Politics

ಒಂದಾದರಾ ಕುಮಾರ್‌ ಬಂಗಾರಪ್ಪ-ಮಧು ಬಂಗಾರಪ್ಪ..?; ಆ ಫೋಟೋ ಹೇಳ್ತಿರೋ ಕಥೆ ಏನು..?

ಬೆಂಗಳೂರು; ಶಿವಮೊಗ್ಗ ರಾಜಕಾರಣ ನಿಂತಿರೋದು ಇಬ್ಬರು ಮಾಜಿ ಸಿಎಂಗಳ ಕುಟುಂಬಗಳ ಮೇಲೆ.. ಒಂದು ಕಾಲಕ್ಕೆ ಮಾಜಿ ಸಿಎಂ ಬಂಗಾರಪ್ಪ ಕುಟುಂಬಕ್ಕೆ ಸಾಟಿಯೇ ಇಲ್ಲದಂತಿತ್ತು.. ಈಗ ಯಡಿಯೂರಪ್ಪ ಕುಟುಂಬದ ರಾಜಕೀಯ ಒಂದು ಕೈ ಮೇಲಾಗಿದೆ.. ಇದಕ್ಕೆ ಕಾರಣವೂ ಇಲ್ಲದಿಲ್ಲ… ಬಂಗಾರಪ್ಪ ಕುಟುಂಬ ಎರಡು ಹೋಳಾಗಿರುವುದು… ಮಧು ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದರೆ, ಕುಮಾರ್‌ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ… ಚುನಾವಣೆಯಲ್ಲಿ ಇಬ್ಬರೂ ಪರಸ್ಪರ ಎದುರಾಳಿಗಳು ಕೂಡಾ… ಫಲಿತಾಂಶದಲ್ಲಿ ಗೆಲುವು, ಸೋಲು ಎರಡೂ ಅಟ್‌ ಎ ಟೈಮ್‌ ಬಂಗಾರಪ್ಪ ಕುಟುಂಬದ್ದೇ ಆಗಿರುತ್ತದೆ… ಯಾವುದೋ ಕೌಟುಂಬಿಕ ಕಾರಣಕ್ಕೆ ಕಿತ್ತಾಡಿಕೊಂಡಿದ್ದ ಈ ಇಬ್ಬರು ಸಹೋದರರು ಒಂದಾದರಾ..? ಕುಮಾರಸ್ವಾಮಿ ಬಂಗಾರಪ್ಪ ಸಹೋದರನಿಗೆ ಸಾಥ್‌ ಕೊಡೋದಕ್ಕೆ ಸಿದ್ಧರಾದರಾ..? ಎಂಬ ಬಗ್ಗೆ ಈಗ ಕುತೂಹಲಕ್ಕೆ ಕಾರಣವಾಗಿದೆ..

ಇದನ್ನೂ ಓದಿ;ಶಿವಮೊಗ್ಗ ಲೋಕಸಭಾ; ರಾಘವೇಂದ್ರ ಸೋಲಿಸಲು, ಗೀತಾ ಗೆಲ್ಲಿಸಲು ಕಾರಣಗಳೇ ಇಲ್ಲ!

ತಂದೆ-ಸಹೋದರನ ಜೊತೆಗಿನ ಫೋಟೋ ಫೋಸ್ಟ್‌;

ತಂದೆ-ಸಹೋದರನ ಜೊತೆಗಿನ ಫೋಟೋ ಫೋಸ್ಟ್‌; ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಸಹೋದರ ಮಧು ಬಂಗಾರಪ್ಪ ವಿರುದ್ಧ ಕುಮಾರ್‌ ಬಂಗಾರಪ್ಪ ಸೋಲನುಭವಿಸಿದ್ದರು.. ಇದಾದ ಮೇಲೆ ಕುಮಾರ್‌ ಬಂಗಾರಪ್ಪ ಸಂಪೂರ್ಣವಾಗಿ ಸೈಲೆಂಟ್‌ ಆಗಿಬಿಟ್ಟಿದ್ದರು.. ಎಲ್ಲರೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿಲ್ಲ.. ಈ ನಡುವೆ ಕುಮಾರ್‌ ಬಂಗಾರಪ್ಪ ಅವರನ್ನೇ ಕಾಂಗ್ರೆಸ್‌ಗೆ ಕರೆತಂದು ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಬದಲಾಗಿ, ಅವರ ಸಹೋದರಿಗ ಗೀತಾ ಶಿವರಾಜ್‌ ಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಲಾಗಿದೆ.. ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ಪ್ರಚಾರಕ್ಕೆ ಸಜ್ಜಾಗುತ್ತಿದ್ದಂತೆ, ಕುಮಾರ್‌ ಬಂಗಾರಪ್ಪ ಅವರು ಫೋಟೋವೊಂದನ್ನು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ತಂದೆ ಬಂಗಾರಪ್ಪ ಹಾಗೂ ಸಹೋದರ ಮಧು ಬಂಗಾರಪ್ಪ ಜೊತೆ ಡೊಳ್ಳು ಬಾರಿಸುತ್ತಿರುವ ಹಳೆಯ ಫೋಟೋ ಅದು… ಈ ಫೊಟೋ ಲೋಕಸಭಾ ಚುನಾವಣೆಗಾಗಿ ಬಂಗಾರಪ್ಪರ ಇಬ್ಬರೂ ಪುತ್ರರೂ ಒಂದಾಗುತ್ತಿರುವ ಸಂದೇಶವನ್ನು ರವಾನಿಸುವಂತಿದೆ…

ಇದನ್ನೂ ಓದಿ;ಚಿಕ್ಕಬಳ್ಳಾಪುರ ಲೋಕಸಭಾ; ಕರ್ನಾಟಕ ಒಕ್ಕಲಿಗರು, ಆಂಧ್ರ ರೆಡ್ಡಿಗಳು..!; ಏನಿದು ಲೆಕ್ಕಾಚಾರ..?

ಸಹೋದರರು ಒಂದಾಗಬೇಕೆನ್ನುತ್ತಿರುವ ಬೆಂಬಲಿಗರು;

ಸಹೋದರರು ಒಂದಾಗಬೇಕೆನ್ನುತ್ತಿರುವ ಬೆಂಬಲಿಗರು; ಕುಮಾರ್‌ ಬಂಗಾರಪ್ಪ ಅವರು ಈ ಫೋಟೋ ಪೋಸ್ಟ್‌ ಮಾಡಿದ ಕೆಲ ಹೊತ್ತಿನಲ್ಲೇ ನೂರಾರು ಬೆಂಬಲಿಗರು ಕಮೆಂಟ್‌ ಮಾಡಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿರಲಿ, ಸಹೋದರರಿಬ್ಬರೂ ಒಂದಾಗಬೇಕು ಎಂದಿದ್ದಾರೆ.. ಎಲ್ಲರೂ ಕೂಡಾ ಖುಷಿಯಿಂದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.. ಬಂಗಾರಪ್ಪ ಕುಟುಂಬ ಒಂದಾಗಬೇಕು ಎಂಬುದೇ ನಮ್ಮ ಆಸೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದನ್ನು ನೋಡುತ್ತಿದ್ದರೆ, ಲೋಕಸಭಾ ಚುನಾವಣೆ ಕಾರಣ ಇಟ್ಟುಕೊಂಡು ಬಂಗಾರಪ್ಪ ಕುಟುಂಬ ಒಂದಾಗುತ್ತಿರುವ ಬಗ್ಗೆ ಮುನ್ಸೂಚನೆ ಕೊಟ್ಟಂತೆ ಕಾಣುತ್ತಿದೆ…

ಇದನ್ನೂ ಓದಿ;ಮೈಸೂರು-ಕೊಡಗು ಲೋಕಸಭಾ; ಶೃಂಗೇರಿಗೆ ಭೇಟಿ ನೀಡಿದ ಯದುವೀರ್‌!

ಬಂಗಾರಪ್ಪ ಅವರ ಶಿಷ್ಯ ಹಾಗೂ ಬಂಗಾರಪ್ಪ ಕುಟುಂಬದ ಹಿತೈಷಿಯೂ ಆಗಿರುವ ಡಿ.ಕೆ.ಶಿವಕುಮಾರ್‌ ಇಬ್ಬರೂ ಸಹೋದರರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಕುಮಾರ್‌ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಲೋಕಸಭಾ ಅಖಾಡಕ್ಕೆ ಇಳಿಸಲಾಗುತ್ತೆ ಎಂದು ಹೇಳಲಾಗುತ್ತಿತ್ತು. ಕುಮಾರ್‌ ಬಂಗಾರಪ್ಪ ಚುನಾವಣಾ ಅಖಾಡಕ್ಕಿಳಿಯಲು ಒಪ್ಪಿಲ್ಲದಿರಬಹುದು.. ಆದ್ರೆ ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಗೆಲ್ಲಿಸುವುದಕ್ಕಾಗಿ ಕುಮಾರ್‌ ಬಂಗಾರಪ್ಪ ಸಹೋದರನಿಗೆ ಬಲ ನೀಡುವ ಕುರಿತು ಯೋಚನೆ ಮಾಡಿದಂತೆ ಕಾಣುತ್ತಿದೆ. ಈ ಬಗ್ಗೆ ಕುಟುಂಬದವರೆಲ್ಲಾ ಮತುಕತೆ ಮಾಡಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ..

ಇದನ್ನೂ ಓದಿ;ಇಂದೇ ಬಿಜೆಪಿ ಎರಡನೇ ಪಟ್ಟಿ ರಿಲೀಸ್‌; ರಾಜ್ಯದ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌!

ಅಪ್ಪನ ಗೆಲುವಿಗಾಗಿ ಒಂದಾಗಿದ್ದ ಸಹೋದರರು;

ಅಪ್ಪನ ಗೆಲುವಿಗಾಗಿ ಒಂದಾಗಿದ್ದ ಸಹೋದರರು; 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಂಗಾರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದರು… ಇದಕ್ಕೂ ಮೊದಲು ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರಿಂದ ಕುಮಾರ್‌ ಬಂಗಾರಪ್ಪ ದೂರವೇ ಇದ್ದರು… ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗುತ್ತಿರಲಿಲ್ಲ.. ಆದ್ರೆ 2009ರಲ್ಲಿ ಬಂಗಾರಪ್ಪ ಅವರು ಲೋಕಸಭಾ ಅಖಾಡಕ್ಕಿಳಿಯುತ್ತಿದ್ದಂತೆ ಇಬ್ಬರೂ ಸಹೋದರರು ಒಂದಾದರು.. ಮಧು ಬಂಗಾರಪ್ಪ ಹಾಗೂ ಕುಮಾರ್‌ ಬಂಗಾರಪ್ಪ ಇಬ್ಬರೂ ಸೇರಿ ಅಪ್ಪನನ್ನು ಗೆಲ್ಲಿಸಲು ಸಾಕಷ್ಟು ಹೋರಾಟ ಮಾಡಿದರು.. ಆದ್ರೆ ಅಂದು ಬಂಗಾರಪ್ಪ ಅವರ ವಿರುದ್ಧ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.

ಇದನ್ನೂ ಓದಿ;ಮೈಸೂರಿಗೆ ʻಯಧುವೀರಾʼಧಿ ವೀರ; ಟಿಕೆಟ್‌ ಬೇಟೆಯ ಹೋಪ್‌ ಕಳೆದುಕೊಳ್ತಾ ʻಸಿಂಹʼ?

ಅಪ್ಪನನ್ನು ಗೆಲ್ಲಿಸುವ ಶಪಥ ಮಾಡಿದ್ದ ಕುಮಾರ್‌ ಬಂಗಾರಪ್ಪ;

ಅಪ್ಪನನ್ನು ಗೆಲ್ಲಿಸುವ ಶಪಥ ಮಾಡಿದ್ದ ಕುಮಾರ್‌ ಬಂಗಾರಪ್ಪ; ಏನೇ ಭಿನ್ನಾಭಿಪ್ರಾಯಗಳಿದ್ದರೂ  ಬಂಗಾರಪ್ಪ ಕುಟುಂಬ 2009ರಲ್ಲಿ ಒಂದಾಗಿತ್ತು. ಈ ವೇಳೆ ಕುಮಾರ್‌ ಬಂಗಾರಪ್ಪ ಅವರು ಒಂದು ಶಪಥ ಕೂಡಾ ಮಾಡಿದ್ದರು.. ನನ್ನ ಅಪ್ಪನನ್ನು ಗೆಲ್ಲಿಸಿಯೇ ತಲೆಕೂದಲನ್ನು ತೆಗೆಸುತ್ತೇನೆ ಎಂದು ಹೇಳಿದ್ದರು.. ಆದ್ರೆ ದುರದೃಷ್ಟವಶಾತ್‌ ಬಂಗಾರಪ್ಪರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಕುಮಾರ್‌ ಬಂಗಾರಪ್ಪ ಶಪಥವನ್ನು ಮುಂದುವರೆಸಲಿಲ್ಲ.. ಅವರು ಬಿಜೆಪಿ ಸೇರಿಕೊಂಡು ಒಂದೆರಡು ಬಾರಿ ಶಾಸಕರೂ ಆದರು.. ಇದೀಗ, ಮತ್ತೆ ಗೀತಾ ಶಿವರಾಜ್‌ಕುಮಾರ್‌ ಕಾರಣದಿಂದ ಬಂಗಾರಪ್ಪ ಕುಟುಂಬ ಒಂದಾಗುವ ಕಾಲ ಬಂದಂತೆ ಕಾಣುತ್ತಿದೆ..

ಇದನ್ನೂ ಓದಿ; ಸ್ವಂತ ಮನೆ ಕಟ್ಟುವವರಿಗೆ “ನಂಬಿಕೆ ನಕ್ಷೆ”; ಏನಿದು ಡಿ.ಕೆ.ಶಿವಕುಮಾರ್‌ ಹೇಳಿದೆ ನಂಬಿಕೆ ಮಾತು?

ರಾಘವೇಂದ್ರ ವಿರುದ್ಧ ಗೆಲ್ಲಲು ಹರಸಾಹಸವೇ ಮಾಡಬೇಕು;

ರಾಘವೇಂದ್ರ ವಿರುದ್ಧ ಗೆಲ್ಲಲು ಹರಸಾಹಸವೇ ಮಾಡಬೇಕು; ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.. ಅಂದು ಬಂಗಾರಪ್ಪ ಅವರನ್ನು ಸೋಲಿಸಿದ್ದ ರಾಘವೇಂದ್ರ ಅವರೇ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಾರೆ.. ಇಂತಹ ಸಂದರ್ಭದಲ್ಲಿ ಬಂಗಾರಪ್ಪ ಕುಟುಂಬ ಒಂದಾಗಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ.. ಬಂಗಾರಪ್ಪ ಕುಟುಂಬ ಒಂದಾದರೆ ಮಾತ್ರ ರಾಘವೇಂದ್ರ ವಿರುದ್ಧ ಗೆಲ್ಲೋದಕ್ಕೆ ಹರಸಾಹಸ ಮಾಡಬಹುದು.. ಬಂಗಾರಪ್ಪ ಅಭಿಮಾನಿಗಳೆಲ್ಲಾ ಇಬ್ಬರೂ ಸಹೋದರರು ಒಂದಾಗುವುದನ್ನು ಬಯಸುತ್ತಿದ್ದಾರೆ. ಆದ್ರೆ ಕುಮಾರ್‌ ಬಂಗಾರಪ್ಪ ಯಾವ ಕಾರಣಕ್ಕೆ ಈ ಫೋಟೋ ಹಾಕಿದ್ದಾರೋ ಗೊತ್ತಿಲ್ಲ.. ಆದ್ರೆ, ಆ ಫೋಟೋ ಕಾರಣದಿಂದ ಬಂಗಾರಪ್ಪ ಕುಟುಂಬ ಒಂದಾಗಬಹುದು ಅನ್ನೋ ಚರ್ಚೆ ಶುರುವಾಗಿದೆ.. ಜೊತೆಗೆ ಒಂದಾಗಲಿ ಎಂದು ನೂರಾರು ಮನಸ್ಸು ಬಯಸುವಂತಾಗಿದೆ..

 

Share Post