ಕುಮಾರಸ್ವಾಮಿ ಶಸ್ತ್ರಚಿಕಿತ್ಸೆ ಯಶಸ್ವಿ; ವಿಶ್ರಾಂತಿಯ ನಂತರ ಚುನಾವಣಾ ಪ್ರಚಾರ
ಬೆಂಗಳೂರು; ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗದೆ.. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕುಮಾರಸ್ವಾಮಿಯವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.. ಕೆಲ ದಿನಗಳ ಕಾಲ ಅವರಿಗೆ ವಿಶ್ರಾಂತಿ ಬೇಕಿದೆ.. ವಿಶ್ರಾಂತಿಯ ನಂತರ ಅವರು ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ; ನಮ್ಮ ಬಳಿ ಜಾಹೀರಾತು ನೀಡಲೂ ಹಣವಿಲ್ಲ, ರೈಲು ಟಿಕೆಟ್ ಬುಕ್ ಮಾಡಲೂ ಆಗ್ತಿಲ್ಲ; ರಾಹುಲ್ ಗಾಂಧಿ!
ವಿದೇಶದಿಂದ ಬಂದಿದ್ದ ವೈದ್ಯರಿಂದ ಶಸ್ತ್ರಚಿಕಿತ್ಸೆ;
ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಇತ್ತೀಚೆಗೆ ಚೆನ್ನೈಗೆ ತೆರಳಿದ್ದರು.. ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.. ಅವರಿಗಾಗಿ ವಿದೇಶದಿಂದ ತಜ್ಞ ವೈದ್ಯರು ಇಂದು ಕುಮಾರಸ್ವಾಮಿಯವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.. ಚಿಕಿತ್ಸೆ ಯಶಸ್ವಿಯಾಗಿದೆ.. ಕುಮಾರಸ್ವಾಮಿಯವರು ಆರೋಗ್ಯವಾಗಿದ್ದಾರೆ ಎಂದು ವೈದ್ಯ ಮೂಲಗಳು ತಿಳಿಸಿವೆ.. ಇನ್ನು ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ.. ಎರಡು ಮೂರು ದಿನ ಕುಮಾರಸ್ವಾಮಿಯವರಿಗೆ ವಿಶ್ರಾಂತಿ ಅಗತ್ಯ ಇದೆ ಎಂದು ಹೇಳಲಾಗಿದೆ. ವಿಶ್ರಾಂತಿಯ ನಂತರ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ..
ಇದನ್ನೂ ಓದಿ; ಮೇಕೆದಾಟು ಅಣೆಕಟ್ಟು ಮಾಡಲು ಬಿಡಲ್ಲ ಎಂದ ಡಿಎಂಕೆ; ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ಸಮರ!
ಸೀಟು ಹಂಚಿಕೆ ಬಗ್ಗೆ ಪ್ರೆಸ್ ಮೀಟ್ ಮಾಡಿದ್ದ ಹೆಚ್ಡಿಕೆ;
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ.. ಆದ್ರೆ ಇನ್ನೂ ಜೆಡಿಎಸ್ಗೆ ಕ್ಷೇತ್ರ ಹಂಚಿಕೆ ಆಗಿಲ್ಲ.. ಇದರಿಂದಾಗಿ ಕುಮಾರಸ್ವಾಮಿ ಅಸಮಾಧಾನಗೊಂಡಿದ್ದರು.. ನಾವು ಕೇಳಿದ್ದೇ ಮೂರು ಕ್ಷೇತ್ರಗಳು.. ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಕೇಳಿದ್ದೇವೆ.. ಆದ್ರೆ ಕೋಲಾರದ ಬಗ್ಗೆ ಇನ್ನೂ ಕ್ಲಾರಿಟಿ ಸಿಗ್ತಾ ಇಲ್ಲ.. ಸೀಟು ಹಂಚಿಕೆ ಬಗ್ಗೆ ಇನ್ನೂ ಒಂದು ಮೀಟಿಂಗ್ ಕೂಡಾ ಆಗಿಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು… ಸುದ್ದಿಗೋಷ್ಟಿಯ ನಂತರ ಅವರು ನೇರವಾಗಿ ಚೆನ್ನೈಗೆ ತೆರಳಿದ್ದರು.. ಇದೀಗ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ.. ಚೇತರಿಕೆ ನಂತರ ಬಿಜೆಪಿ ನಾಯಕರ ಜೊತೆ ಅವರು ಮಾತನಾಡಿ, ಸೀಟು ಹಂಚಿಕೆ ಫೈನಲ್ ಮಾಡಿಸಲಿದ್ದಾರೆ.. ಕೋಲಾರ ಕ್ಷೇತ್ರ ಬಿಟ್ಟುಕೊಡದೇ ಹೋದರೆ ಮೈತ್ರಿಯಿಂದ ಜೆಡಿಎಸ್ ಹೊರಬರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ..
ಇದನ್ನೂ ಓದಿ; ಬಿಜೆಪಿ ಪಕ್ಷದ ಶುದ್ಧೀಕರಣವೇ ನನ್ನ ಗುರಿ; ಕಾಂಗ್ರೆಸ್ ಸೇರಲ್ಲ ಎಂದ ಸದಾನಂದಗೌಡ!
ಮಂಡ್ಯದಿಂದ ಕುಮಾರಸ್ವಾಮಿ ಅಖಾಡಕ್ಕಿಳಿಯುತ್ತಾರಾ..?
ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಡ್ಯದಿಂದ ಚುನಾವಣಾ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.. ಆಂತರಿಕ ಸಮೀಕ್ಷೆಯಲ್ಲಿ ಕುಮಾರಸ್ವಾಮಿಯವರು ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಸುಲಭವಾಗಿ ಗೆಲ್ಲಬಹುದು ಎಂಬ ವರದಿ ಬಂದಿದೆ ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕುಮಾರಸ್ವಾಮಿಯವರನ್ನೇ ಸ್ವರ್ಧೆ ಮಾಡುವಂತೆ ಸೂಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಕುಮಾರಸ್ವಾಮಿಯವರಿಗೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸುವ ಆಸೆ ಇದೆ.. ಆದ್ರೆ ಬಿಜೆಪಿ ನಾಯಕರ ಒತ್ತಡದಿಂದ ಕುಮಾರಸ್ವಾಮಿಯವರೇ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ..
ಇದನ್ನೂ ಓದಿ; ಬೆಂಗಳೂರಿನಲ್ಲಿ ಜೀವಜಲಕ್ಕಾಗಿ ಸಂಕಷ್ಟ; ಇಂದಿನಿಂದ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ!