ನಟಿ ವಿರುದ್ಧ ಡ್ರಗ್ಸ್ ಸೇವನೆ, ಅಕ್ರಮ ಸಂಬಂಧ ಆರೋಪ; ಪತಿಯಿಂದ ದೂರು ದಾಖಲು!
ಹೈದರಾಬಾದ್; ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗಿದ್ದ ನಟಿ ತನಗೆ ಮೋಸ ಮಾಡುತ್ತಿದ್ದು, ಅಕ್ರಮ ಸಂಬಂಧ ಹೊಂದಿದ್ದಾಳೆ. ಜೊತೆಗೆ ಡ್ರಗ್ಸ್ ಕೂಡಾ ಸೇವನೆ ಮಾಡುತ್ತಾಳೆ ಎಂದು ಪತಿ ದೂರು ಕೊಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಕಿರುತೆರೆ ಹಾಗೂ ಹಿರಿತೆರೆ ನಟಿ ಅಡ್ಡಾಲ ಐಶ್ವರ್ಯಾ ವಿರುದ್ಧ ಈ ದೂರು ನೀಡಲಾಗಿದೆ.
ಇದನ್ನೂ ಓದಿ; CAA ಜಾರಿ ವಿಚಾರ; ಇದು ಸ್ವೀಕಾರಾರ್ಹವಲ್ಲ ಎಂದು ನಟ ವಿಜಯ್!
ದೂರು ಕೊಟ್ಟ ಪಿನ್ನಿಂಟಿ ಶ್ಯಾಮ್;
ದೂರು ಕೊಟ್ಟ ಪಿನ್ನಿಂಟಿ ಶ್ಯಾಮ್; ನಟಿ ಅಡ್ಡಾಲ ಐಶ್ವರ್ಯಾ ಹಾಗೂ ಪಿನ್ನಿಂಟಿ ಶ್ಯಾಮ್ ಅವರು ಕಳೆದ ವರ್ಷದ ಸೆಪ್ಟೆಂಬರ್ 6ರಂದು ಮದುವೆಯಾಗಿದ್ದರು.. ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಇಬ್ಬರಿಗೂ ಒಪ್ಪಿಗೆಯಾಗಿ ಮದುವೆಯಾಗಿದ್ದರು.. ನಂತರ ಇವರು 2023ರ ಅಕ್ಟೋಬರ್ 6ಕ್ಕೆ ಹೈದರಾಬಾದ್‌ಗೆ ಬಂದು ಇಬ್ಬರೂ ಬಂದು ನೆಲೆಸಿದ್ದಾರೆ. ಆದ್ರೆ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಬಂದಿದೆ. ಇದೀಗ ಪತಿ ಪಿನ್ನಿಂಟಿ ಶ್ಯಾಮ್ ಅವರು ಪತ್ನಿ ನಟಿ ಅಡ್ಡಾಲ ಐಶ್ವರ್ಯಾ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಐಶ್ವರ್ಯಾ ನನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ನನಗೆ ನಾನಾ ರೀತಿಯಲ್ಲಿ ಕಿರುಕುಳ ನೀಡಿದ್ದಾಳೆ ಎಂದು ಪತಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ;ಬಿಜೆಪಿ ವಿರುದ್ಧ ತಿರುಗಿಬೀಳ್ತಾರಾ ಈಶ್ವರಪ್ಪ..?; ಶಿವಮೊಗ್ಗದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಚಿಂತನೆ!
ಪತ್ನಿ ಡ್ರಗ್ಸ್ ಸೇವಿಸುತ್ತಾಳೆ, ಅಕ್ರಮ ಸಂಬಂಧ ಹೊಂದಿದ್ದಾಳೆ;
ಪತ್ನಿ ಡ್ರಗ್ಸ್ ಸೇವಿಸುತ್ತಾಳೆ, ಅಕ್ರಮ ಸಂಬಂಧ ಹೊಂದಿದ್ದಾಳೆ; ಅಡ್ಡಾಲ ಐಶ್ವರ್ಯಾ ನಿಜ ಸ್ವರೂಪ ಕೆಲ ದಿನಗಳ ಹಿಂದಷ್ಟೇ ಬಯಲಾಗಿದೆ. ಆಕೆಗೆ ಅಕ್ರಮ ಸಂಬಂಧ ಇದೆ. ಡ್ರಗ್ಸ್, ಸಿಗರೇಟ್ ಸೇವನೆ ಮಾಡುತ್ತಾಳೆ.. ಇದನ್ನು ನನಗೆ ಹೇಳದೇ ಮದುವೆಯಾಗಿದ್ದಾಳೆ. ನನಗೆ ಮೋಸ ಮಾಡಲಾಗಿದೆ. ಜೊತೆಗೆ ಆಕೆಗೆ ಬಾಲ್ಯ ವಿವಾಹ ಕೂಡಾ ಆಗಿತ್ತು ಅನ್ನೋದು ಬಯಲಾಗಿದೆ ಎಂದು ಪತಿ ಪಿನ್ನಿಂಟಿ ಶ್ಯಾಮ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ; 8 ಸಚಿವರು ಅಖಾಡಕ್ಕಿಳಿಯೋದು ಪಕ್ಕಾ; ಬೆಂ. ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಇವರೇ..!
25 ಲಕ್ಷ ರೂಪಾಯಿ ಪಡೆದಿರುವ ಆರೋಪ;
25 ಲಕ್ಷ ರೂಪಾಯಿ ಪಡೆದಿರುವ ಆರೋಪ; ಪಿನ್ನಿಂಟಿ ಶ್ಯಾಮ್ ಅವರು ಪತ್ನಿ ಅಡ್ಡಾಲ ಐಶ್ವರ್ಯಾ ವಿರುದ್ಧ ಇನ್ನೂ ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ.. ನನ್ನ ಬಳಿ ಆಕೆ ಸುಳ್ಳು ಹೇಳಿ 25 ಲಕ್ಷ ರೂಪಾಯಿ ಹಣ ಕಿತ್ತುಕೊಂಡಿದ್ದಾಳೆ. ಸಾಲದೆಂಬಂತೆ ಈಗಲೂ ಕಿರುಕುಳ ನೀಡುತ್ತಿದ್ದಾಳೆ. ಡ್ರಗ್ಸ್ ಸೇವನೆ ಮಾಡುವುದಲ್ಲದೆ ಅಕ್ರಮ ಸಂಬಂಧ ಕೂಡಾ ಇಟ್ಟುಕೊಂಡಿದ್ದಾಳೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಪತಿ ಪಿನ್ನಿಂಟಿ ಶ್ಯಾಮ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ; ಒಂದಾದರಾ ಕುಮಾರ್ ಬಂಗಾರಪ್ಪ-ಮಧು ಬಂಗಾರಪ್ಪ..?; ಆ ಫೋಟೋ ಹೇಳ್ತಿರೋ ಕಥೆ ಏನು..?
ಯಾವುದೇ ಪ್ರತಿಕ್ರಿಯೆ ನೀಡದ ಅಡ್ಡಾಲ ಐಶ್ವರ್ಯಾ;
ಯಾವುದೇ ಪ್ರತಿಕ್ರಿಯೆ ನೀಡದ ಅಡ್ಡಾಲ ಐಶ್ವರ್ಯಾ; ನಟಿ ಅಡ್ಡಾಲ ಐಶ್ವರ್ಯಾ ಕಿರುತೆರೆಯ ಸೀರಿಯಲ್‌ಗಳಲ್ಲಿ ನಟನೆ ಮಾಡುತ್ತಾರೆ. ಆಗಾಗ ಸಿನಿಮಾಗಳಲ್ಲೂ ಬಣ್ಣ ಹಚ್ಚುತ್ತಾರೆ.. ಇದೀಗ ಅವರ ವಿರುದ್ಧ ಗಂಭೀರ ಆರೋಪ ಬಂದಿದೆ.. ಆದ್ರೆ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅವರ ವಾದ ಏನಿದೆಯೋ ಗೊತ್ತಿಲ್ಲ. ಆದ್ರೆ ಗಂಡ ಮಾತ್ರ ಪತ್ನಿ ಕಿರುಕುಳ ನೀಡುತ್ತಿದ್ದಾಳೆ. ವಿಚ್ಛೇದನ ಪಡೆಯೋದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಮೋಸ ಹೋಗುವ ಅನೇಕ ಪ್ರಕರಣ ಈಗ ಹೆಚ್ಚಾಗುತ್ತಿವೆ. ಕೆಲವರು ಮೋಸ ಮಾಡುವುದಕ್ಕಾಗಿಯೇ ಮ್ಯಾಟ್ರಿಮೋನಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುತ್ತಿದ್ದಾರೆ… ಹೀಗಾಗಿಯೇ ಇತ್ತೀಚೆಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಮ್ಯಾಟ್ರಿಮೋನಿ ಆಪ್‌ಗಳಿಗೆ ನಿರ್ಬಂಧ ಹೇರಿತ್ತು.
ಇದನ್ನೂ ಓದಿ; ಶಿವಮೊಗ್ಗ ಲೋಕಸಭಾ; ರಾಘವೇಂದ್ರ ಸೋಲಿಸಲು, ಗೀತಾ ಗೆಲ್ಲಿಸಲು ಕಾರಣಗಳೇ ಇಲ್ಲ!