Health

ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ಈಗ ಬಹುತೇಕರು ದಿನವಿಡೀ ಕಂಪ್ಯೂಟರ್‌ ಮುಂದೆ ಕೆಲಸ ಮಾಡುತ್ತಾರೆ.. ಇಲ್ಲ ಅಂದ್ರೆ 24 ಗಂಟೆಯೂ ಮೊಬೈಲ್‌ ಹಿಡಿದು ಕೂತಿರುತ್ತಾರೆ.. ಇವುಗಳಿಂದ ಬರುವ ಬೆಳಕಿನ ಪ್ರಭಾವದಿಂದ ಕಣ್ಣುಗಳು ಮಂಜಾಗುತ್ತದೆ.. ದೃಷ್ಟ ಮಂದವಾಗುತ್ತಾ ಬರುತ್ತದೆ.. ಕನ್ನಡಕ ಹಾಕಬೇಕಾದ ಪರಿಸ್ಥಿತಿ ಕೂಡಾ ಬರಬಹುದು.. ಇತ್ತೀಚೆಗೆ ಚಿಕ್ಕ ವಯಸ್ಸಿಗೇ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ.. ಹೀಗಾಗಿ ನಾವು ಕಣ್ಣಿನ ಆರೋಗ್ಯ ಕಾಪಾಡಬೇಕಾದ ಅನಿವಾರ್ಯತೆ ಇದೆ.. ಇಲ್ಲದೆ ಹೋದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ..

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ..?;

ಜನ ಲ್ಯಾಪ್‌ ಟಾಪ್‌, ಕಂಪ್ಯೂಟರ್‌ ಹಾಗೂ ಮೊಬೈಲ್‌ಗಳಲ್ಲಿ ಬ್ಯುಸಿಯಾಗಿರುತ್ತಾರೆ.. ಯಾವಾಗಲೂ ಈ ಗ್ಯಾಜೆಟ್‌ಗಳನ್ನು ಬಳಸುವುದರಿಂದ ಕಣ್ಣಿಗೆ ಹಾನಿಯಾಗುತ್ತದೆ.. ಇಂತಹವರು ಒಂದಷ್ಟು ಟ್ರಿಕ್ಸ್‌ ಬಳಸಬೇಕು.. ಹಾಗೆ ಮಾಡುವುದರಿಂದ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.. ಕಣ್ಣುಗಳನ್ನು ಆರೋಗ್ಯವಾಗಿಡಲು ದೃಷ್ಟಿಯನ್ನು ಕಾಪಾಡಿಕೊಳ್ಳುವತ್ತ ನಾವು ಗಮನ ಹರಿಸುವುದು ಅವಶ್ಯಕ. ಒಂದಷ್ಟು ಮನೆಮದ್ದುಗಳು ಮತ್ತು ಆಯುರ್ವೇದ ವಿಧಾನಗಳೊಂದಿಗೆ ನಿಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಬಹುದು..

ಇದನ್ನೂ ಓದಿ; ಇದು ಬಡವರ ಸಂಜೀವಿನಿ; ತಪ್ಪದೇ ತಂದು ಕುಡಿಯಿರಿ..!

ಕೊಲಾರಿಯಂ ತೆಗೆದುಕೊಳ್ಳಿ;

ಕಣ್ಣುಗಳು ಸಾಮಾನ್ಯವಾಗಿ ದೇಹದ ಇತರೆ ಭಾಗಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಹೀಗಾಗಿ ಅವುಗಳ ನಿರ್ವಹಣೆ ತುಂಬಾ ಜಾಗ್ರತೆಯಿಂದ ಮಾಡಬೇಕಾಗುತ್ತದೆ..  ಕಣ್ಣುಗಳ ಆರೋಗ್ಯ ಕಾಪಾಡುವುದಕ್ಕೆ ಅಂಜನಾ (ಕೊಲಾರಿಯಂ) ಅನ್ನು ಮೂಗಿನ ಹೊಳ್ಳೆಗಳ ಮೂಲಕ ತೆಗೆದುಕೊಳ್ಳಬೇಕು. ಕಣ್ಣುಗಳನ್ನು ರಕ್ಷಿಸಲು ಮತ್ತು ಕಫವನ್ನು ತೆಗೆದುಹಾಕಲು ಇದನ್ನು ಬಳಸಲಾಗುತ್ತದೆ. ಆದ್ರೆ ನೀವು ಇದನ್ನು ವೈದಯರ ಸಲಹೆ ಪಡೆದೇ ತೆಗೆದುಕೊಳ್ಳಬೇಕಾಗುತ್ತದೆ..

ಇದನ್ನೂ ಓದಿ; ಈ ಲಕ್ಷಣಗಳಿದ್ದರೆ ನಿಮ್ಮ ಕಿಡ್ನಿಯಲ್ಲಿ ಸ್ಟೋನ್‌ ಇರಬಹುದು!

ಫುಟ್‌ ಮಸಾಜ್‌ ತುಂಬಾನೇ ಉತ್ತಮ;

ಕಣ್ಣಿನ ಆರೋಗ್ಯ ಕಾಪಾಡಬೇಕು ಅಂದ್ರೆ ಫುಟ್‌ ಮಸಾಜ್‌ ತುಂಬಾನೇ ಸಹಕಾರಿಯಾಗುತ್ತದೆ.. ನಾವು ಆಗಾಗ ಫುಟ್‌ ಮಸಾಜ್‌ ಮಾಡಿಸುವುದು ಅಥವಾ ನಾವೇ ಮಾಡಿಕೊಳ್ಳುವುದರಿಂದ ಕಣ್ಣು ಮಂಜಾಗುವುದನ್ನು ತಪ್ಪಿಸಬಹುದು.. ಆಯುರ್ವೇದ ಭಾಷೆಯಲ್ಲಿ ಇದನ್ನು ಪಾದಭಂಗ ಎಂದು ಕರೆಯುತ್ತಾರೆ.. ಫೂಟ್‌ ಮಸಾಜ್‌ ಮಾಡಿಸಿಕೊಳ್ಳುವುದರಿಂದ ಕಣ್ಣುಗಳಿಗೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ..

ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

ಸಮತೋಲಿತ ಆಹಾರಗಳ ಸೇವನೆ ಅತಿ ಮುಖ್ಯ;

ಕಣ್ಣಿನ ಆರೋಗ್ಯ ಕಾಮಾಡುವುದಕ್ಕೆ ಸಮತೋಲಿತ ಆಹಾರಗಳನ್ನು ಸೇವಿಸಬೇಕಾದ ಅನಿವಾರ್ಯತೆ ಇದೆ.. ಸಮತೋಲಿತ ಆಹಾರಗಳು ನಮಗೆ ಮುಖ್ಯವಾಗುತ್ತವೆ.. ವಿಟಮಿನ್ ಎ, ಸಿ, ಇ, ಬಿ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೀಗಾಗಿ, ಇಂತಹ ಪೋಷಕಾಂಶಗಳಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.. ಕಣ್ಣಿಗೆ ಉಪಯುಕ್ತವಾಗುವ ಆಹಾರಗಳನ್ನು ಸೇವನೆ ಮಾಡುವ ಮೂಲಕ ದೃಷ್ಟಿ ಮಂದವಾಗದಂತೆ ನೋಡಿಕೊಳ್ಳಬಹುದು.. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಈ ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಇದನ್ನೂ ಓದಿ; ಮಾನಸಿಕ ಒತ್ತಡದಲ್ಲಿದ್ದೀರಾ..?; ಹಾಗಾದರೆ ಈ ಮಂತ್ರಗಳನ್ನು ಜಪಿಸಿ!

ತ್ರಿಫಲ ಸೇವನೆ ಮಾಡುವುದು ಒಳ್ಳೆಯದು;

ಆಯುರ್ವೇದದಲ್ಲಿ ತ್ರಿಫಲ ಚೂರ್ಣಕ್ಕೆ ವಿಶೇಷ ಮಹತ್ವವಿದೆ.. ಇದನ್ನು ಅನೇಕ ಆರೋಗ್ಯ ತೊಂದರೆಗಳಿಗೆ ಬಳಸಲಾಗುತ್ತಿದೆ.. ದೃಷ್ಟಿಯನ್ನು ಕಾಪಾಡಿಕೊಳ್ಳಲು ಕೂಡಾ ಇದನ್ನು ಬಳಸಬಹುದು..  ಹಿಂದಿನ ಕಾಲದಲ್ಲಿ ತ್ರಿಫಲವನ್ನು ದೃಷ್ಟಿ ಸುಧಾರಿಸಲು ಬಳಸುತ್ತಿದ್ದರು.. ದೃಷ್ಟಿ ಮಂದವಾದರೆ ಜನ ತ್ರಿಫಲವನ್ನು ಸೇವನೆ ಮಾಡುತ್ತಿದ್ದರು. ತ್ರಿಫಲ ಹಲವಾರು ಕಣ್ಣಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅದ್ಭುತಗಳನ್ನು ಮಾಡುತ್ತದೆ. ಈಗ ಆಯುರ್ವೇದ ಅಂಗಡಿಗಳಲ್ಲಿ ತ್ರಿಫಲ ಚೂರ್ಣ ಸಿಗುತ್ತದೆ.. ಅದನ್ನು ತಂದು ಬೆಚ್ಚಗಿನ ನೀರಿಗೆ ಕೊಂಚ ತ್ರಿಫಲ ಚೂರ್ಣ ಹಾಕಿಕೊಂಡು ಕುಡಿದರೆ ಆರೋಗ್ಯ ಉತ್ತಮವಾಗುತ್ತದೆ.. ಅದರಲ್ಲೂ ಕಣ್ಣಿನ ಆರೋಗ್ಯ ಕಾಪಾಡಲು ಇದು ಅತ್ಯಂತ ಮುಖ್ಯವಾಗುತ್ತದೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಸನ್ ಟ್ಯಾನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ತ್ರಾಟಕ್‌ ಅಭ್ಯಾಸ ಮಾಡಿ;

ತ್ರಾಟಕ್ ಎಂಬ ಆಯುರ್ವೇದ ಅಭ್ಯಾಸ ಕೂಡಾ ನನ್ನ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಇದು ದೃಷ್ಟಿ ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ತುಪ್ಪದ ದೀಪವನ್ನು ಹಚ್ಚಿ ಸ್ವಲ್ಪ ದೂರದಿಂದ ಒಂದು ದಿಕ್ಕಿನಲ್ಲಿ ದೀಪದ ಜ್ವಾಲೆಯನ್ನು ನೋಡಿ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನಿಮ್ಮ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

Share Post