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿವೆ.. ಈಗಾಗಲೇ ಐದು ದಿನದ ಪಾದಯಾತ್ರೆ ಮುಗಿದಿದೆ.. ಹೀಗಿರುವಾಗಲೇ ಪಾದಯಾತ್ರೆ ಮಂಡ್ಯಕ್ಕೆ ಬಂದಾಗ ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.. ಈ ವೇಳೆ ಬಿಜೆಪಿ ಕಾರ್ಯಕರ್ತರು ಅವರನ್ನು ಎತ್ತಾಡಿ ಮೆರೆಸಿದ್ದು, ಹಾಸನದ ಒಡೆಯ ಎಂದೆಲ್ಲಾ ಘೋಷಣೆ ಕೂಗಿದ್ದಾರೆ..
ಇದನ್ನೂ ಓದಿ; ಇಂದು ನಟ ನಾಗ ಚೈತನ್ಯ-ನಟಿ ಶೋಭಿತಾ ಧೂಳಿಪಾಳ್ಳ ನಿಶ್ಚಿತಾರ್ಥ!
ಇತ್ತ ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದಗಳು ಕೂಡಾ ನಡೆದಿವೆ.. ಮಧ್ಯಪ್ರವೇಶಿಸಿರುವ ನಾಯಕರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.. ಈ ನಡುವೆ ಮಂಡ್ಯದಲ್ಲಿ ಮಾಜಿ ಶಾಸಕ ಪ್ರೀತಂ ಗೌಡರ ಫ್ರೆಕ್ಸ್ ಹಾಗೂ ಪೋಸ್ಟರ್‌ಗಳನ್ನು ಮಂಡ್ಯ ಸುತ್ತಮುತ್ತ ಅಳವಡಿಸಲಾಗಿತ್ತು.. ಇವುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.. ಪ್ರೀತಂ ಗೌಡ ಫೋಟೋ ಹಾಕಿದ್ದಕ್ಕೆ ಆಕ್ರೋಶಗೊಂಡು ಈ ಕೃತ್ಯ ಎಸಗಲಾಗಿದೆ.. ಇದನ್ನು ನೋಡುತ್ತಿದ್ದಂತೆ ದೋಸ್ತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡುತ್ತಿದೆ..
ಇದನ್ನೂ ಓದಿ; 13 ವರ್ಷದ ಹಿಂದೆ ಸತ್ತ ಗಂಡನಿಂದ ಮಗು ಪಡೆದಳಂತೆ ಈ ಮಹಿಳೆ!
ಮಾಜಿ ಶಾಸಕ ಪ್ರೀತಂ ಗೌಡ ಅವರೇ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ದೃಶ್ಯಗಳಿರುವ ಪೆನ್‌ಡ್ರೈವ್ ಹಂಚಿಕೆ ಮಾಡಿದ್ದಾರೆ ಎಂಬ ಆರೋಪವಿದೆ.. ನಮ್ಮ ಕುಟುಂಬದ ಮರ್ಯಾದೆ ಮಣ್ಣುಪಾಲು ಮಾಡಿದವನ ಜೊತೆ ಪಾದಯಾತ್ರೆ ಮಾಡೋದಿಲ್ಲ ಎಂದು ಕುಮಾರಸ್ವಾಮಿಯವರು ಪಾದಯಾತ್ರೆಗೂ ಎರಡು ದಿನಗಳ ಮುಂಚೆ ಆಕ್ರೋಶದಿಂದಲೇ ಹೇಳಿದ್ದರು.. ಅನಂತರ ಸಂಧಾನ ನಡೆದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಕೊಟ್ಟಿದ್ದರು.. ಇದೀಗ ಜೆಡಿಎಸ್ ಭದ್ರಕೋಟೆ ಮಂಡ್ಯಕ್ಕೆ ಪಾದಯಾತ್ರೆ ಬರುತ್ತಿದ್ದಂತೆ ಮಾಜಿ ಶಾಸಕ ಪ್ರೀತಂ ಗೌಡ ಎಂಟ್ರಿಯಾಗಿದ್ದಾರೆ.. ಜೊತೆಗೆ ಪ್ರೀತಂ ಗೌಡ ಪರವಾಗಿ ಘೋಷಣೆಗಳನ್ನು ಕೂಗಲಾಗಿದೆ.. ಇದು ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗುತ್ತಿದೆ.. ಬಿಜೆಪಿ ನಾಯಕರ ಈ ನಡೆಯಿಂದಾಗಿ ಕುಮಾರಸ್ವಾಮಿಯವರು ಕೂಡಾ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ!
ಇನ್ನೊಂದೆಡೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.. ಆದ್ರೆ ಯೋಗೇಶ್ವರ್ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.. ಬಂಡಾಯದ ಬಾವುಟ ಹಾರಿಸಲು ಅವರೂ ರೆಡಿಯಾಗಿದ್ದಾರೆ.. ಅದಕ್ಕಾಗಿ ಅಭಿಮಾನಿಗಳ ಸಭೆ ಕೂಡಾ ಏರ್ಪಡಿಸಲಾಗಿದೆ.. ಇದನ್ನೆಲ್ಲಾ ನೋಡ್ತಿದ್ರೆ ದೋಸ್ತಿ ಉಳಿಯುತ್ತಾ ಇಲ್ಲವಾ ಎಂಬುದರ ಬಗ್ಗೆ ಅನುಮಾನ ಮೂಡಿದೆ..