Politics

8 ಸಚಿವರು ಅಖಾಡಕ್ಕಿಳಿಯೋದು ಪಕ್ಕಾ; ಬೆಂ. ದಕ್ಷಿಣ ಕಾಂಗ್ರೆಸ್‌ ಅಭ್ಯರ್ಥಿ ಇವರೇ..!

ಬೆಂಗಳೂರು; ರಾಜ್ಯದ ಏಳು ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದ್ದ ಕಾಂಗ್ರೆಸ್‌ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಫೈನಲ್‌ ಮಾಡೋದಕ್ಕೆ ಭಾರೀ ಸರ್ಕಸ್‌ ನಡೆಸುತ್ತಿದೆ. ಉಳಿದ 21 ಕ್ಷೇತ್ರಗಳ ಪೈಕಿ ನಿನ್ನೆ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗಿದೆ. ಇನ್ನು 8 ಕ್ಷೇತ್ರಗಳ ಕಾಂಗ್ರೆಸ್‌ಗೆ ಕಗ್ಗಂಟಾಗಿಯೇ ಉಳಿದಿವೆ.. ಇಂದು ಕಾಂಗ್ರೆಸ್‌ ಪಟ್ಟಿ ಕೂಡಾ ರಿಲೀಸ್‌ ಆಗುವ ಎಲ್ಲಾ ಲಕ್ಷಣ ಕಾಣ್ತಾ ಇದೆ..

ಇದನ್ನೂ ಓದಿ; ಒಂದಾದರಾ ಕುಮಾರ್‌ ಬಂಗಾರಪ್ಪ-ಮಧು ಬಂಗಾರಪ್ಪ..?; ಆ ಫೋಟೋ ಹೇಳ್ತಿರೋ ಕಥೆ ಏನು..?

8 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಾರಾ ಮಂತ್ರಿಗಳು..?;

8 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಾರಾ ಮಂತ್ರಿಗಳು..?; ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಲಾಗಿದೆ.. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸಚಿವರನ್ನೇ ಕಣಕ್ಕಿಳಿಸಿದರೆ ಗೆಲುವು ಪಡೆಯಬಹುದು ಅನ್ನೋದು ಕಾಂಗ್ರೆಸ್‌ ಹೈಕಮಾಂಡ್‌ ಲೆಕ್ಕಾಚಾರ.. ಕಾಂಗ್ರೆಸ್‌ ಮಾಡಿಸಿದ ಆಂತರಿಕ ಸರ್ವೇನಲ್ಲೂ ಇದನ್ನೇ ಹೇಳಲಾಗಿದೆಯಂತೆ.. ಹೀಗಾಗಿ 12 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿತ್ತು.. ಆದ್ರೆ ಇದ್ರಲ್ಲಿ ಕೃಷ್ಣ ಬೈರೇಗೌಡ, ಮಹಾದೇವಪ್ಪ ಸೇರಿದಂತೆ ಹಲವು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ.. ಹೀಗಾಗಿ, 8 ಸಚಿವರನ್ನು ಕಣಕ್ಕಿಳಿಸೋದಕ್ಕೆ ಕೊನೇ ಹಂತದ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ;ಮೈಸೂರಿಗೆ ಯದುವೀರ್ ಯಾಕೆ..?; ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು‌ ಗೊತ್ತಾ..?

ಸೌಮ್ಯಾರೆಡ್ಡಿ ಬೇಡ ಎಂದರೂ ಒಪ್ಪಿಸಲು ಪ್ರಯತ್ನ;

ಸೌಮ್ಯಾರೆಡ್ಡಿ ಬೇಡ ಎಂದರೂ ಒಪ್ಪಿಸಲು ಪ್ರಯತ್ನ; ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದು ಎಂಬ ಬಗ್ಗೆ ಆಂತರಿಕ ಸಮೀಕ್ಷೆ ಮಾಡಿಸಲಾಗಿದೆ.. ಇದರಲ್ಲಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್‌ ಕೊಟ್ಟರೆ ಒಳ್ಳೆಯದೆಂಬ ವರದಿ ಬಂದಿದೆಯಂತೆ. ಹೀಗಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸೌಮ್ಯಾ ರೆಡ್ಡಿಯವರನ್ನು ಕಣಕ್ಕಿಳಿಸೋದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ. ಆದ್ರೆ ಸೌಮ್ಯಾ ರೆಡ್ಡಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ಅವರ ತಂದೆ ರಾಮಲಿಂಗಾರೆಡ್ಡಿ ಕೂಡಾ ತಮ್ಮ ಮಗಳಿಗೆ ಲೋಕಸಭಾ ಚುನಾವಣೆ ಬೇಡ ಎಂದು ಹೇಳುತ್ತಿದ್ದಾರೆ.

ಆದ್ರೆ ಸಮೀಕ್ಷೆಯಲ್ಲಿ ಸೌಮ್ಯಾರೆಡ್ಡಿಗೆ ಉತ್ತಮ ವಾತಾವರಣ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸೌಮ್ಯಾರೆಡ್ಡಿಯ ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಮಗಳನ್ನು ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಿದರೆ ಅದಕ್ಕೆ ಹಣ ಹೊಂದಿಸಬೇಕಾಗುತ್ತದೆ.. ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಖರ್ಚು ಮಾಡಿದ್ದೇವೆ. ಈಗ ಮತ್ತೆ ಚುನಾವಣೆಗೆ ಹಣ ಎಲ್ಲಿಂದ ತರೋದು ಎಂಬಂತೆ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಸ್ವಲ್ಪ ಸಮಯ ಕೊಡಿ ನಿರ್ಧಾರ ಮಾಡುತ್ತೇವೆ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಹಾಗೂ ಅವರ ಪುತ್ರಿಯ ಅಭಿಪ್ರಾಯಕ್ಕೆ ಕಾಂಗ್ರೆಸ್‌ ನಾಯಕರು ಕಾಯುತ್ತಿದ್ದಾರೆ.

ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; ರಾಘವೇಂದ್ರ ಸೋಲಿಸಲು, ಗೀತಾ ಗೆಲ್ಲಿಸಲು ಕಾರಣಗಳೇ ಇಲ್ಲ!

ಅಖಾಡಕ್ಕಿಳಿಯುತ್ತಾರಾ ಸಚಿವ ಸತೀಶ್‌ ಜಾರಕಿಹೊಳಿ?;

ಅಖಾಡಕ್ಕಿಳಿಯುತ್ತಾರಾ ಸಚಿವ ಸತೀಶ್‌ ಜಾರಕಿಹೊಳಿ; ಬೆಳಗಾವಿಯಿಂದ ಜಗದೀಶ್‌ ಶೆಟ್ಟರ್‌ ಬಿಜೆಪಿ ಅಭ್ಯರ್ಥಿಯಾಗೋದು ಬಹುತೇಕ ಪಕ್ಕಾ… ಇವರ ವಿರುದ್ಧ ಕಣಕ್ಕಿಳಿಸಲು ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮೃಣಾಲ್‌ ಹೆಬ್ಬಾಳ್ಕರ್‌ಗೆ ಟಿಕೆಟ್‌ ಕೇಳುತ್ತಿದ್ದಾರೆ.. ಆದ್ರೆ ಈ ಹಿಂದೆ ಸ್ಪರ್ಧೆ ಮಾಡಿದ್ದ ಸತೀಶ್‌ ಜಾರಕಿಹೊಳಿಯವರನ್ನೇ ಕಣಕ್ಕಿಳಿಸಿದರೆ ಹೇಗೆ ಎಂಬುದರ ಬಗ್ಗೆಯೂ ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸುತ್ತಿದೆ. ಆದ್ರೆ ಸತೀಶ್‌ ಜಾರಕಿಹೊಳಿಯವರು ಲಕ್ಷ್ಮಣರಾವ್‌ ಚಿಂಗಳೆಗೆ ಟಿಕೆಟ್‌ ನೀಡಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದಾರೆ… ಆದ್ರೆ ಚಿಂಗಳೆ ಬದಲು ಪ್ರಿಯಂಕಾ ಜಾರಕಿಹೊಳಿಯವರನ್ನು ಕಣಕ್ಕಿಳಿಸಲುವಂತೆ ಸುರ್ಜೇವಾಲಾ ಸಲಹೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.. ಹೀಗಾಗಿ ಕೆಲ ಕ್ಷೇತ್ರಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ.

ಇದನ್ನೂ ಓದಿ; Jayasudha; ಆ ಸ್ಟಾರ್‌ ಕ್ರಿಕೆಟರ್‌ ಮೇಲೆ ಕ್ರಷ್‌ ಇತ್ತು; ಹಿರಿಯ ನಟಿ ಜಯಸುಧಾ

ಚಿಕ್ಕಬಳ್ಳಾಪುರದಲ್ಲಿ ಯಾರಿಗೆ ಟಿಕೆಟ್‌..?;

ಚಿಕ್ಕಬಳ್ಳಾಪುರದಲ್ಲಿ ಯಾರಿಗೆ ಟಿಕೆಟ್‌..?; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ಹಾಗೂ ಗೌರಿಬಿದನೂರಿನ ಎನ್‌.ಹೆಚ್‌.ಶಿವಶಂಕರರೆಡ್ಡಿ ಟಿಕೆಟ್‌ ಬಯಸುತ್ತಿದ್ದಾರೆ.. ಆದ್ರೆ ಮೂವರಲ್ಲಿ ಯಾರಿಗೆ ಟಿಕೆಟ್‌ ಕೊಡೋದು ಎಂಬ ಕನ್ಫ್ಯೂಷನ್‌ ಕಾಂಗ್ರೆಸ್‌ ನಾಯಕರಿಗಿದೆ.. ವೀರಪ್ಪ ಮೊಯ್ಲಿ ಹೈಕಮಾಂಡ್‌ ಜೊತೆ ಚೆನ್ನಾಗಿದ್ದಾರೆ.. ಆದ್ರೆ ಅವರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲೋದು ಕಷ್ಟ ಎಂದು ಹೇಳಲಾಗುತ್ತಿದೆ.. ಹೀಗಾಗಿ, ರಕ್ಷಾ ರಾಮಯ್ಯ ಕಡೆ ಹೆಚ್ಚು ಒಲವಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; 22 ಕ್ಷೇತ್ರಕ್ಕೆ BJP ಟಿಕೆಟ್ ಫೈನಲ್; 3 ಕ್ಷೇತ್ರ ಪೆಂಡಿಂಗ್ ಯಾಕೆ?

Share Post