Loksabha; ಬೆಂ.ಗ್ರಾಮಾಂತರ, ಮೈಸೂರಲ್ಲಿ BJP ಸ್ಪೆಷಲ್ ಕ್ಯಾಂಡಿಡೇಟ್ಸ್; ಸಿಎಂ, ಡಿಸಿಎಂಗೆ ಚಿಂತೆ!
ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಎರಡು ಸವಾಲುಗಳು ಎದುರಾಗಿವೆ.. ಅವರೀಗ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ಸಿಗೆ ಗೆಲ್ಲಿಸಿಕೊಡಬೇಕು.. ಜೊತೆಗೆ ತಮ್ಮ ತವರು ಕ್ಷೇತ್ರಗಳನ್ನು ಕೂಡಾ ಗೆಲ್ಲಿಸಿಕೊಡಬೇಕು.. ಇವರೆಡೂ ಕೂಡಾ ಈ ಇಬ್ಬರೂ ನಾಯಕರಿಗೆ ಸವಾಲಾಗಿದೆ.. ಯಾಕಂದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರ ಬೆಂಗಳೂರು ಗ್ರಾಮಾಂತರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಶೇಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.. ಈ ಇಬ್ಬರೂ ಅಭ್ಯರ್ಥಿಗಳೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಕ್ಕೆ ತುಂಬಾ ಇಷ್ಟವಾದಂತಹವರು.. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸೋದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ದೊಡ್ಡ ಸವಾಲು..
ಇದನ್ನೂ ಓದಿ; ನಟಿ ವಿರುದ್ಧ ಡ್ರಗ್ಸ್ ಸೇವನೆ, ಅಕ್ರಮ ಸಂಬಂಧ ಆರೋಪ; ಪತಿಯಿಂದ ದೂರು ದಾಖಲು!
ಬೆಂಗಳೂರು ಗ್ರಾಮಾಂತಕ್ಕೆ ಡಾ.ಸಿ.ಎನ್.ಮಂಜುನಾಥ್;
ಬೆಂಗಳೂರು ಗ್ರಾಮಾಂತಕ್ಕೆ ಡಾ.ಸಿ.ಎನ್.ಮಂಜುನಾಥ್; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್ ನ ಡಿ.ಕೆ.ಸುರೇಶ್.. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಇವರೊಬ್ಬರೇ ಕಾಂಗ್ರೆಸ್‌ನಿಂದ ಗೆದ್ದು ಸಂಸತ್ ಪ್ರವೇಶ ಮಾಡಿದ್ದಿದ್ದು.. ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರರಾಗಿರುವ ಡಿ.ಕೆ.ಸುರೇಶ್ ಎರಡು ಬಾರಿ ಸಂಸದರಾಗಿದ್ದಾರೆ.. ಈಗ ಸತತ ಮೂರನೇ ಬಾರಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.. ಇವರ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಕಣಕ್ಕಿಳಿಯೋದು ಬಹುತೇಕ ಪಕ್ಕಾ.. ಹೀಗಾಗಿಯೇ ಈ ಕ್ಷೇತ್ರ ಸಾಕಷ್ಟು ರಂಗೇರಿದೆ..
ಇದನ್ನೂ ಓದಿ; CAA ಜಾರಿ ವಿಚಾರ; ಇದು ಸ್ವೀಕಾರಾರ್ಹವಲ್ಲ ಎಂದು ನಟ ವಿಜಯ್!
ಡಾ.ಸಿ.ಎನ್. ಮಂಜುನಾಥ್ ಅವರು ಜಯದೇವ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ.. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ… ರಾಜ್ಯಾದ್ಯಂತ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.. ಜಾತ್ಯತೀತವಾಗಿ, ಪಕ್ಷಾತಾತೀತವಾಗಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಇಷ್ಟಪಡುವವರು ದೊಡ್ಡ ಮಟ್ಟದಲ್ಲಿದ್ದಾರೆ.. ಇದರ ಜೊತೆಗೆ ಅವರು ಮಾಜಿ ಪ್ರಧಾನಿ ದೇವೇಗೌಡರ ಅಳಿಯ.. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಸಾಕಷ್ಟು ಬಲಯುತವಾಗಿದೆ.. ಇದರ ಜೊತೆಗೆ ಬಿಜೆಪಿ ಕೂಡಾ ಇತ್ತೀಚಿನ ದಿನಗಳಲ್ಲಿ ಪ್ರಬಲವಾಗಿದೆ.. ಎರಡೂ ಮತಗಳು ಹಾಗೂ ಡಾ.ಸಿ.ಎನ್.ಮಂಜುನಾಥ್ ಅವರ ಒಳ್ಳೆಯ ಕೆಲಸಗಳಿಂದಾಗಿ ಅವರಿಗೆ ವೈಯಕ್ತಿಕವಾಗಿ ಬರುವ ಮತಗಳ ಕಾರಣದಿಂದಾಗಿ, ಸಿ.ಎನ್.ಮಂಜುನಾಥ್ ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ; 8 ಸಚಿವರು ಅಖಾಡಕ್ಕಿಳಿಯೋದು ಪಕ್ಕಾ; ಬೆಂ. ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಇವರೇ..!
ಇನ್ನು ಡಿ.ಕೆ.ಸುರೇಶ್ ಅವರು ಈಗಾಗಲೇ ಎರಡು ಬಾರಿ ಗೆದ್ದಿದ್ದಾರೆ.. ಜೊತೆಗೆ ಅವರ ಸಹೋದರ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಆಗಿದ್ದಾರೆ.. ಹೀಗಾಗಿ, ಮೂರನೇ ಬಾರಿ ಗೆಲ್ಲೋದಕ್ಕೆ ಸಾಕಷ್ಟು ಶ್ರಮ ವಹಿಸಲಾಗುತ್ತಿದೆ.. ಆದ್ರೆ ಕಳೆದ ಚುನಾವಣೆಯಲ್ಲಿಯೇ ಡಿ.ಕೆ.ಸುರೇಶ್ ಅವರು ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದರು.. ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮತಗಳು ಒಂದಾಗಿದ್ದರೂ, ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬಂದಿದ್ದವು.. ಇದೀಗ ಬಿಜೆಪಿಯಿಂದ ಕಣಕ್ಕಿಳಿಯುತ್ತಿರೋದು ಡಾ.ಸಿ.ಎನ್.ಮಂಜುನಾಥ್ ಅವರು.. ಹೀಗಾಗಿ ಅವರ ವಿರುದ್ಧ ಗೆಲ್ಲೋದು ಡಿ.ಕೆ.ಸಹೋದರರಿಗೆ ದೊಡ್ಡ ಸವಾಲೇ ಆಗಿದೆ..
ಇದನ್ನೂ ಓದಿ; ಬಿಜೆಪಿ ವಿರುದ್ಧ ತಿರುಗಿಬೀಳ್ತಾರಾ ಈಶ್ವರಪ್ಪ..?; ಶಿವಮೊಗ್ಗದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಚಿಂತನೆ!
ಮೈಸೂರು-ಕೊಡಗು ಕ್ಷೇತ್ರಕ್ಕೆ ರಾಜ ವಂಶಸ್ಥ ಯದುವೀರ್;
ಮೈಸೂರು-ಕೊಡಗು ಕ್ಷೇತ್ರಕ್ಕೆ ರಾಜ ವಂಶಸ್ಥ ಯದುವೀರ್; ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ.. ಹೀಗಾಗಿ ಇದನ್ನು ಗೆಲ್ಲಿಸಿಕೊಂಡು ಮಾನ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಅವರಿಗಿದೆ.. ಆದ್ರೆ ಈ ಬಾರಿ ಬಿಜೆಪಿ ಇಲ್ಲೂ ಕೂಡಾ ವಿಶೇಷ ವ್ಯಕ್ತಿಯೊಬ್ಬರನ್ನು ಅಖಾಡಕ್ಕಿಳಿಸುತ್ತಿದೆ… ಅವರೇ ಮೈಸೂರು ಸಂಸ್ಥಾನದ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್..
ಯದುವೀರ್ ಅವರು ರಾಜಕೀಯಕ್ಕೆ ಬರಬೇಕೆಂದು ಯೋಚನೆ ಮಾಡಿರಲಿಲ್ಲ.. ಆದ್ರೆ ಬಿಜೆಪಿ ನಾಯಕರೇ ಬಲವಂತ ಮಾಡಿ ಅವರನ್ನು ರಾಜಕೀಯಕ್ಕೆ ಕರೆತರುತ್ತಿದ್ದಾರೆ.. ಮೈಸೂರು ಭಾಗದಲ್ಲಿ ರಾಜವಂಶಸ್ಥರಿಗೆ ಈಗಲೂ ವಿಶೇಷವಾದ ಗೌರವವಿದೆ.. ಯದುವೀರ್ ಕೂಡಾ ಆಗಾಗ ಸರಳತೆ ಪ್ರದರ್ಶಿಸುತ್ತಿದ್ದು, ಜನರ ಜೊತೆ ಬೆರೆಯುವ ಪ್ರಯತ್ನ ಮಾಡಿದ್ದಾರೆ… ಜೊತೆಗೆ ಅವರು ಯಾವಾಗ ಮಾತನಾಡಿದರೂ ಅವರ ಮಾತುಗಳು ತೂಕವಾಗಿರುತ್ತವೆ.. ಹೀಗಾಗಿ ಯದುವೀರ್ ಬಗ್ಗೆ ಜನಕ್ಕೆ ಪ್ರೀತಿಯ ಜೊತೆಗೆ ನಮಗೆ ಏನಾದೂ ಒಳ್ಳೆಯದು ಮಾಡುತ್ತಾರೆ ಎಂಬ ಆಸಕ್ತಿ ಇದೆ… ಯದುವೀರ್ ಸ್ಪರ್ಧೆ ಮಾಡಿದರೆ ಪಕ್ಷ ಮೀರಿ ಜನಗಳು ಮತ ಹಾಕುವ ಸಾಧ್ಯತೆ ಇದೆ.. ಹೀಗಾಗಿ ತವರು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳೋದು ದೊಡ್ಡ ಸವಾಲು ಎಂದೇ ಹೇಳಬಹುದು.. ಇನ್ನು ಸಿದ್ದರಾಮಯ್ಯ ಮೊದಲು ತಮ್ಮ ಮಗ ಯತೀಂದ್ರ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದರು.. ಆದ್ರೆ ಈಗ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತಿದೆ.. ಆದ್ರೆ ಯಾರೇ ನಿಂತರೂ ಗೆಲ್ಲೋದಕ್ಕೆ ದೊಡ್ಡ ಸಾಹಸವನ್ನೇ ಮಾಡಬೇಕಿದೆ..
ಇದನ್ನೂ ಓದಿ; ಮೈಸೂರಿಗೆ ಯದುವೀರ್ ಯಾಕೆ..?; ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು ಗೊತ್ತಾ..?
ಎರಡೂ ಕ್ಷೇತ್ರ ಸೋತರೆ ಸಿಎಂ, ಡಿಸಿಎಂಗೆ ಅವಮಾನ;
ಎರಡೂ ಕ್ಷೇತ್ರ ಸೋತರೆ ಸಿಎಂ, ಡಿಸಿಎಂಗೆ ಅವಮಾನ; ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.. ಐದು ಗ್ಯಾರೆಂಟಿಗಳನ್ನು ಜಾರಿ ಮಾಡಿದ್ದಾರೆ.. ಹೀಗಾಗಿ, ಜನರ ಮುಂದೆ ತಮ್ಮ ಸಾಧನೆಗಳನ್ನಿಟ್ಟು ಅವರು ಲೋಕಸಭಾ ಚುನಾವಣೆಗೆ ಹೋಗುತ್ತಿದ್ದಾರೆ.. ಇದೊಂದು ರೀತಿ ಇಬ್ಬರಿಗೂ ಪ್ರತಿಷ್ಠೆಯ ಕಣ.. ಇಂತಹದ್ದರಲ್ಲಿ ಇಬ್ಬರ ಸ್ವಕ್ಷೇತ್ರಗಳಲ್ಲಿ ಕಾಂಗ್ರೆಸ್ ಏನಾದರೂ ಸೋತರೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮುಖಭಂಗವಾಗಲಿದೆ.. ಜೊತೆಗೆ ವಿಪಕ್ಷಗಳು ಆಡಿಕೊಳ್ಳುವುದು ದೊಡ್ಡ ಅಸ್ತ್ರ ಸಿಕ್ಕಂತಾಗುತ್ತದೆ.