Politics

LPG Gas, Toilet ಕಟ್ಟಿಸಿದರೆ ಮಹಿಳಾ ಸಬಲೀಕರಣ ಆಗಲ್ಲ : ಪ್ರಿಯಾಂಕ ಗಾಂಧಿ

ನವದೆಹಲಿ : ಉತ್ತರಪ್ರದೇಶದ ಚುನಾವಣೆಗಾಗಿ ರಾಯ್‌ ಬರೇಲಿಯಲ್ಲಿ ನಡೆದ ಶಕ್ತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕ ಗಾಂಧಿ ಆಡಳಿತ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ. LPG Gas, Toilet ಕಟ್ಟಿ ಕೊಟ್ಟರೆ ಅದು ಮಹಿಳಾ ಸಬಲೀಕರಣ ಆಗೊಲ್ಲ ಎಂದು ವಾಗ್ವಾದ ನಡೆಸಿದ್ದಾರೆ.

ಮಹಿಳೆಯರ ಸ್ವಾಭಿಮಾನದಿಂದ ಬದುಕುವುದು ಹಾಗೂ ಎಲ್ಲಾ ತಾರತಮ್ಯಗಳ ವಿರುದ್ಧ ಹೋರಾಡೋದು ಮಹಿಳಾ ಸಬಲೀಕರಣವೇ ಹೊರತು LPG Gas, Toilet ಕಟ್ಟಿಸೋದಲ್ಲ ಎಂದಿದ್ದಾರೆ. ಧರ್ಮದ ಹೆಸರನ್ನು ಬಳಸಿಕೊಂಡು ಆಡಳಿತ ಪಕ್ಷ ರಾಜಕೀಯ ನಡೆಸುತ್ತಿದೆ ಆದರೆ ಅದು ಸರಿಯಿಲ್ಲ ಎಂದು ಪ್ರಿಯಾಂಕ ಗಾಂಧಿ ಉಲ್ಲೇಖಿಸಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ಯಾವುದೇ ಕೊಡುಗೆ ನೀಡಿಲ್ಲ. ಮುಂದಿನ ಚುನಾವಣೆಯಲ್ಲಿ ವೋಟ್ ನೀಡಬೇಕಾದ ಸಮಯದಲ್ಲಿ ಸರಿಯಾಗಿ ಯೋಚಿಸಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Share Post