ಗುರುವಾರವೇ ಸಿದ್ದರಾಮಯ್ಯ ಕೇಸ್ ವಿಚಾರಣೆ; ಶುರುವಾಯ್ತು ಢವಢವ!
ಬೆಂಗಳೂರು; ಗುರುವಾರ ಸಿದ್ದರಾಮಯ್ಯ ಅವರ ರಿಟ್ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದೆ.. ಅಂದರೆ ಇದಕ್ಕೆ ಎರಡು ದಿನ ಮಾತ್ರ ಬಾಕಿ ಇದೆ.. ಹೈಕೋರ್ಟ್ ಆದೇಶದ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಭವಿಷ್ಯ ನಿಂತಿದೆ.. ಹೀಗಾಗಿ ಎಲ್ಲರ ಕುತೂಹಲ ಗುರುವಾರದ ಹೈಕೋರ್ಟ್ ಆದೇಶದ ಮೇಲೆ ನೆಟ್ಟಿದೆ.. ಇತ್ತ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವಢವ ಶುರುವಾಗಿದೆ.. ಒಂದು ವೇಳೆ ಹೈಕೋರ್ಟ್ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆ ಕೊಟ್ಟರೆ ಮಾತ್ರ ಸಿದ್ದರಾಮಯ್ಯಗೆ ರಿಲೀಪ್ ಸಿಗುತ್ತೆ.. ಇಲ್ಲಾಂದ್ರೆ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗುತ್ತೆ.. ಹಾಗೇನಾದರೂ ಆದರೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಕೂಡಾ ಬರಬಹುದು..
ಇದನ್ನೂ ಓದಿ; 12ಕ್ಕೂ ಹೆಚ್ಚು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.. ಅದರ ವಿಚಾರಣೆ ಆಗಸ್ಟ್ 29ರಂದು ನಡೆಯಲಿದೆ.. ಆಗಸ್ಟ್ 19ರಂದು ವಿಚಾರಣೆ ನಡೆಸಿದ್ದ ಕೋರ್ಟ್, 29ಕ್ಕೆ ವಿಚಾರಣೆ ಮುಂದೂಡಿತ್ತು.. ಹೀಗಾಗಿ ಅಂದು ನೀಡುವ ಆದೇಶ ಭಾರೀ ಕುತೂಹಲ ಕೆರಳಿಸಿದೆ.. ರಾಜ್ಯಪಾಲರ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದರೆ ಮಾತ್ರ ಸಿಎಂ ಸಿದ್ದರಾಮಯ್ಯಗೆ ರಿಲೀಫ್ ಸಿಗುತ್ತದೆ.. ಇಲ್ಲದಿದ್ದರೆ ಸಿಎಂ ಸ್ಥಾನವನ್ನೂ ಕಳೆದುಕೊಳ್ಳುವ ಭೀತಿ ಇದೆ.. ಹೀಗಾಗಿ ಆ ದಿನ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲದ ದಿನ..
ಇದನ್ನೂ ಓದಿ; ನಟಿ ಕಂಗನಾ ರನೌತ್‌ಗೆ ಜೀವ ಬೆದರಿಕೆ!; ಕೊಲೆ ಮಾಡ್ತೀವಿ ಎಂದ ದುಷ್ಕರ್ಮಿಗಳು!
ಸಿದ್ದರಾಮಯ್ಯ ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ಮನವಿ ಮೇರೆಗೆ ಆಗಸ್ಟ್ 29ಕ್ಕೆ ವಿಚಾರಣೆ ಮುಂದೂಡಲಾಗಿದೆ.. ಜೊತೆಗೆ ಅಲ್ಲಿಯವರೆಗೆ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೂ ಯಾವುದೇ ಆದೇಶ ನೀಡಬಾರದು ಎಂದು ಹೇಳಲಾಗಿದೆ.. ಆಗಸ್ಟ್ 29ರಂದು ಸಿದ್ದರಾಮಯ್ಯ ಅವರ ಪವಾಗಿ ತೀರ್ಪು ಬರದೇ ಇದ್ದರೆ, ಸೆಪ್ಟೆಂಬರ್ 4ರಂದು ಜನಪ್ರತಿನಿಧಿಗಳ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ..
ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದರೆ, ಸಿಎಂ ಸಿದ್ದರಾಮಯ್ಯ ವಿಚಾರಣೆ ಎದುರಿಸಬೇಕಾಗುತ್ತದೆ.. ಬಂಧನವಾಗುವ ಸಂದರ್ಭವೂ ಎದುರಾಗಬಹುದು.. ಹೀಗಾಗಿ ಅವರ ಸಿಎಂ ಸ್ಥಾನಕ್ಕೂ ಕುತ್ತುಂಟಡಾಗಬಹುದು ಎಂದು ಹೇಳಲಾಗುತ್ತಿದೆ.. ಒಂದು ವೇಳೆ ಹೈಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದರೂ, ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್‌ನಲ್ಲೂ ಪ್ರಶ್ನೆ ಮಾಡುವ ಅವಕಾಶವಿದೆ.. ಆದ್ರೂ ಕೂಡಾ ಭೀತಿ ಇದ್ದೇ ಇದೆ..
ಇದನ್ನೂ ಓದಿ; ಈತನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮಾತ್ರ ಪೂಜೆಗೆ ಫಲವಂತೆ!
ಇನ್ನು ಮುಡಾ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಪ್ರಕಾರ ಸಿದ್ದರಾಮಯ್ಯ ಅವರು ಯಾವ ತಪ್ಪೂ ಮಾಡಿಲ್ಲ.. ಒಂದು ತಪ್ಪಾಗಿದ್ದರೂ ಕೂಡಾ ಅದು ಬಿಜೆಪಿ ಆಡಳಿತದಲ್ಲಿರುವಾಗ ನಡೆದಿರೋದು.. ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್‌ಗಳನ್ನು ಹಂಚಿಕೆ ಮಾಡಿರುವುದು ಕೂಡಾ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿರುವುದು.. ಹೀಗಾಗಿ, ಆಗ ಅಧಿಕಾರದಲ್ಲಿದ್ದವರದ್ದು ತಪ್ಪಾಗುತ್ತೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ..
ಇದರ ಜೊತೆಗೆ ಯಾವುದಾದರೂ ತನಿಖಾ ಸಂಸ್ಥೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರೆ ರಾಜ್ಯಪಾಲರು ಕೊಡಬಹುದಿತ್ತು.. ಆದ್ರೆ ನನ್ನ ವಿರುದ್ಧ ತನಿಖೆಯೇ ನಡೆದಿಲ್ಲ.. ಖಾಸಗಿ ವ್ಯಕ್ತಿ ಮನವಿ ಮೇರೆಗೆ ಈ ಆದೇಶ ನೀಡಲಾಗಿದೆ.. ಇದು ರಾಜಕೀಯ ದುರುದ್ದೇಶ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ.. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 29ರಂದು ಅಭಿಷೇಕ್ ಮನು ಸಿಂಘ್ವಿ ಹಾಗೂ ಕಪಿಲ್ ಸಿಬಲ್ ಅವರು ಸಿದ್ದರಾಮಯ್ಯ ಅವರ ಪರವಾಗಿ ವಾದ ಮಂಡಿಸಲಿದ್ದಾರೆ.. ಇದನ್ನು ಕೋರ್ಟ್ ಪರಿಗಣಿಸಿದರೆ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಗಲಿದೆ..