Politics

ಸುಮಲತಾ ಕಣಕ್ಕಿಳಿಯೋದು ಬಹುತೇಕ ಫಿಕ್ಸ್‌; ಏಪ್ರಿಲ್‌ 3ಕ್ಕೆ ಘೋಷಣೆ!

ಬೆಂಗಳೂರು; ಮಂಡ್ಯ ಸಂಸದೆ ಸುಮಲತಾ ಅವರು ಮತ್ತೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಕ್ಕೆ ನಿರ್ಧಾರ ಮಾಡಿದರಾ..? ಬೆಂಬಲಿಗರ ಒತ್ತಡಕ್ಕೆ ಮಣಿದು ಅವರು ಕಣಕ್ಕಿಳಿದುಬಿಡುತ್ತಾರಾ..? ಇಂತಹದ್ದೊಂದು ಅನುಮಾನ ಮೂಡಿದೆ.. ಯಾಕಂದ್ರೆ ಅವರ ಬೆಂಬಲಿಗರು ನಿಲ್ಲಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.. ಇತ್ತು ಸುಮಲತಾ ಅವರು ಮಂಡ್ಯದಲ್ಲೇ ನಿಂತು ತಮ್ಮ ನಿರ್ಧಾರ ಪ್ರಕಟ ಮಾಡೋದಕ್ಕೆ ಮುಂದಾಗಿದ್ದಾರೆ..

ಇದನ್ನೂ ಓದಿ; ಕಣದಲ್ಲಿರುವ ಮೂರೂ ಪಕ್ಷಗಳ ಅಭ್ಯರ್ಥಿಗಳ ಯಾರು..?; 28 ಕ್ಷೇತ್ರಗಳ ಫುಲ್‌ ಡಿಟೇಲ್ಸ್‌

ಏಪ್ರಿಲ್‌ 3ರಂದು ನಿರ್ಧಾರ ಪ್ರಕಟ;

ಇಂದು ಸಂಸದೆ ಸುಮಲತಾ ಅಂಬರೀಶ್‌ ಅವರ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಲಾಯಿತು.. ಇದೇ ವೇಳೆ ಅವರ ಬೆಂಬಲಿಗರು ಸ್ಪರ್ಧೆ ಮಾಡಲೇಬೇಕು.. ಈ ಬಾರಿ ಸ್ಪರ್ಧೆ ಮಾಡಿದರೂ ಗೆಲ್ಲೋದು ಗ್ಯಾರೆಂಟಿ ಎಂದು ಒತ್ತಾಯ ಮಾಡಿದ್ದಾರೆ.. ಈ ಹಿನ್ನೆಲೆಯಲ್ಲಿ ಸುಮಲತಾ ಅವರು ಅಭಿಮಾನಿಗಳ ಒತ್ತಾಯಕ್ಕೆ ಮಣಿದಿದ್ದಾರೆ.. ಏಪ್ರಿಲ್‌ 3 ರಂದು ಮಂಡ್ಯದಲ್ಲೇ ನಿಂತು ನನ್ನ ಅಭಿಪ್ರಾಯ ಪ್ರಕಟ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ..

ಇದನ್ನೂ ಓದಿ; ನನ್ನದು ಗರ್ವ ಅಲ್ಲ, ಕನ್ನಡಿಗನ ಸಹಜ ಸ್ವಾಭಿಮಾನ; ಸಿದ್ದರಾಮಯ್ಯ

ಮಂಡ್ಯದಲ್ಲಿ ನಡೆಯುತ್ತೆ ಸುಮಲತಾ ಅಭಿಮಾನಿಗಳ ಸಭೆ;

ಬೆಂಗಳೂರಿನ ಸುಮಲತಾ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಸುಮಲತಾ ಅವರು ಮಾತನಾಡಿದ್ದಾರೆ.. ನನ್ನ ಅಭಿಮಾನಿಗಳು ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ.. ನಾನು ಮಂಡ್ಯದ ಜನರನ್ನು ಬಿಟ್ಟು ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದಿಲ್ಲ.. ಹೀಗಾಗಿ ನಾನು ಮಂಡ್ಯದಲ್ಲೇ ನನ್ನ ನಿರ್ಧಾರವನ್ನು ಪ್ರಕಟ ಮಾಡುತ್ತೇನೆ.. ಏಪ್ರಿಲ್‌ 3ರಂದು ಮಂಡ್ಯದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಡೆಸುತ್ತೇನೆ. ಆ ಸಭೆಯಲ್ಲಿ ನೀವು ಏನು ಅಭಿಪ್ರಾಯ ತಿಳಿಸುತ್ತೀರೋ ಅದನ್ನು ಸ್ವೀಕಾರ ಮಾಡುತ್ತೇನೆ. ಅಲ್ಲಿಯೇ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್‌ ಅವರು ಹೇಳಿದ್ದಾರೆ..

ಇದನ್ನೂ ಓದಿ; ಲೋಕಸಭಾ ಚುನಾವಣೆ; ಯಾರು, ಎಲ್ಲಿ, ಏನು ಹೇಳಿದರು..?

ನಾನು ಸ್ವಾರ್ಥಕ್ಕೆ ರಾಜಕೀಯ ಮಾಡುತ್ತಿಲ್ಲ;

ಸುಮಲತಾ ಅವರು ಇಂದು ತಮ್ಮ ನಿರ್ಧಾರ ಪ್ರಕಟಿಸಬೇಕಾಗಿತ್ತು.. ಅದಕ್ಕಾಗಿಯೇ ಅವರು ತಮ್ಮ ಮನೆಗೆ ಅಭಿಮಾನಿಗಳನ್ನು ಕರೆದಿದ್ದರು.. ಇದರಲ್ಲಿ ಒಂದಷ್ಟು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.. ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.. ಈ ಹಿನ್ನೆಲೆಯಲ್ಲಿ ಸುಮಲತಾ ಅವರು ಇಂದು ತಮ್ಮ ನಿರ್ಧಾರ ಪ್ರಕಟ ಮಾಡಲಿಲ್ಲ.. ಅಭಿಮಾನಿಗಳನ್ನು ಸಮಾಧಾನ ಮಾಡುವ ಕೆಲಸ ಮಾಡಿದರು.

ಇದನ್ನೂ ಓದಿ; ಶಾರುಖ್‌ ಖಾನ್‌ ಮಗನ ತಿಂಗಳ ಸ್ಕೂಲ್‌ ಫೀಜ್‌ ಬರೋಬ್ಬರಿ 2 ಲಕ್ಷ ರೂಪಾಯಿ!

ನನ್ನ ಹಾಗೂ ಅಂಬರೀಶ್ ಅಭಿಮಾನಿಗಳಿಗೆ ಮಂಡ್ಯದ ಜನ 5 ವರ್ಷದ ರಾಜಕೀಯ ಜೀವನ ನೀಡಿದ್ದಾರೆ.. ಇದರಿಂದ ನಾನು ಎಲ್ಲರಿಗೂ ಕೃತಜ್ಞಳಾಗಿರುತ್ತೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ.. ನನಗೆ ರಾಜಕೀಯ ಅನುಭವ ಇಲ್ಲದ ಮಂಡ್ಯದ ಜನ ನನ್ನ ಜೊತೆ ಇದ್ದು ಗೆಲ್ಲಿಸಿದ್ದಾರೆ.. ಇದೇ ನನ್ನ ಶಕ್ತಿ‌ ಎಂದಿರುವ ಸುಮಲತಾ ಅವರು, ಅಂದು ನನ್ನ ಜೊತೆಗೆ ಮಂತ್ರಿಗಳು ಇರಲಿಲ್ಲ. ಮಂಡ್ಯ ಸಾಮಾನ್ಯ ಜನರೇ ನಿಂತು ಗೆಲ್ಲಿಸಿಕೊಟ್ಟರು ಎಂದು ಸುಮಲತಾ ಹೇಳಿದ್ದಾರೆ.. ನಾನು 5 ವರ್ಷ ನಿಮ್ಮ ಕೈಲಾದ ಸೇವೆ ಮಾಡಿದ್ದೀರಿ‌ ಎಂದ್ರು. ಕಳೆದ 5 ವರ್ಷದಲ್ಲಿ ಕಣ್ಣೀರು ಹಾಕಿದ ದಿನಗಳು ಇದೆ. ನಾನು ಸ್ವಾರ್ಥದಿಂದ ನನ್ನ ಹೆಜ್ಜೆ ಹಾಕಿಕೊಳ್ಳಬಹುದಿತ್ತು. ರಾಜಕೀಯದಲ್ಲಿ ನಾನು ಸ್ವಾರ್ಥಿಯಾಗಿದ್ದರೆ ನಾನು ಬೇರೆ ರೀತಿಯಲ್ಲೇ ಇರುತ್ತಿದ್ದೆ ಎಂದು ಸುಮಲತಾ ಹೇಳಿದ್ದಾರೆ.

ಇದನ್ನೂ ಓದಿ; ಹೀಗೆ ಮಾಡಿದರೆ ಜೀವನಪೂರ್ತಿ ಗೃಹಲಕ್ಷ್ಮೀ ಯೋಜನೆ ಹಣ ಪಡೆಯಬಹುದು!

ಕುಮಾರಸ್ವಾಮಿ ಸ್ಪರ್ಧೆ ಮಾಡದಿದ್ದರೆ ಸುಮಲತಾಗೆ ಅವಕಾಶ ಸಿಗುತ್ತಿತ್ತಾ..?

ಬಿಜೆಪಿ ಹೈಕಮಾಂಡ್‌ ಅವರು ಮಂಡ್ಯ ಕ್ಷೇತ್ರದ ಬಗ್ಗೆ ಕೊನೆಯವರೆಗೂ ಸಸ್ಪೆನ್ಸ್‌ ಕಾಪಾಡಿತ್ತು.. ಅಷ್ಟಕ್ಕೂ ಬಿಜೆಪಿ ಹೈಕಮಾಂಡ್‌, ಕುಮಾರಸ್ವಾಮಿಯವರು ಸ್ಪರ್ಧೆ ಮಾಡಿದರೆ ಮಾತ್ರ ಮಂಡ್ಯ ಬಿಟ್ಟುಕೊಡುತ್ತೇವೆ ಎಂದು ಹೇಳುತ್ತಿತ್ತು ಎನ್ನಲಾಗಿದೆ.. ಈ ಕಾರಣಕ್ಕಾಗಿಯೇ ಅನಿವಾರ್ಯವಾಗಿ ಕುಮಾರಸ್ವಾಮಿಯವರು ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಇವು ಊಹಾಪೋಹಗಳೇ ಆಗಿದ್ದರೂ ನಿಜ ವಿಷಯ ಏನು ಅನ್ನೋದು ಸುಮಲತಾ ಅವರಿಗೆ ಗೊತ್ತಿದೆ.. ಹೀಗಾಗಿ ಅವರು ಏಪ್ರಿಲ್‌ 3 ತೆಗೆದುಕೊಳ್ಳುವ ನಿರ್ಧಾರ, ಕುಮಾರಸ್ವಾಮಿ ಸೋಲು, ಗೆಲುವು ನಿರ್ಧರಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ..

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

 

Share Post