Politics

Chikkaballapura; ಶಾಸಕ ಪ್ರದೀಪ್‌ ಈಶ್ವರ್‌ ಲೂಸ್‌ ಟಾಕ್‌; ಡಾ.ಕೆ.ಸುಧಾಕರ್‌ಗೆ ಇದೇ ಶ್ರೀರಕ್ಷೆ..?

ಚಿಕ್ಕಬಳ್ಳಾಪುರ; ಪ್ರದೀಪ್‌ ಈಶ್ವರಪ್ಪ… ಈ ಹೆಸರು ಯಾರೂ ಮರೆಯೋದಿಲ್ಲ… ಯಾಕಂದ್ರೆ ಮುಖ್ಯಮಂತ್ರಿ ಕನಸು ಕಾಣುತ್ತಿದ್ದ ಒಬ್ಬ ನಾಯಕನನ್ನು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಸೋಲಿಸಿದ್ದಾರೆ.. ಮಾಜಿ ಸಚಿವ ಡಾ.ಕೆ.ಸುಧಾಕರ್‌ ವಿರುದ್ಧ ಪ್ರದೀಪ್‌ ಈಶ್ವರ್ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ.. ಅವರು ವಿಧಾನಸಭಾ ಚುನಾವಣೆ ವೇಳೆ ಹೊಡೆಯುತ್ತಿದ್ದ ಡೈಲಾಗ್‌ಗಳಿಗೆ ಜನ ಮಾರುಹೋಗಿದ್ದರು.. ಆದ್ರೆ ಅದೇ ಡೈಲಾಗ್‌ಗಳು ಈಗ ನಾಯಕನಾಗಿ ಬೆಳೆದಿರುವ ಪ್ರದೀಪ್‌ ಈಶ್ವರ್‌ ಅವರನ್ನು ಸಾಮಾನ್ಯ ವ್ಯಕ್ತಿಯನ್ನಾಗಿ ಮಾಡುತ್ತಿವೆ..

ಇದನ್ನೂ ಓದಿ; ಟಿಕೆಟ್‌ ಬೇಟೆಯಲ್ಲಿ ʻಸಿಂಹʼ ಫೇಲ್‌; ಹೊರಬಿತ್ತು ಅಸಹನೆಯ ʻಪ್ರತಾಪʼ

ಸುಧಾಕರ್‌ ಒಬ್ಬ ಅಯೋಗ್ಯ ಎಂದು ಶಾಸಕ ಪ್ರದೀಪ್‌ ಈಶ್ವರ್‌;

ಸುಧಾಕರ್‌ ಒಬ್ಬ ಅಯೋಗ್ಯ ಎಂದು ಶಾಸಕ ಪ್ರದೀಪ್‌ ಈಶ್ವರ್‌; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.. ಬಹುತೇಕ ಟಿಕೆಟ್‌ ಅವರಿಗೇ ಸಿಗೋದು.. ಸುಧಾಕರ್‌ ಅವರು ಕೂಡಾ ಈಗಾಗಲೇ ಮತ ಬೇಟೆ ಶುರು ಮಾಡಿಕೊಂಡಿದ್ದಾರೆ.. ಹೀಗಿರುವಾಗಲೇ ಪ್ರದೀಪ್‌ ಈಶ್ವರ್‌ ಅವರು ಲೂಸ್‌ ಟಾಕ್‌ ಒಂದನ್ನು ಹರಿಬಿಟ್ಟಿದ್ದಾರೆ.. ಡಾ.ಸುಧಾಕರ್‌ ಒಬ್ಬ ಅಯೋಗ್ಯ.. ಸುಧಾಕರ್‌ ಡಬಲ್‌ ಗೇಮ್‌ ಆಡ್ತಿದ್ದಾನೆ.. ಬಿಜೆಪಿ ಟಿಕೆಟ್‌ ಸಿಕ್ಕರೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸ್ತಾನಂತೆ, ಇಲ್ಲದಿದ್ದರೆ ಕಾಂಗ್ರೆಸ್‌ ಟಿಕೆಟ್‌ ಪಡೆದು ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸ್ತಾನಂತೆ ಎಂದು ಸುಧಾಕರ್‌ ಬಗ್ಗೆ ಪ್ರದೀಪ್‌ ಈಶ್ವರ್‌ ಕೇವಲವಾಗಿ ಮಾತನಾಡಿದ್ದಾರೆ..

ಇದನ್ನೂ ಓದಿ; ಮೈಸೂರಿಗೆ ಯದುವೀರ್ ಯಾಕೆ..?; ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು‌ ಗೊತ್ತಾ..?

ಡೈಲಾಗ್‌ಗಳು ಯಾವಾಗಲೂ ಕೆಲಸ ಮಾಡೋದಿಲ್ಲ;

ಡೈಲಾಗ್‌ಗಳು ಯಾವಾಗಲೂ ಕೆಲಸ ಮಾಡೋದಿಲ್ಲ; ವಿಧಾನಸಭಾ ಚುನಾವಣೆ ವೇಳೆ ಪ್ರದೀಪ್‌ ಈಶ್ವರ್‌ ಹೊಡೆಯುತ್ತಿದ್ದ ಡೈಲಾಗ್‌ಗಳಿವೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು.. ಚಪ್ಪಾಳೆಗಳು, ಶಿಳ್ಳೆಗಳು ಜೋರಾಗಿ ಬರುತ್ತಿದ್ದವು.. ಆಗಿನ ಕಾಲಕ್ಕೆ, ಆಗಿನ ಪರಿಸ್ಥಿತಿಗೆ ಆ ಡೈಲಾಗ್‌ಗಳು ಜನಕ್ಕೆ ಸಹ್ಯವಾಗಿಯೇ ಇದ್ದವು.. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ.. ಯಾಕಂದ್ರೆ ಪ್ರದೀಪ್‌ ಈಶ್ವರ್‌ ಶಾಸಕರಾಗಿದ್ದಾರೆ.. ಈಗ ಮಾತು ಬಿಟ್ಟು ಕೆಲಸ ಮಾಡುವ ಸಮಯ… ಈಗಲೂ ಚುನಾವಣೆಯಲ್ಲಿ ಹೊಡೆದಂತೆ ಡೈಲಾಗ್‌ ಹೊಡೆದರೆ ಯಾರೂ ಕೇಳರಾರರು.. ಅದೂ ಕೂಡಾ ಚಿಕ್ಕಬಳ್ಳಾಪುರದ ಜನ ಸ್ವಾಭಿಮಾನಿಗಳು ಒಬ್ಬರ ವಿರುದ್ಧ ಹಗುರವಾಗಿ ಮಾತನಾಡುವುದಿಲ್ಲ.. ಬೇರೆಯವರು ಮಾತನಾಡಿದರೆ ಅದನ್ನು ಸಹಿಸೋದೂ ಇಲ್ಲ.. ಹೀಗಾಗಿ, ಪ್ರದೀಪ್‌ ಈಶ್ವರ್‌ ಅವರು ಇತ್ತೀಚೆಗೆ ಮಾಡುತ್ತಿರುವ ಕೆಲ ಲೂಸ್‌ ಟಾಕ್‌ಗಳು ಕಾಂಗ್ರೆಸ್‌ಗೆ ಹೊಡೆತ ಬೀಳುತ್ತೆ ಎಂದೇ ಹೇಳಲಾಗುತ್ತಿದೆ…

ಇದನ್ನೂ ಓದಿ; Loksabha; ಬೆಂ.ಗ್ರಾಮಾಂತರ, ಮೈಸೂರಲ್ಲಿ BJP ಸ್ಪೆಷಲ್‌ ಕ್ಯಾಂಡಿಡೇಟ್ಸ್‌; ಸಿಎಂ, ಡಿಸಿಎಂಗೆ ಚಿಂತೆ!

ಅಸಹನೆ ಕಾರಣದಿಂದ ಸುಧಾಕರ್‌ರನ್ನು ಸೋಲಿಸಿದ್ದ ಜನ;

ಅಸಹನೆ ಕಾರಣದಿಂದ ಸುಧಾಕರ್‌ರನ್ನು ಸೋಲಿಸಿದ್ದ ಜನ; ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ಹಿಂದೆಂದೂ ಕಾಣದ ಅಭಿವೃದ್ಧಿ ಸುಧಾಕರ್‌ ಅವಧಿಯಲ್ಲಿ ಆಗಿದೆ.. ಆದರೂ ಚಿಕ್ಕಬಳ್ಳಾಪುರದ ಜನ ಸುಧಾಕರ್‌ನ್ನು ಸೋಲಿಸೋದಕ್ಕೆ ಕಾರಣ ಅಸಹನೆ.. ಅಭಿವೃದ್ಧಿ ವಿಚಾರದಲ್ಲಿ ಸುಧಾಕರ್‌ಗೆ ಒಳ್ಳೆ ಕೆಲಸಗಾರ ಅನ್ನೋದು ಜನಕ್ಕೆ ಗೊತ್ತಿದೆ.. ಆದ್ರೆ ಅವರು ಸಚಿವರಾದ ಮೇಲೆ ಸಾಮಾನ್ಯ ಜನರನ್ನು ದೂರ ಇಟ್ಟಿದ್ದರು.. ಜನಸಾಮಾನ್ಯರ ಜೊತೆ ಬೆರೆಯುತ್ತಿರಲ್ಲ.. ಹುಡುಕಿಕೊಂಡು ಹೋದ ಜನಸಾಮಾನ್ಯರಿಗೆ  ಸರಿಯಾಗಿ ಸಿಗುತ್ತಿರಲಿಲ್ಲ ಅನ್ನೋ ಒಂದು ಸಣ್ಣ ಕಾರಣಕ್ಕೆ ಅವರ ಬಗ್ಗೆ ಅಸಹನೆ ಹುಟ್ಟಿತ್ತು.. ಈ ಕಾರಣಕ್ಕೆ ಅವರನ್ನು ಜನ ಸೋಲಿಸಿದ್ದರು.. ಪ್ರದೀಪ್‌ ಈಶ್ವರ್‌ ಅವರನ್ನು ಗೆಲ್ಲಿಸಿದ್ದರು.. ಈಗ ಪ್ರದೀಪ್‌ ಈಶ್ವರ್‌ ಅವರು ಕೆಲಸ ಮಾಡಿದರೆ, ಜನರೊಂದಿಗೆ ಚೆನ್ನಾಗಿ ಬೆರೆತರೆ, ಮರ್ಯಾದಸ್ಥನಾಗಿ ಬಾಳಿದರೆ ಮಾತ್ರ ಚಿಕ್ಕಬಳ್ಳಾಪುರದ ಜನ ಬೆಳೆಸುತ್ತಾರೆ.. ಇಲ್ಲದಿದ್ದರೆ, ದೂರವೇ ಇಟ್ಟುಬಿಡುತ್ತಾರೆ..  ಹೀಗಾಗಿಯೇ ಪ್ರದೀಪ್‌ ಈಶ್ವರ್‌ ಎಷ್ಟು ಲೂಸ್‌ ಟಾಕ್‌ ಮಾತನಾಡುತ್ತಾರೋ ಅಷ್ಟು ಸುಧಾಕರ್‌ಗೆ ಲಾಭವಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ..

ಇದನ್ನೂ ಓದಿ; ನಟಿ ವಿರುದ್ಧ ಡ್ರಗ್ಸ್‌ ಸೇವನೆ, ಅಕ್ರಮ ಸಂಬಂಧ ಆರೋಪ; ಪತಿಯಿಂದ ದೂರು ದಾಖಲು!

ಸಾಕಷ್ಟು ಭರವಸೆ ಹುಟ್ಟಿಸಿದ್ದ ಪ್ರದೀಪ್‌ ಈಶ್ವರ್‌ ತಣ್ಣಗಾದರಾ..?;

ಸಾಕಷ್ಟು ಭರವಸೆ ಹುಟ್ಟಿಸಿದ್ದ ಪ್ರದೀಪ್‌ ಈಶ್ವರ್‌ ತಣ್ಣಗಾದರಾ..?; ಪ್ರದೀಪ್‌ ಈಶ್ವರ್‌ ಅವರು ಗೆಲ್ಲೋದಕ್ಕೆ ಅವರ ರೋಶಾವೇಶದ ಡೈಲಾಗ್‌ಗಳೂ ನೆರವಾಗಿದ್ದವು ನಿಜ.. ಆದ್ರೆ ಗೆದ್ದ ಮೇಲೆ ಪ್ರದೀಪ್‌ ಈಶ್ವರ್‌ ಕೆಲಸ ಮಾಡುವುದರ ಕಡೆ ಗಮನ ಹರಿಸಿದ್ದರು.. ಬೆಳಗ್ಗೆ ಎದ್ದರೆ ಗುಡ್‌ ಮಾರ್ನಿಂಗ್‌ ಚಿಕ್ಕಬಳ್ಳಾಪುರ ಎನ್ನುತ್ತಿದ್ದರು.. ವೆಬ್‌ ಸೈಟ್‌ ಶುರು ಮಾಡಿ, ಜನರ ಕಷ್ಟ ಸುಝ ವಿಚಾರಿಸುತ್ತಿದ್ದರು.. ಆದ್ರೆ ಅದು ಜಾಸ್ತಿ ದಿನ ಉಳಿದಿಲ್ಲ.. ಶುರುವಿನಲ್ಲಿರುವ ಉತ್ಸಾಹ ಕಳೆದುಹೋದಂತೆ ಕಾಣುತ್ತಿದೆ.. ಜನರ ಜೊತೆ ಇದ್ದು ಅಭಿವೃದ್ಧಿ ಮಾಡಬೇಕಾದ ಪ್ರದೀಪ್‌ ಈಶ್ವರ್‌, ವಿನಾಕಾರಣ ಮಾಧ್ಯಮಗಳ ಮುಂದೆ ನಿಂತು ಲೂಸ್‌ ಟಾಕ್‌ ಮಾತನಾಡುತ್ತಿದ್ದಾರೆ.. ಸುಖಾಸುಮ್ಮನೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರನ್ನು ಹಾಡಿ ಹೊಗಳುತ್ತಿದ್ದಾರೆ… ಇದು ಒಮ್ಮೊಮ್ಮೆ ನಗೆಪಾಟಲಿಗೀಡಾಗಿದ್ದೂ ಇದೆ..

ಇದನ್ನೂ ಓದಿ; 8 ಸಚಿವರು ಅಖಾಡಕ್ಕಿಳಿಯೋದು ಪಕ್ಕಾ; ಬೆಂ. ದಕ್ಷಿಣ ಕಾಂಗ್ರೆಸ್‌ ಅಭ್ಯರ್ಥಿ ಇವರೇ..!

ಪ್ರದೀಪ್‌ ಈಶ್ವರ್‌ ಮಾತುಗಳೇ ಸುಧಾಕರ್‌ಗೆ ಶ್ರೀರಕ್ಷೆಯಾ..?;

ಪ್ರದೀಪ್‌ ಈಶ್ವರ್‌ ಮಾತುಗಳೇ ಸುಧಾಕರ್‌ಗೆ ಶ್ರೀರಕ್ಷೆಯಾ..?; ವಿನಾಕಾರಣ ಒಬ್ಬ ವ್ಯಕ್ತಿ ಬಗ್ಗೆ ಯಾರೇ ಆದರೂ ಕೇವಲವಾಗಿ ಮಾತನಾಡಿದಾಗ ಜನಕ್ಕೆ ಅವರ ಬಗ್ಗೆ ಅಸಹನೆ ಹುಟ್ಟುತ್ತದೆ.. ಆ ಕ್ಷಣಕ್ಕೆ ಚೆನ್ನಾಗಿದ್ದಂತೆ ಅನಿಸಿ ಶಿಳ್ಳೆ, ಚಪ್ಪಾಳೆ ಹೊಡೆದರೂ, ನಮ್ಮ ಶಾಸಕರು ಹೀಗೆ ಮಾತನಾಡಬಾರದಿತ್ತು ಎಂದು ಹಿಂದೆ ಮಾತನಾಡುವ ಕಾರ್ಯಕರ್ತರು ಎಷ್ಟೋ ಮಂದಿ ಇದ್ದಾರೆ.. ಇನ್ನು ಸಾಮಾನ್ಯ ಜನರಂತೂ ನಾವು ಪ್ರದೀಪ್‌ ಈಶ್ವರ್‌ ಅವರನ್ನು ಅವರ ಭಾಷಣ ಗೆಲ್ಲಿಸಿದ್ದೇವೆ.. ಈಗ ಅವರ ಭಾಷಣ ಬೇಡ, ಕೆಲಸ ಬೇಕು ಎಂದು ಹೇಳುವವರು ಹೆಚ್ಚಾಗುತ್ತಿದ್ದಾರೆ… ಶಾಸಕರಾದ ಮೇಲೇ ಪ್ರದೀಪ್‌ ಈಶ್ವರ್‌ ತೂಕದ ಮಾತುಗಳನ್ನು ಆಡಿದರೆ ಅವರಿಗೆ ನಾಯಕರಾಗಿ ಬೆಳೆಯಬಹುದಾದ ಎಲ್ಲಾ ಅರ್ಹತೆ ಇದೆ.. ಆದ್ರೆ, ಈಗಲೂ ಸಣ್ಣ ಹುಡುಗನಂತೆ ಮಾತನಾಡುತ್ತಾರೆ ಎಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.. ಇತ್ತ ಬಿಜೆಪಿಯವರಂತೂ ಪ್ರದೀಪ್‌ ಈಶ್ವರ್‌ ಹಾಗೆಯೇ ಮಾತನಾಡಿದರೆ ನಮ್ಮ ಅಭ್ಯರ್ಥಿಗೆ ಲಾಭವಾಗುತ್ತೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ; ಒಂದಾದರಾ ಕುಮಾರ್‌ ಬಂಗಾರಪ್ಪ-ಮಧು ಬಂಗಾರಪ್ಪ..?; ಆ ಫೋಟೋ ಹೇಳ್ತಿರೋ ಕಥೆ ಏನು..?

Share Post