BengaluruCrime

270 ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌; ಪೊಲೀಸರಿಗೆ ತಲೆನೋವಾದ ಮಹಿಳೆ..!

ಬೆಂಗಳೂರು; ಟ್ರಾಫಿಕ್‌ ರೂಲ್ಸ್‌ ತುಂಬಾ ಕಠಿಣವಾಗಿದೆ.. ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕ್ಯಾಮರಾದಲ್ಲಿ ಅದು ಸೆರೆಯಾಗಿರುತ್ತದೆ.. ಹೀಗಾಗಿ ದಂಡ ಕಟ್ಟಬೇಕಾಗೋದು ಕಡ್ಡಾಯ.. ಇದು ಗೊತ್ತಿದ್ದರೂ ಕೆಲವರು ರೂಲ್ಸ್‌ ಬ್ರೇಕ್‌ ಮಾಡುತ್ತಲೇ ಇರುತ್ತಾರೆ.. ಅದು ಯಾವ ಮಟ್ಟಿಗೆ ಅಂದ್ರೆ ಆ ವಾಹನ ಮಾರಿದ್ರೂ ಕಟ್ಟಬೇಕಾಗಿರುವ ದಂಡದಷ್ಟು ಹಣ ಬರೋದಿಲ್ಲ…

ಇದನ್ನೂ ಓದಿ; ಅಕ್ಕಿಯನ್ನು ಹೀಗೆ ಬಳಸಿದರೆ ಮುಖ ಫಳಫಳ ಹೊಳೆಯುತ್ತದೆ..!

270 ಬಾರಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಮಹಿಳೆ;

ಗಂಡಸರು ಕೆಲಸದ ಅರ್ಜೆಂಟ್‌ನಲ್ಲಿ ಅಡ್ಡಾದಿಡ್ಡಿ ಬೈಕ್‌ ಓಡಿಸಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡೋದನ್ನು ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಮಹಿಳೆ ಆಕೆಗೆ ಕ್ಯಾಮರಾದಲ್ಲಿ ಸೆರೆಯಾಗುತ್ತೆ ಅಂತ ಗೊತ್ತಿದೆಯೋ ಗೊತ್ತಿಲ್ಲವೋ, ಪದೇ ಪದೇ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾಳೆ.. ಕ್ಯಾಮರಾದಲ್ಲಿ ಸೆರೆಯಾದಂತೆ ಆಕೆ ಬರೋಬ್ಬರಿ 270 ಸಲ ಟ್ರಾಪಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾಳೆ.. ಪದೇ ಪದೇ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದರೂ ಆಕೆ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ.. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಓಡಾಡುತ್ತಿದ್ದಳು.

ಇದನ್ನೂ ಓದಿ; ಮೆಟ್ರೋ ನಿಲ್ದಾಣದಲ್ಲೇ ಗುಂಡು ಹಾರಿಸಿಕೊಂಡ ಸಿಬ್ಬಂದಿ!

1 ಲಕ್ಷ 30 ಸಾವಿರ ರೂಪಾಯಿ ದಂಡ!;

ಮಹಿಳೆ ಸಿಗ್ನಲ್‌ಗಳಲ್ಲಿ ಹಲವಾರು ಬಾರಿ ಜಂಪ್‌ ಮಾಡಿದ್ದಾಳೆ.. ಒನ್‌ ವೇನಲ್ಲಿ ಕೂಡಾ ಸ್ಕೂಟರ್‌ ನುಗ್ಗಿಸಿದ್ದಾಳೆ.. ಜೊತೆಗೆ ಹೆಲ್ಮೆಟ್‌ ಬೇರೆ ಹಾಕಿಲ್ಲ.. ಹೀಗಾಗಿ 270 ಭಾರಿ ಟ್ರಾಫಿಕ್ಸ್‌ ರೂಲ್ಸ್‌ ಬ್ರೇಕ್‌ ಮಾಡಿದ್ದು, ಇದಕ್ಕೆ ಬರೋಬ್ಬರಿ 1 ಲಕ್ಷದ 30 ಸಾವಿರ ರೂಪಾಯಿ ದಂಡವಾಗಿದೆ.. ಆ ಸ್ಕೂಟರ್‌ ಬೆಲೆಯೇ  25 ಸಾವಿರ ಆದ್ರೆ ಅದರ 5 ಪಟ್ಟು ದಂಡ ಕಟ್ಟಡಬೇಕಾಗಿರುವ ಪರಿಸ್ಥಿತಿ ಆ ಮಹಿಳೆಯದ್ದು..

ಕೊನೆಗೂ ಪತ್ತೆಯಾದ ಮಹಿಳೆ..!;

ಸದಾ ರೂಲ್ಸ್​ ಬ್ರೇಕ್​ ಮಾಡುವ ಮಹಿಳೆ ಕೊನೆಗೂ ಪತ್ತೆಯಾಗಿದ್ದಾಳೆ.. ಸಂಚಾರಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಮಹಿಳೆ ಸುಧಾಮನಗರದಲ್ಲಿ ಕಾಣಿಸಿಕೊಂಡಿದ್ದಾಳೆ. ಪೊಲೀಸರು ಆಕೆಯ ವಾಹನದ ಫೋಟೋ ಕ್ಲಿಕ್‌ ಮಾಡಿಕೊಂಡಿದ್ದು, ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; ಕೈಮುಗಿದು ಕೇಳಿಕೊಳ್ಳುತ್ತೇನೆ, ಬಿಜೆಪಿ ಪರ ನಿಲ್ಲಿ; ಈಶ್ವರಪ್ಪಗೆ ವಿಜಯೇಂದ್ರ ಮನವಿ

 

Share Post