Politics

ಅಪ್ಪ ಯೋಗೇಶ್ವರ್‌ ಬಿಜೆಪಿ ನಾಯಕ; ಮಗಳಿಗೆ ಕಾಂಗ್ರೆಸ್‌ ಸೇರೋ ಬಯಕೆ!

ರಾಮನಗರ; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ… ಇದು ಈ ಬಾರಿ ಹೈವೋಲ್ಟೇಜ್‌ ಕ್ಷೇತ್ರ… ಯಾಕಂದ್ರೆ ಬಿಜೆಪಿ-ಜೆಡಿಎಸ್‌ ಪಕ್ಷಗಳು ಒಂದಾಗಿವೆ.. ಬಿಜೆಪಿ ಚಿಹ್ನೆಯಡಿ ದೇವೇಗೌಡರ ಅಳಿಯ ಡಾ.ಸಿ.ಎನ್‌.ಮಂಜುನಾಥ್‌ ಅಖಾಡದಲ್ಲಿದ್ದಾರೆ.. ಇನ್ನೊಂದು ಕಡೆ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್‌ ಮೂರನೇ ಬಾರಿ ತೊಡೆ ತಟ್ಟುತ್ತಿದ್ದಾರೆ.. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸಿ.ಪಿ.ಯೋಗೇಶ್ವರ್‌ ವಹಿಸಿಕೊಂಡಿದ್ದಾರೆ.. ಆದ್ರೆ ವಿಚಿತ್ರ ಅಂದ್ರೆ ಯೋಗೇಶ್ವರ್‌ ಮಗಳು ಕಾಂಗ್ರೆಸ್‌ ಪಕ್ಷ ಸೇರೋದಕ್ಕೆ ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಲೋಕಸಭಾ ಚುನಾವಣೆ; ಯಾರು, ಎಲ್ಲಿ, ಏನು ಹೇಳಿದರು..?

ಕಾಂಗ್ರೆಸ್‌ ಸೇರ್ತಾರಾ ಸಿ.ಪಿ.ಯೋಗೇಶ್ವರ್‌ ಮಗಳು ನಿಶಾ..?;

ಮಾಜಿ ಸಚಿವ ಹಾಗೂ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್‌ ಬಯಸಿದ್ದರು.. ಈ ವೇಳೆ ಮಂಜುನಾಥ್‌ ಅವರ ಹೆಸರು ಹರಿದಾಡುತ್ತಿತ್ತು.. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ ಅವರೇ ಮುಂದೆ ನಿಂತು ಮಂಜುನಾಥ್‌ ಅವರಿಗೆ ಟಿಕೆಟ್‌ ಕೊಟ್ಟರೆ ನಾವೇ ಮುಂದೆ ನಿಂತು ಗೆಲ್ಲಿಸುತ್ತೇವೆ ಎಂದು ಹೇಳಿದ್ದರು.. ರೇಸ್‌ನಿಂದ ಹಿಂದೆ ಸರಿದಿದ್ದರು.. ಈ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.. ಸಿ.ಪಿ,ಯೋಗೇಶ್ವರ್‌ ಅವರ ಮಂಜುನಾಥ್‌ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.. ಈ ವೇಳೆಯಲ್ಲೇ ಅವರ ಮಗಳು ನಿಶಾ ಯೋಗೇಶ್ವರ್‌ ಕಾಂಗ್ರೆಸ್‌ ಸೇರೋದಕ್ಕೆ ಒಲವು ತೋರಿಸಿದ್ದಾರೆ.. ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ..

ಇದನ್ನೂ ಓದಿ; ಶಾರುಖ್‌ ಖಾನ್‌ ಮಗನ ತಿಂಗಳ ಸ್ಕೂಲ್‌ ಫೀಜ್‌ ಬರೋಬ್ಬರಿ 2 ಲಕ್ಷ ರೂಪಾಯಿ!

ಕಾಂಗ್ರೆಸ್‌ ಸೇರಲು ಬಯಸಿದ್ದೇನೆ ಎಂದ ನಿಶಾ ಯೋಗೇಶ್ವರ್‌;

ಖಾಸಗಿ ಮಾಧ್ಯವೊಂದನ್ನು ದೂರವಾಣಿ ಮೂಲಕ ನಿಶಾ ಯೋಗೇಶ್ವರ್‌ ಅವರನ್ನು ಭೇಟಿಯಾಗಿದ್ದಾಗಿ ಬರೆದುಕೊಂಡಿದೆ.. ಈ ವೇಳೆ ನಿಶಾ ಅವರು ಕಾಂಗ್ರೆಸ್‌ ಸೇರುವ ಒಲವು ತೋರಿಸಿರುವುದು ನಿಜ ಎಂದು ಹೇಳಿದ್ದಾರಂತೆ.. ಈ ಹಿಂದೆ ನಾನು ಕಾಂಗ್ರೆಸ್‌ ಸೇರುವುದಕ್ಕಾಗಿ ಹಲವಾರು ಬಾರಿ ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿದ್ದೇನೆ.. ನನ್ನ ಕುಟುಂಬದ ಒಪ್ಪಿಗೆಗಿಂತ ನನ್ನ ವೈಯಕ್ತಿಕ ನಿಲುವಿನಿಂದಲೇ ನಾನು ಕಾಂಗ್ರೆಸ್‌ ಸೇರ ಬಯಸಿದ್ದೇನೆ ಎಂದು ನೀಶಾ ಯೋಗೇಶ್ವರ್‌ ಹೇಳಿದ್ದಾರೆಂದು ಖಾಸಗಿ ವಾಹಿನಿ ಹೇಳಿಕೊಂಡಿದೆ..

ಇದನ್ನೂ ಓದಿ; ಹೀಗೆ ಮಾಡಿದರೆ ಜೀವನಪೂರ್ತಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬಹುದು!

ಚುನಾವಣೆಗೆ ಮುಂಚೆ ಸೇರಿದರೆ ಕಾಂಗ್ರೆಸ್‌ ಪರ ಪ್ರಚಾರ;

ಒಂದು ವೇಳೆ ಲೋಕಸಭಾ ಚುನಾವಣೆಗೆ ಮೊದಲೇ ಕಾಂಗ್ರೆಸ್‌ಗೆ ಸೇರಿದರೆ ನಾನು ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತೇನೆ.. ಸೇರದೇ ಹೋದರೆ ಚುನಾವಣೆಯಲ್ಲಿ ಪ್ರಚಾರ ಮಾಡೋದಿಲ್ಲ ಎಂದೂ ನಿಶಾ ಯೋಗೇಶ್ವರ್‌ ಹೇಳಿದ್ದಾರಂತೆ.. ನಾನು ಚಿಕ್ಕವಯಸ್ಸಿನಿಂದಲೂ ಚನ್ನಪಟ್ಟಣದಲ್ಲೇ ಬೆಳೆದಿದ್ದೇನೆ.. ಚೆನ್ನಪಟ್ಟಣದ ಜನ ನನ್ನ ಕುಟುಂಬ ಇದ್ದಂತೆ ಎಂದು ನಿಶಾ ಯೋಗೇಶ್ವರ್‌ ಹೇಳಿದ್ದು, ಕಾಂಗ್ರೆಸ್‌ ಸೇರುವ ನಿರ್ಧಾರ ನನ್ನದೇ ಹೊರತು, ಕುಟುಂಬದ್ದಲ್ಲ ಎಂದು ನಿಶಾ ಯೋಗೇಶ್ವರ್‌ ಹೇಳಿದ್ದಾಗಿ ಖಾಸಗಿ ಮಾಧ್ಯಮ ಬರೆದುಕೊಂಡಿದೆ.

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ಚುನಾವಣೆ ಸಮಯದಲ್ಲಿ ಕುತೂಹಲ ಕೆರಳಿಸಿದ ನಿಶಾ;

ನಿಶಾ ಯೋಗೇಶ್ವರ್‌ ಅವರು ಈ ಹಿಂದೆ ಕೂಡಾ ಕಾಂಗ್ರೆಸ್‌ ಸೇರುವ ಬಗ್ಗೆ ಮಾತನಾಡಿದ್ದರು.. ಈಗ ಲೋಕಸಭಾ ಚುನಾವಣೆ ಸಮಯದಲ್ಲಿ ನಿಶಾ ಯೋಗೇಶ್ವರ್‌ ಅವರು ಇಂತಹದ್ದೊಂದು ಹೇಳಿಕೆ ಕೊಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.. ಲೋಕಸಭಾ ಚುನಾವಣೆಗೆ ಮುಂಚೆ ನಿಶಾ ಅವರು ಕಾಂಗ್ರೆಸ್‌ ಸೇರುತ್ತಾರಾ..? ಸೇರಿದರೆ ಅವರು ಕಾಂಗ್ರೆಸ್‌ ಪಕ್ಷದ ಪರ ಪ್ರಚಾರಕ್ಕೆ ನಿಂತರೆ ಯೋಗೇಶ್ವರ್‌ಗೆ ಮುಜುಗರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.. ಇದನ್ನು ಯೋಗೇಶ್ವರ್‌ ಅವರು ಹೇಗೆ ನಿಭಾಯಿಸುತ್ತಾರೆ ನೋಡಬೇಕು..

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

 

Share Post