CrimePolitics

ಸಿಕ್ಕಿಬಿದ್ದ ಭವಾನಿ ರೇವಣ್ಣ ಕಾರು ಚಾಲಕ; ನಾಳೆ ಭವಾನಿ ರೇವಣ್ಣ ಬಂಧನವಾಗುತ್ತಾ..?

ಬೆಂಗಳೂರು; ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆ ಎನ್ನಲಾಗ್ತಿರುವ ಕೆಆರ್‌ ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ಪತ್ನಿ ಭವಾನಿ ರೇವಣ್ಣ ಅವರ ಬಂಧನವಾಗೋ ಸಾಧ್ಯತೆ ಇದೆ.. ನಾಳೆ ಅವರು ಎಸ್‌ಐಟಿ ವಿಚಾರಣೆಗೆ ಹಾಜರಾಗಲೇಬೇಕಿದ್ದು, ವಿಚಾರಣೆಗೆ ಹಾಜರಾದರೆ ಬಂಧನ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.. 

ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.. ಇಂದಿಗೆ ಆದೇಶ ಕಾಯ್ದಿರಿಸಿದ್ದ ಕೋರ್ಟ್‌ ಇಂದು ಭವಾನಿ ರೇವಣ್ಣ ಅವರ ಅರ್ಜಿಯನ್ನು ವಜಾ ಮಾಡಿದೆ.. ಇದರಿಂದಾಗಿ ಭವಾನಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿದೆ.. ಇನ್ನೊಂದೆಡೆ ಭವಾನಿ ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ ಎನ್ನಲಾಗ್ತಿದೆ.. ಅವರು ಕೆಲ ದಿನಗಳಿಂದ ಹೊಳೆ ನರಸೀಪುರದ ಮನೆಯಲ್ಲೂ ಇಲ್ಲ, ಇತ್ತ ತವರು ಮನೆಯಲ್ಲೂ ಇಲ್ಲ.. ಹೀಗಾಗಿ ಅವರು ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ.. ಎಸ್‌ಐಟಿ ಎರಡನೇ ಬಾರಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.. ನಾಳೆ ಅಂದರೆ ಜೂನ್‌ 1ರಂದು ಅವರು ವಿಚಾರಣೆಗೆ ಹಾಜರಾಗಬೇಕಿದೆ..

ಇನ್ನು ಇದೇ ವೇಳೆ ಭವಾನಿ ರೇವಣ್ಣ ಅವರ ಕಾರು ಡ್ರೈವರ್‌ನನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.. ನಾಲ್ಕು ದಿನಗಳ ಹಿಂದೆ ತನ್ನ ಅತ್ತೆ ಮನೆಗೆ ಬಂದಿದ್ದ ಭವಾನಿ ರೇವಣ್ಣ ಕಾರ್​ ಡ್ರೈವರ್​ ಅಜಿತ್​​ನನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಜಿತ್‌ನ ವಿಚಾರಣೆ ಮಾಡಿ ಆತನಿಂದ ಮಾಹಿತಿ ಭವಾನಿ ರೇವಣ್ಣರ ಬಂಧನ ಮಾಡೋ ಸಾಧ್ಯತೆ ಎನ್ನಲಾಗಿದೆ..

 

Share Post