CrimePolitics

ಬಿಜೆಪಿ ಸಂಸದೆ ಮೇಲೆ ಅಟ್ಯಾಕ್‌; ಮೊಬೈನ್‌ನಲ್ಲಿ ದೃಶ್ಯ ಸೆರೆ

ಮೊಗ್ರಾ; ಬಿಜೆಪಿ ಸಂಸದೆ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಈ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಗೋಕರ್ಣಕ್ಕೆ ಹೊರಟಿದ್ದ ಬಸ್‌ ಪಲ್ಟಿ; 4 ಮಂದಿ ದುರ್ಮರಣ!

ಕಾಳಿ ಪೂಜೆ ಮುಗಿಸಿ ಬರುತ್ತಿದ್ದಾಗ ದಾಳಿ;

ಹೂಗ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಮೇಲೆ ದಾಳಿ ನಡೆದಿದೆ.. ಅವರು ಮೊಗ್ರಾದಲ್ಲಿ ಏರ್ಪಡಿಸಿದ್ದ ಕಾಳಿ ಪೂಜೆಗೆ ತೆರಳುತ್ತಿದ್ದರು.. ಈ ವೇಳೆ ಬಾನ್ಸ್‌ ಬೇರಿಯಾ ಎಂಬಲ್ಲಿ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ.. ಈ ಬಗ್ಗೆ ಸಂಸದೆ ಲಾಕೆಟ್‌ ಚಟರ್ಜಿಯವರೇ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; ದೇಶದ ಅತ್ಯಂತ ದುಬಾರಿ ಮನೆಗಳಿವು..!; ಯಾವ ಮನೆಗೆ ಎಷ್ಟು ಬೆಲೆ..?

ಟಿಎಂಸಿ ಕಾರ್ಯಕರ್ತರಿಂದಲೇ ದಾಳಿ;

ಟಿಎಂಸಿ ಕಾರ್ಯಕರ್ತರೇ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಸಂಸದೆ ಲಾಕೆಟ್‌ ಚಟರ್ಜಿ ಅವರು ಆರೋಪ ಮಾಡಿದ್ದಾರೆ..  ಬಾನ್ಸ್​ಬೇರಿಯಾ ಪುರಸಭೆಯ ಉಪಾಧ್ಯಕ್ಷೆ ಶಿಲ್ಪಿ ಚಟರ್ಜಿ ಅವರ ಬೆಂಬಲಿಗರು ಈ ದಾಳಿ ನಡೆಸಿರಬಹುದು ಎಂದು ಸಂಸದೆ ಅನುಮಾನ ವ್ಯಕ್ತಪಡಿಸಿದ್ದಾರೆ..

ಚುನಾವಣೆ ಸಮಯದಲ್ಲಿ ಈ ದಾಳಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ.. ಚುನಾವಣಾ ಆಯೋಗದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಒತ್ತಾಯ ಮಾಡಿದ್ದಾರೆ..

ಇದನ್ನೂ ಓದಿ; ಸಿಎಂ ಬೆಂಗಾವಲು ವಾಹನದ ಹಿಂದಿನ ಕಾರಿನಲ್ಲಿ 1.25 ಕೋಟಿ ರೂಪಾಯಿ ಪತ್ತೆ!

Share Post