Politics

ಲೋಕಸಭಾ ಚುನಾವಣೆ; ಯಾರು, ಎಲ್ಲಿ, ಏನು ಹೇಳಿದರು..?

ಬೆಂಗಳೂರು; ಲೋಕಸಭಾ ಚುನಾವಣೆ ರಂಗೇರುತ್ತಿದೆ.. ಎಲ್ಲೆಡೆ ನಾಯಕರು ವಾಕ್ಸಮರಗಳು ನಡೆಯುತ್ತಿವೆ.. ಪ್ರಚಾರದ ಭರಾಟೆ ಕೂಡಾ ಜೋರಾಗಿ ನಡೆಯುತ್ತಿದೆ.. ಈ ನಡುವೆ ಭಿನ್ನಮತ ಶಮನ ಕೂಡಾ ಜೋರಾಗಿ ನಡೆಯುತ್ತಿದೆ.. ಇವತ್ತು ಲೋಕಸಭಾ ಅಖಾಡದಲ್ಲಿ ಹಲವು ಹಲವು ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.. ಯಾರು, ಎಲ್ಲಿ, ಏನು ಹೇಳಿದರು ನೋಡಿಕೊಂಡು ಬರೋಣ ಬನ್ನಿ..

ಇದನ್ನೂ ಓದಿ; ಶಾರುಖ್‌ ಖಾನ್‌ ಮಗನ ತಿಂಗಳ ಸ್ಕೂಲ್‌ ಫೀಜ್‌ ಬರೋಬ್ಬರಿ 2 ಲಕ್ಷ ರೂಪಾಯಿ!

ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ-ಡಿಕೆಶಿ

ಬೆಂಗಳೂರು; ಕೋಲಾರ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿಯನ್ನು ಇಂದು ಪ್ರಕಟ ಮಾಡಲಾಗಿದೆ.. ಕೋಲಾರದಲ್ಲಿ ಎರಡು ಬಣಗಳ ತಿಕ್ಕಾಟದ ಹಿನ್ನೆಲೆಯಲ್ಲಿ ಹೊಸ ಅಭ್ಯರ್ಥಿಯಾಗಿ ಕೆ.ವಿ.ಗೌತಮ್‌ ಅವರನ್ನು ಕಾಂಗ್ರೆಸ್‌ ಹೈಕಮಾಂಡ್‌ ಕಣಕ್ಕಿಳಿಸಿದೆ.. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ನಾನು ಸಚಿವ ಕೆ.ಹೆಚ್‌. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಈಗಾಗಲೇ ಮಾತನಾಡಿದ್ದೇನೆ.. ಎರಡೂ ಬಣಗಳಿಗಳವರು ಹೇಳಿದವರಿಗೂ ಟಿಕೆಟ್ ಕೊಟ್ಟಿಲ್ಲ. ನಾನು ಗುಂಪುಗಾರಿಕೆಗೆ ಆಸ್ಪದ ನೀಡೋದಿಲ್ಲ.. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಹೇಳಿದರು.

ಇದನ್ನೂ ಓದಿ; ಹೀಗೆ ಮಾಡಿದರೆ ಜೀವನಪೂರ್ತಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬಹುದು!

ದಲಿತ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿತ್ತು. ನಾವು ಎರಡು ಕಡೆ ದಲಿತ ಬಲಗೈ ಸಮುದಾಯಕ್ಕೆ ಟಿಕೆಟ್‌ ಕೊಟ್ಟಿದ್ದೇವೆ.. ಯಾರೇ ಆಗಿರಬಹುದು, ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ಕೊಟ್ಟಿದ್ದಾರೆ. ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕೋರಿದ್ದಾರೆ.

ಅನಿರೀಕ್ಷಿತವಾಗಿ ನಾನು ಆಯ್ಕೆಯಾಗಿದ್ದೇನೆ – ಗೌತಮ್‌

ಬೆಂಗಳೂರು; ಇನ್ನು ಕೋಲಾರದಿಂದ ಟಿಕೆಟ್‌ ಸಿಕ್ಕಿರುವ ಬಗ್ಗೆ ಕೆ.ವಿ.ಗೌತಮ್‌ ಖುಷಿ ವ್ಯಕ್ತಪಡಿಸಿದ್ದಾರೆ. ಇದು ಅನಿರೀಕ್ಷಿತ ಬೆಳವಣಿಗೆ.. ಕೊಟ್ಟ ಅವಕಾಶವನ್ನು ಬೇಡ ಅನ್ನೋಕೆ ಆಗಲಿಲ್ಲ. ಇದು ಒಳ್ಳೆಯ ಅವಕಾಶವಾಗಿದ್ದು, ನಾನು ಗೆದ್ದು ತೋರಿಸುತ್ತೇನೆ ಗೌತಮ್‌ ಹೇಳಿದ್ದಾರೆ.. ನಾನು ಬೆಂಗಳೂರಿನಲ್ಲಿದ್ದರೂ ಕೋಲಾರದ ಎಲ್ಲಾ ನಾಯಕರ ಪರಿಚಯವೂ ನನಗಿದೆ.. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆದ್ದುಕೊಂಡು ಬರುತ್ತೇನೆ ಎಂದು ಗೌತಮ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ಕುಮಾರಸ್ವಾಮಿ ಗೆದ್ದರೆ ಮಂತ್ರಿಯಾಗ್ತಾರೆ – ಪ್ರತಾಪ ಸಿಂಹ

ಮಂಡ್ಯ; ಇನ್ನು ಮಂಡ್ಯದಲ್ಲಿ ಮೈಸೂರು ಸಂಸದ ಪ್ರತಾಪ ಸಿಂಹ ಮಾತನಾಡಿದ್ದಾರೆ.. ಕೇಂದ್ರಕ್ಕೆ ಕುಮಾರಸ್ವಾಮಿಯಂತಹ ನಾಯಕರು ಬೇಕು.. ಅವರು ಗೆದ್ದು, ಕೇಂದ್ರಲ್ಲಿ ಮಂತ್ರಿಯಾಗುತ್ತಾರೆಂಬ ವಿಶ್ವಾಸ ನನಗಿದೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ. ಮಂಡ್ಯದ ನಾಗಮಂಗಲದಲ್ಲಿ ಅವರು ಮಾತನಾಡಿದರು. ಇನ್ನೊಬ್ಬರನ್ನ ಹಿಯಾಳಿಸುವ ಗುಣ ಕಾಂಗ್ರೆಸ್ ನಾಯಕರ DNAಯಲ್ಲಿಯೇ ಇದೆ ಎಂದು ಹೇಳಿದರು. ಚಾಮರಾಜನಗರ, ಮೈಸೂರು ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹೀನಾಯವಾಗಿ ಸೋಲಲಿದೆ ಎಂದು ಪ್ರತಾಪ ಸಿಂಹ ಭವಿಷ್ಯ ನುಡಿದರು..

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ಮಂಡ್ಯದಲ್ಲಿ ಕುಮಾರಸ್ವಾಮಿಯವರ ಪರವಾಗಿ ನಾನು ಪ್ರಚಾರ ಮಾಡಲು ಬಂದಿದ್ದೇನೆ. ಅವರು ಗೆಲ್ಲಬೇಕು.. ಕೇಂದ್ರ ಇಂತಹ  ನಾಯಕರು ಬೇಕು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.. ಕುಮಾರಸ್ವಾಮಿಯವರು ಮಂಡ್ಯ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಲಿದ್ದಾರೆ. ಗೆದ್ದು ಸಂಸತ್‌ ಪ್ರವೇಶ ಮಾಡಲಿದ್ದು, ಅವರು ಕೇಂದ್ರದಲ್ಲಿ ಮಂತ್ರಿಯೂ ಆಗುವ ವಿಶ್ವಾಸ ಇದೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ..

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುತ್ತಾರೆ – ಚಿಂಚನಸೂರ್‌

ಯಾದಗಿರಿ; ಇನ್ನು  ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರು ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪಟ್ಟಣದಲ್ಲಿ ಮಾತನಾಡಿದ್ದಾರೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾಗುತ್ತಾರೆ.. ಸೂರ್ಯ ಚಂದ್ರರು ಹುಟ್ಟೋದು ಎಷ್ಟು ಸತ್ಯವೋ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗೋದೂ ಅಷ್ಟೇ ಸತ್ಯ ಎಂದು ಬಾಬುರಾವ್‌ ಚಿಂಚನಸೂರ್‌ ಹೇಳಿದ್ದಾರೆ..

ಇದನ್ನೂ ಓದಿ; ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್ ಸ್ವಾರ್ಥ ರಾಜಕಾರಣಿ; ಲಕ್ಷ್ಮೀ ಹೆಬ್ಬಾಳ್ಕರ್‌

ಕಲಬುರಗಿ ಕ್ಷೇತ್ರದಲ್ಲಿ ಕಳೆದ 50 ವರ್ಷದಿಂದ ರಾಧಾಕೃಷ್ಣ ಅವರು ದುಡಿದಿದ್ದಾರೆ.. ಅವರು ಟಿಕೆಟ್‌ ಬೇಕು ಅಂತ ಕೇಳಿರಲಿಲ್ಲ.. ಜನರೇ ಒತ್ತಡ ಹಾಕಿ ಅವರಿಗೆ ಟಿಕೆಟ್‌ ಪಡೆದಿದ್ದೇವೆ.. ರಾಧಾಕೃಷ್ಣ ಅವರು ಅತಿ ಹೆಚ್ಚು ಲೀಡ್‌ ನಲ್ಲಿ ಗೆಲ್ಲಲಿದ್ದಾರೆ. ರಾಜ್ಯದಲ್ಲಿ ದಾಖಲೆ ನಿರ್ಮಾಣ ಮಾಡಲಿದ್ದಾರೆ ಎಂದು ಬಾಬು ರಾವ್‌ ಚಿಂಚನಸೂರ್‌ ಹೇಳಿದ್ದಾರೆ..

ಬಿಜೆಪಿ ಸಂಪರ್ಕ ಸುದ್ದಿ ಬಗ್ಗೆ ಮಾತನಾಡಿದ ಚಿಂಚನಸೂರ್‌, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಜಾಧವ್ ಅವರು ಕೋಲಿ ಸಮಾಜ ಎಸ್ಟಿ ಮಾಡ್ತೀನಿ ಅಂತ ಹೇಳಿದರು. ನಾನು ವಿಶ್ವಾಸವಿಟ್ಟು ಬಿಜೆಪಿಗೆ ಜಾಯಿನ್ ಆಗಿದ್ದೆ. ಬಿಜೆಪಿಯವ್ರು ಕೋಲಿ ಸಮಾಜ ಎಸ್ಟಿಗೆ ಸೇರಿಸಲಿಲ್ಲ. ಹೀಗಾಗಿ ಸುಳ್ಳು ಹೇಳಿ ಮೋಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ; ದೇವೇಗೌಡರನ್ನೇ ಸೋಲಿಸಿದ್ದ ತೇಜಸ್ವಿನಿ ಗೌಡ ಮತ್ತೆ ಕಾಂಗ್ರೆಸ್‌ ಸೇರ್ಪಡೆ

 

Share Post