Politics

ಹಾಸನದಲ್ಲಿ ಜೆಡಿಎಸ್‌ ಮುಳ್ಳಾಗ್ತಿದೆಯಾ ಬಿಜೆಪಿ..?; ಪ್ರೀತಂಗೌಡ ಪ್ರಚಾರ ಮಾಡಲ್ವಾ..?

ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ.. ಜೆಡಿಎಸ್‌ಗೆ ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.. ಆದ್ರೆ ಹಾಸನ ಕ್ಷೇತ್ರದಲ್ಲಿ ಮೊದಲಿನಿಂದಲೂ ಜೆಡಿಎಸ್‌ ಹಾಗೂ ಬಿಜೆಪಿ ನಾಯಕರ ಹೊಂದಾಣಿಕೆ ಕಂಡುಬರುತ್ತಿಲ್ಲ.. ಹಾಸನದ ಮಾಜಿ ಶಾಸಕ ಪ್ರೀತಂ ಗೌಡ, ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಹೆಸರನ್ನೂ ಎತ್ತುತ್ತಿಲ್ಲ.. ಹಾಸನದಲ್ಲಿ ಪ್ರಚಾರದಲ್ಲೂ ಪಾಲ್ಗೊಳ್ಳುತ್ತಿಲ್ಲ.. ಬದಲಾಗಿ ಅವರು ಮೈಸೂರು-ಚಾಮರಾಜನಗರಕ್ಕೆ ಸೀಮಿತವಾಗಿದ್ದಾರೆ..

ಇದನ್ನೂ ಓದಿ; ರಾಜ್ಯದಲ್ಲಿ ಕಾಂಗ್ರೆಸ್‌ಗೆ ಡಬಲ್‌ ಡಿಜಿಟ್‌ ʻಗ್ಯಾರೆಂಟಿʼ?; ಹೋಪ್‌ ಕಳೆದುಕೊಳ್ತಿದೆಯಾ ಬಿಜೆಪಿ..?

ಪ್ರಜ್ವಲ್‌ ಹೆಸರೂ ಹೇಳದ ಪ್ರೀತಂ ಗೌಡ;

ಮಾಜಿ ಶಾಸಕ ಪ್ರೀತಂ ಗೌಡ ಹಾಸನ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿದ್ದಾರೆ.. ಹಾಸನ ನಗರ ಕ್ಷೇತ್ರದಲ್ಲಿ ಅವರು ಶಾಸಕರೂ ಆಗಿದ್ದರು.. ಆದ್ರೆ ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ.. ಆದರೂ ಕೂಡಾ ಪ್ರೀತಂ ಗೌಡ ಸಾಕಷ್ಟು ಪ್ರಭಾವ ಹೊಂದಿದ್ದಾರೆ.. ಅವರು ಪ್ರಚಾರಕ್ಕಿಳಿದರೆ ಸಾವಿರಾರು ಮತಗಳು ಮೈತ್ರಿ ಅಭ್ಯರ್ಥಿಗೆ ಬರಲಿವೆ.. ಆದ್ರೆ ಪ್ರೀತಂಗೌಡ ಅವರು ಮೈಸೂರು ಹಾಗೂ ಚಾಮರಾನಗರ ಕ್ಷೇತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.. ಇನ್ನು ಮೈಸೂರಿನಲ್ಲಿ ಅವರು ಇವತ್ತು ಮಾತನಾಡಿದ್ದಾರೆ.. ಈ ವೇಳೆ ಪ್ರಜ್ವಲ್‌ ಹೆಸರೇ ಹೇಳಿಲ್ಲ.. ಮಾಧ್ಯಮದವರು ಎಷ್ಟೇ ಪ್ರಶ್ನೆ ಕೇಳಿದರೂ ಪ್ರಜ್ವಲ್‌ ಹೆಸರೇಳದೇ ಮಾತನಾಡಿದ್ದಾರೆ.. ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ..

ಇದನ್ನೂ ಓದಿ; 270 ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌; ಪೊಲೀಸರಿಗೆ ತಲೆನೋವಾದ ಮಹಿಳೆ..!

ಮೈಸೂರು-ಚಾಮರಾಜನಗರಕ್ಕೆ ಪ್ರೀತಂ ಉಸ್ತುವಾರಿ;

ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಪ್ರೀತಂ ಗೌಡ ಈ ಹಿಂದೆ ಆಗ್ರಹ ಮಾಡಿದ್ದರು.. ಇದೀಗ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ.. ಜೊತೆಗೆ ಪ್ರಜ್ವಲ್‌ ರೇವಣ್ಣ ಅವರಿಗೇ ಟಿಕೆಟ್‌ ನೀಡಲಾಗಿದೆ.. ಆದ್ರೆ ಅಸಮಾಧಾನದಿಂದ ಇದ್ದ ಪ್ರೀತಂ ಗೌಡರಿಗೆ ಬಿಜೆಪಿ ನಾಯಕರು ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳ ಉಸ್ತುವಾರಿ ನೀಡಿದ್ದಾರೆ.. ಸಿಕ್ಕಿದ್ದೇ ಚಾನ್ಸ್‌ ಎಂದು ಪ್ರೀತಂ ಗೌಡ, ಹಾಸನಕ್ಕೆ ಹೋಗದೇ ಮೈಸೂರು-ಚಾಮಮರಾಜನಗರದಲ್ಲೇ ಅವರು ಹೆಚ್ಚು ತೊಡಗಿಸಿಕೊಂಡಿದ್ದಾರೆ..

ಇದನ್ನೂ ಓದಿ; ಅಕ್ಕಿಯನ್ನು ಹೀಗೆ ಬಳಸಿದರೆ ಮುಖ ಫಳಫಳ ಹೊಳೆಯುತ್ತದೆ..!

ಪ್ರೀತಂ ಗೌಡ ಹಾಸನಕ್ಕೆ ಹೋಗಲ್ಲ ಎಂದ ರಾಜ್ಯ ಉಸ್ತುವಾರಿ;

ಇನ್ನು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ಅಗರ್ವಾಲ್‌ ಅವರೂ ಕೂಡಾ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ… ಮಾಜಿ ಶಾಸಕ ಪ್ರೀತಂಗೌಡ ಅವರಿಗೆ ಬಿಜೆಪಿಯಿಂದ ಮೈಸೂರು, ಚಾಮರಾನಗರ ಉಸ್ತುವಾರಿ ನೀಡಿದ್ದೇವೆ. ಹೀಗಾಗಿ ಅವರು ಹಾಸನಕ್ಕೆ ಹೋಗೋದಿಲ್ಲ ಎಂದಿದ್ದಾರೆ.. ರಾಧಾ ಮೋಹನ್‌ ಅಗರ್ವಾಲ್‌ ಅವರ ಈ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.. ನಾನು ಉತ್ತರ ಪ್ರದೇಶದವನು. ಅಲ್ಲಿಯು ಚುನಾವಣೆ ನಡೆಯುತ್ತಿದೆ. ಆದ್ರೆ ನಾನು ಕರ್ನಾಟಕ ಉಸ್ತುವಾರಿ ಆಗಿದ್ದೇನೆ. ಅದೇ ರೀತಿ ಪ್ರೀತಂ ಮೈಸೂರು ಚಾಮರಾಜನಗರ ಉಸ್ತುವಾರಿ ಆಗಿದ್ದಾರೆ. ಯಾವಗಲು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದೂ ರಾಧಾ ಮೋಃನ್‌ ಹೇಳಿದ್ದಾರೆ..

ಇದನ್ನೂ ಓದಿ; ಮೆಟ್ರೋ ನಿಲ್ದಾಣದಲ್ಲೇ ಗುಂಡು ಹಾರಿಸಿಕೊಂಡ ಸಿಬ್ಬಂದಿ!

 

Share Post