CinemaNational

ಶಾರುಖ್‌ ಖಾನ್‌ ಮಗನ ತಿಂಗಳ ಸ್ಕೂಲ್‌ ಫೀಜ್‌ ಬರೋಬ್ಬರಿ 2 ಲಕ್ಷ ರೂಪಾಯಿ!

ಮುಂಬೈ; ಶಾರುಖ್‌ ಖಾನ್‌.. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ… ಬಾಲಿವುಡ್‌ ನ ಖಾನ್‌ ತ್ರಯರಲ್ಲಿ ಇವರೂ ಒಬ್ಬರು.. ದಶಕಗಳಿಂದ ಬಾಲಿವುಡ್‌  ನಲ್ಲಿ ಮಿಂಚುತ್ತಿರುವ ಶಾರುಖ್ ಖಾನ್‌, ಕೋಟಿ ಕೋಟಿ ಆಸ್ತಿ ಹೊಂದಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ.. ಹಾಗಿದ್ಮೇಲೆ ಅವರ ಮಕ್ಕಳು ಓದುವ ಶಾಲೆ ಯಾವುದು..? ಅದರಲ್ಲಿ ಎಷ್ಟು ಫೀಜ್‌ ಇರುತ್ತೆ ಅನ್ನೋದು ಕುತೂಹಲ ಎಲ್ಲರಿಗೂ ಇರುತ್ತದೆ.. ಇದೀಗ ಶಾರುಖ್‌ ಖಾನ್‌ ಅವರ ಎರಡನೇ ಮಗನ ಶಾಲಾ ಶುಲ್ಕದ ವಿವರ ಎಲ್ಲೆಡೆ ಹರಿದಾಡುತ್ತಿದೆ.. ಅದನ್ನು ನೋಡಿ ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.. ಒಂದು ವರ್ಷ ಕಟ್ಟೋ ಫೀಸ್‌ ನಲ್ಲಿ ನಾವು ಜೀವನವಿಡೀ ಓದಬಹುದು ಎಂದು ಹಲವು ಹೇಳುತ್ತಿದ್ದಾರೆ..

ಇದನ್ನೂ ಓದಿ; ಹೀಗೆ ಮಾಡಿದರೆ ಜೀವನಪೂರ್ತಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬಹುದು!

ಹಾಗಾದ್ರೆ ಶಾರುಖ್‌ ಖಾನ್‌ ಮಗನ ಶಾಲೆ ಯಾವುದು..? ಎಷ್ಟು ಶುಲ್ಕ..?

ಶಾರುಖ್‌ ಖಾನ್‌ ಅವರ ಎರಡನೇ ಮಗ ಅಬ್ರಹಾಂ ಧೀರೂಬಾಯಿ ಅಂಬಾಯಿ ಇಂಟರ್ನ್ಯಾಷನ್‌ ಶಾಲೆಯಲ್ಲಿ ಓದುತ್ತಿದ್ದಾರೆ.. ಇದು ಮುಂಬೈ ಹಾಗೂ ದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದು.. ಇಲ್ಲಿ ಶಾಲಾ ಶುಲ್ಕ ತರಗತಿಯಿಂದ ತರಗತಿಗೆ ದಬಲಾಗುತ್ತಾ ಹೋಗುತ್ತದೆ.. ಅಷ್ಟು ಕಟ್ಟುತ್ತೇವೆ ಅಂದರೂ ಸೀಟು ಸಿಗುವುದು ಕಷ್ಟ.. ಇಂತಹ ಶಾಲೆಯಲ್ಲಿ ಶಾರುಖ್‌ ಖಾನ್‌ ಮಗ ಓದುತ್ತಿದ್ದಾನೆ.. ಈ ಶಾಲೆಯಲ್ಲಿ ಎಲ್​ಕೆಜಿಯಿಂದ 7ನೇ ತರಗತಿವರೆಗೆ ತಿಂಗಳ ಶುಲ್ಕ ಬರೋಬ್ಬರಿ 1.70 ಲಕ್ಷ ರೂಪಾಯಿ ಇದೆ ಎಂದು ಹೇಳಲಾಗುತ್ತಿದೆ. ಇನ್ನು 8ನೇ ತರಗತಿಯಿಂದ 10 ನೇ ತರಗತಿವರೆಗೆ ತಿಂಗಳ ಶುಲ್ಕ 4.48 ಲಕ್ಷ ರೂಪಾಯಿ ಇದೆಯಂತೆ.. 11 ಮತ್ತು 12ನೇ ತರಗತಿಗೆ ಸುಮಾರು 9.65 ಲಕ್ಷ ರೂಪಾಯಿಯನ್ನು ಪ್ರತಿ ತಿಂಗಳು ಪಾವತಿಸಬೇಕು ಎಂದು ಹೇಳಲಾಗುತ್ತಿದೆ.. ಇದನ್ನು ನೋಡಿದರೆ ಅಬ್ರಾಮ್‌ನ ವಾರ್ಷಿಕ ಶುಲ್ಕ ಬರೋಬ್ಬರಿ 20.40 ಲಕ್ಷ ರೂಪಾಯಿ.

ಇದನ್ನೂ ಓದಿ; ಕೊನೆಗೂ ಕೋಲಾರದಲ್ಲಿ 3 ನೇ ಅಭ್ಯರ್ಥಿ ಕಣಕ್ಕೆ; ಯಾರು ಈ ಗೌತಮ್‌?

ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಶಾಲೆ

ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಶಾಲೆಯನ್ನು 2003ರಲ್ಲಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಸ್ಥಾಪನೆ ಮಾಡಿದರು. 1,30,000 ಚದರ ಅಡಿಯಲ್ಲಿ ಈ ಶಾಲೆ ನಿರ್ಮಾಣ ಮಾಡಲಾಗಿದೆ.. ಇದರಲ್ಲಿ ವಿಶ್ವದ ಗುಣಮಟ್ಟದ ಶಿಕ್ಷಣ, ಫೆಸಿಲಿಟಿ ಇದೆ.. ಈ ಶಾಲೆಯಲ್ಲಿ ಸೀಟು ಗಿಟ್ಟಿಸಿಕೊಳ್ಳುವುದಕ್ಕೆ ಕೂಡಾ ಹರಸಾಹಸಪಡಬೇಕು.. 7 ಮಹಡಿಗಳನ್ನು ಹೊಂದಿರುವ ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನ ಸೇರಿ ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳೂ ಇವೆ…

ಇದನ್ನೂ ಓದಿ; ಕುಮಾರಸ್ವಾಮಿಗೆ ಆಪರೇಷನ್‌ ಆಗಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕ

6 ಸಾವಿರ ಕೋಟಿ ಆಸ್ತಿ ಹೊಂದಿರುವ ಶಾರುಖ್‌ ಖಾನ್‌;

ಶಾರುಖ್‌ ಖಾನ್‌ ಅವರು ಈಗಲೂ ಬಾಲಿವುಡ್‌ನಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ.. ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತವೆ.. ಹೀಗಾಗಿ ಅವರ ಸಂಭಾವನೆ ಕೂಡಾ ದೊಡ್ಡ ಮಟ್ಟದಲ್ಲಿದೆ.. ಅವರು ಘೋಷಣೆ ಮಾಡಿಕೊಂಡಂತೆ ಶಾರುಖ್ ಖಾನ್‌ ಅವೆರ ಆಸ್ತಿ 6000 ಸಾವಿರ ಕೋಟಿ ರೂಪಾಯಿ ಮೌಲ್ಯ ಹೊಂದಿದೆಯಂತೆ!. ಅಚ್ಚರಿ ಆದರೂ ಇದು ಸತ್ಯ..

1991ರಲ್ಲಿ ಶಾರುಖ್ ಅವರು ಗೌರಿ ಖಾನ್ ಅವರನ್ನು ಮದುವೆಯಾದರು.. ಇದು ಲವ್‌ ಮ್ಯಾರೇಜ್‌ .. 1997ರಲ್ಲಿ ಹಿರಿಯ ಮಗ ಆರ್ಯನ್, 2000ರಲ್ಲಿ ಮಗಳು ಸುಹಾನಾ ಜನಿಸುತ್ತಾರೆ. 2013ರಲ್ಲಿ ಶಾರುಖ್ ಖಾನ್ ಮತ್ತು ಗೌರಿಗೆ ಬಾಡಿಗೆ ತಾಯ್ತನದ ಮೂಲಕ ಅಬ್ರಾಂ​ ಜನಿಸಿದ್ದಾನೆ.. ಈಗ ಈತನ ಶಾಲಾ ಶುಲ್ಕದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ..

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

 

Share Post