HealthLifestyle

ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ಜಂಕ್ ಫುಡ್ ತಿನ್ನುವುದು, ಹೋಟಲ್ ಊಟ ಸೇವಿಸುವುದರಿಂದ ಎಲ್ಲರ ದೇಹದ ತೂಕ ಹೆಚ್ಚಾಗುತ್ತಿದೆ.. ಇದರಿಂದ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ.. ಅಗತ್ಯಕ್ಕಿಂತ ತೂಕ ಹೆಚ್ಚಾಗಿ, ಬಿಪಿ, ಮಧುಮೇಹದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.. ಇಂತಹವರು ಮನೆಯಲ್ಲೇ ಇರುವ ವಸ್ತುಗಳು, ಪದಾರ್ಥಗಳನ್ನು ಬಳಸಿ ದೇಹದ ತೂಕ ಇಳಿಸಿಕೊಳ್ಳಬಹುದು. ಜೊತೆಗೆ ದೇಹದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಬೆಂಡೇಕಾಯಿ ನೀರು ಕುಡಿಯಿರಿ, ಆರೋಗ್ಯವಾಗಿರಿ;

ಬೆಂಡೆಕಾಯಿ ಅನೇಕ ಜನರ ನೆಚ್ಚಿನ ತರಕಾರಿ. ಹೀಗಾಗಿ ವಾರಕ್ಕೊಮ್ಮೆಯಾದರೂ ಇದನ್ನು ಬಳಸಿ ಅಡುಗೆ ತಯಾರಿಸಲಾಗುತ್ತದೆ.. ಕರಿ, ಸೂಪ್, ಫ್ರೈ ಹೀಗೆ ಹಲವು ಬಗೆಯಲ್ಲಿ ಬೆಂಡೆಕಾಯಿಯನ್ನು ನಾವು ತಿನ್ನುತ್ತೇವೆ. ಆದರೆ ನೀವು ಎಂದಾದರೂ ಬೆಂಡೆಕಾಯಿ ನೀರು ಕುಡಿದಿದ್ದೀರಾ..? ಕುಡಿದು ನೋಡಿ, ನಿಮ್ಮ ಆರೋಗ್ಯ ಹೇಗಿರುತ್ತೆ ಅಂತ ಆಗ ಹೇಳಿ..

ಬೆಂಡೆಕಾಯಿಯಲ್ಲಿ ಹಲವು ಪೋಷಕಾಂಶ;

ಹೌದು, ಬೆಂಡೆಕಾಯಿ ನೀರು ಹಲವಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಫೈಬರ್, ಪ್ರೊಟೀನ್, ಪೊಟ್ಯಾಸಿಯಮ್, ಫೋಲೇಟ್, ಮೆಗ್ನೀಸಿಯಮ್ ಮುಂತಾದ ಆರೋಗ್ಯಕರ ಪೋಷಕಾಂಶಗಳಿವೆ. ಇದು ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮತ್ತು ಜೀರ್ಣಕಾರಿ ಕಾಯಿಲೆಗಳನ್ನು ನಿವಾರಣೆ ಮಾಡಲು ನಮಗೆ ಸಹಾಯ ಮಾಡುತ್ತದೆ. ಬೆಂಡೆಕಾಯಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ. ಅಲ್ಲದೆ, ಇದು ದೇಹದ ತೂಕ ನಷ್ಟಕ್ಕೆ ನಮಗೆ ತುಂಬಾನೆ ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ.. ಇದರಿಂದ ದೇಹದ ತೂಕದ ಕಡಿಮೆಯಾಗುತ್ತದೆ.

 ಬೆಂಡೆಕಾಯಿ ನೀರು ಹೇಗೆ ಉಪಯುಕ್ತ..?;

ತೂಕ ನಷ್ಟಕ್ಕೆ ಬೆಂಡೆಕಾಯಿ ನೀರು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವಾಗಿದೆ.100 ಗ್ರಾಂ ಬೆಂಡೆಕಾಯಿಯಲ್ಲಿ ಸುಮಾರು 30 ಕ್ಯಾಲೋರಿಗಳು ಇರುತ್ತವೆ. ಇದರಲ್ಲಿ ಫೈಬರ್ ಕೂಡ ಹೇರಳವಾಗಿದ್ದು ದೇಹಕ್ಕೆ ಶಕ್ತಿ ನೀಡುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಅನಿಸುತ್ತದೆ. ಇದರಿಂದ ಹೆಚ್ಚು ತಿನ್ನುವುದು ಕಡಿಮೆ ಮಾಡುತ್ತೇವೆ. ಬೆಂಡೆಕಾಯಿ ನೀರನ್ನು ಸೇವಿಸುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಬಹುದು. ಅಲ್ಲದೆ, ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಬೆಂಡೆಕಾಯಿ ನೀರು ಮಾಡುವುದು ಹೇಗೆ?:

ಬೆಂಡೆಕಾಯಿ ನೀರನ್ನು ತಯಾರಿಸಲು ಮೊದಲು 6-7 ಮಧ್ಯಮ ಗಾತ್ರದ ಬೆಂಡೆಕಾಯಿಯನ್ನು ತೆಗೆದುಕೊಂಡು ತುದಿಗಳನ್ನು ಕತ್ತರಿಸಿ. ಈಗ ಆ ಬೆಂಡೆಕಾಯಿಯನ್ನು ಎರಡು ಕಪ್ ನೀರಿನಲ್ಲಿ ನೆನೆಸಿ. ರಾತ್ರಿಯಿಡೀ ಹೀಗೆ ಬಿಡಿ. ಮರುದಿನ ಬೆಳಿಗ್ಗೆ, ನೀರಿನಿಂದ ಹಿಟ್ಟನ್ನು ತೆಗೆದುಹಾಕಿ. ಈಗ ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ರೀತಿ ನಿಯಮಿತವಾಗಿ ಬೆಂಡೆಕಾಯಿ ನೀರನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಬಹಳಷ್ಟು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

Share Post