BengaluruCrimePolitics

ಚೆಕ್ ಬೌನ್ಸ್ ಪ್ರಕರಣ; ಸಚಿವ ಮಧು ಬಂಗಾರಪ್ಪಗೆ ಶಿಕ್ಷೆ

ಬೆಂಗಳೂರು; ರಾಜೇಶ್ ಎಕ್ಸ್ ಪೋರ್ಟ್ಸ್ ಸಂಸ್ಥೆ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ದಂಡ ಹಾಕಿದ್ದು ಪಾವತಿಸದಿದ್ದರೆ,  6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶ ನೀಡಿದೆ.

6 ಕೋಟಿ 96 ಲಕ್ಷ 60 ಸಾವಿರ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಗಿದ್ದು ಅದನ್ನು ವಾಪಸ್ ನೀಡಬೇಕು. ಜೊತೆಗೆ ಸರ್ಕಾರಕ್ಕೆ 10 ಸಾವಿರ ರೂಪಾಯಿ ದಂಡ ಪಾವತಿಸಬೇಕೆಂದು ಕೋರ್ಟ್ ಆದೇಶ ಹೊರಡಿಸಿದೆ.

ದೂರುದಾರರಿಗೆ ನೀಡಬೇಕಿರುವ ಹಣದ ಜೊತೆಗೆ ದಂಡ ಪಾವತಿಸದೇ ಇದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಕೋರ್ಟ್ ಹೇಳಿದೆ. ಮಧು ಬಂಗಾರಪ್ಪ ದೂರುದಾರರಿಗೆ ಕೇವಲ 50 ಲಕ್ಷ ರೂ. ನೀಡಿ ಉಳಿದ ಹಣ ಪಾವತಿಸಿರಲಿಲ್ಲ. ಇನ್ನು ಜನವರಿ 30ರೊಳಗೆ 6.10 ಕೋಟಿ ಪಾವತಿಸುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆ ಬರೆದುಕೊಟ್ಟಿದ್ದರು.

ಆದರೆ ವಿಶೇಷ ಕೋರ್ಟ್, ಮುಚ್ಚಳಿಕೆ ಒಪ್ಪಲು ನಿರಾಕರಿಸಿದ್ದು, ಈ ಹಿಂದೆಯೂ ಮಧು ಬಂಗಾರಪ್ಪ ನೀಡಿದ್ದ ಮುಚ್ಚಳಿಕೆ ಪಾಲಿಸಿಲ್ಲ ಆದ್ದರಿಂದ ಮನವಿಯನ್ನು ತಿರಸ್ಕರಿಸುತ್ತಿರುವುದಾಗಿ ಹೇಳಿದೆ.

Share Post