LifestyleTechTechnology

ನೀರಲ್ಲಿ ಬಿದ್ದ ಮೊಬೈಲ್‌ನ್ನು ಅಕ್ಕಿಯಲ್ಲಿ ಮುಚ್ಚಿಟ್ಟರೆ ನಿಜವಾಗಲೂ ಸರಿಹೋಗುತ್ತಾ..?

ಇದು ಎಂಥಾ ಕಾಲ ಅಂದ್ರೆ ಸ್ಮಾರ್ಟ್‌ ಫೋನ್‌ ಇಲ್ಲದ ಮನೆಯೇ ಇಲ್ಲ.. ಮನೆ ಏಕೆ ಫೋನ್‌ ಹೊಂದಿರದ ವ್ಯಕ್ತಿ ಸಿಗೋದೇ ಅಪರೂಪ… ಈಗ ಈ ಸ್ಮಾರ್ಟ್‌ ಫೋನ್‌ ಅನ್ನೋದು ಮನುಷ್ಯನ ಒಂದು ಅಂಗವೇ ಆಗಿಬಿಟ್ಟಿದೆ.. ಆದ್ರೆ, ಮಾತಾಡುವಾಗ ಅದನ್ನು ಬೀಳಿಸಿಕೊಳ್ಳುವುದು, ಎಲ್ಲೋ ಇಟ್ಟಿದ್ದಾಗ ಅದರ ಮೇಲೆ ನೀರು ಬೀಳುವುದು ನಡೆಯುತ್ತಿರುತ್ತದೆ.. ಆಗ ಕೆಲವರು ನೀರು ಬಿದ್ದ ಫೋನ್‌ ಅನ್ನು ಅಕ್ಕಿಯಲ್ಲಿ ಮುಳುಗಿಸಿ ಇಡುತ್ತಾರೆ.. ಅಕ್ಕಿಯೊಳಗೆ ಫೋನ್‌ ಇಟ್ಟರೆ ಫೋನ್‌ ಒಳಗೆ ಹೋಗಿರುವ ನೀರನ್ನು ಆ ಅಕ್ಕಿ ಹೀರಿಕೊಳ್ಳುತ್ತದೆ. ಇದರಿಂದ ಫೋನ್‌ ಸರಿಹೋಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ.. ಹಾಗಾದ್ರೆ ಇದು  ನಿಜವೇ..? ನೋಡೋಣ ಬನ್ನಿ..

ಇದನ್ನೂ ಓದಿ; ಇಂತಹವರನ್ನು ಮದುವೆಯಾದರೆ ನಿಮ್ಮ ಜೀವನ ನರಕವಂತೆ!

ಅಕ್ಕಿಗೆ ತೇವಾಂಶ ಹೀರಿಕೊಳ್ಳುವ ಶಕ್ತಿ ಇದೆ;

ಯಾರೊಂದಿಗೋ ಮಾತನಾಡುತ್ತಿರುತ್ತೀರಿ.. ಅದು ಜಾರಿ ನೀರಿನಲ್ಲಿ ಬೀಳುತ್ತದೆ.. ತಕ್ಷಣವನೇ ಅದನ್ನು ತೆಗೆಯುತ್ತೀರಿ.. ಆದ್ರೆ ಅಷ್ಟರಲ್ಲಿ ಸ್ವಲ್ಪ ನೀರು ಫೋನಿನೊಳಗೆ ಹೋಗಿರುತ್ತದೆ.. ಅಂತಹ ಒದ್ದೆಯಾದ ಫೋನ್‌ ಅನ್ನು ಒಣಗಿಸಲು ಹಲವು ವಿಧಾನಗಳನ್ನು ನಾವು ಅನುಸರಿಸಬಹುದು.. ಅದರಲ್ಲಿ ಅಕ್ಕಿ ಕೂಡಾ ಒಂದಾಗಿದೆ. ಯಾಕೆ ಗೊತ್ತಾ, ಅಕ್ಕಿಗೆ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ. ಆದ್ದರಿಂದ ನೀರಿನಿಂದ ಒದ್ದೆಯಾದ ಮೊಬೈಲ್‌ ಫೋನ್‌ಗಳನ್ನು ಒಣಗಿಸಲು ಅಕ್ಕಿಯನ್ನು ಬಳಸಬಹುದು.. ಇದರಿಂದ ಯಾವುದೇ ತೊಂದರೆ ಇಲ್ಲ.. ಆದ್ರೆ ಮೊಬೈಲ್‌ ಒಳಗೆ ಹೆಚ್ಚು ನೀರು ಹೊಂದಿದ್ದರೆ ಇದು ಕೆಲಸ ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.

ಒದ್ದೆಯಾದ ಫೋನ್  ಸ್ವಚ್ಛಗೊಳಿಸುವುದು ಹೇಗೆ..?;

ಫೋನ್‌ ನೀರಿನಲ್ಲಿ ಒದ್ದೆಯಾದರೆ ಅದನ್ನು ಒಣಗಿಸಬೇಕಾಗುತ್ತದೆ.. ಇಲ್ಲದಿದ್ದರೆ ಫೋನ್‌ ಪೂರ್ತಿ ಹಾಳಾಗುತ್ತದೆ..  ಫೋನ್ ನೀರಿನಲ್ಲಿ ಬಿದ್ದರೆ ತಕ್ಷಣ ಅದನ್ನು ಒಂದು ಸ್ವಚ್ಛವಾದ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು.. ಮೊಬೈಲ್‌ನಿಂದ ಸಿಮ್ ಕಾರ್ಡ್ ತೆಗೆದುಹಾಕಬೇಕು. ಫೋನ್ ಅನ್ನು ಒರೆಸಬೇಕು. ಬ್ಯಾಟರಿ ತೆಗೆಯಲು ಸಾಧ್ಯವಾದರೆ ಅದನ್ನೂ ಮಾಡಿ, ಸ್ವಿಚ್‌ ಆಫ್‌ ಆಗುವಂತಿದ್ದರೆ ಅದನ್ನೂ ಮಾಡಿ..

ಇದನ್ನೂ ಓದಿ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಕಾಂಗ್ರೆಸ್‌; ಸುಪ್ರೀಂನಿಂದ ಬಿಗ್‌ ರಿಲೀಫ್‌!

ಐಫೋನ್ ನೀರಲ್ಲಿ ಬಿದ್ದರೆ ಏನು ಮಾಡಬೇಕು..?;

ಐಫೋನ್‌ ಅನ್ನು ಅಕ್ಕಿಯಲ್ಲಿ ಇಟ್ಟರೆ ಅದು ಒಣಗುವುದಿಲ್ಲ.. ನೀರು ಬಿದ್ದ ಐಫೋನ್‌ ಒಣಗಿಸಲು ಅಕ್ಕಿಯಿಂದ ಸಾಧ್ಯವಿಲ್ಲ. ಇನ್ನು ಐಫೋನ್‌ಗಳಲ್ಲಿ ಬಹುತೇಕವು ವಾಟರ್‌ ಪ್ರೂಫ್‌ ಇರುತ್ತವೆ.. ಹೀಗಾಗಿ ನೀರು ಬಿದ್ದರೂ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ..

ನಿಮ್ಮ ಬಳಿ ಆಂಡ್ರಾಯ್ಡ್ ಫೋನ್ ಇದ್ದರೆ, ಅದಕ್ಕೆ ನೀರು ಬಿದ್ದರೆ ಒಣಗಿಸಲು ಅಕ್ಕಿಯನ್ನು ಬಳಸಬಹುದು. ಆದರೆ ಅಕ್ಕಿ ಹೆಚ್ಚು ಇರಬೇಕು. ಇದಲ್ಲದೆ, ಫೋನ್ ಪೋರ್ಟ್‌ಗಳಿಗೆ ಅಕ್ಕಿ ಬರದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ಮಾಡುವುದರಿಂದ ಫೋನ್ ಒಣಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ; ಡಾ.ಕೆ.ಸುಧಾಕರ್‌ ಹೆಜ್ಜೆ ಇಟ್ಟಲ್ಲೆಲ್ಲಾ ಮುಳ್ಳು!; ಚಿಕ್ಕಬಳ್ಳಾಪುರದ ಅಗ್ನಿಪರೀಕ್ಷೆ ಗೆಲ್ತಾರಾ ಮಾಜಿ ಸಚಿವ..?

ಫೋನ್‌ ಕೊಳಕು ನೀರಿನಲ್ಲಿ ಬಿದ್ದರೆ ಏನು ಮಾಡಬೇಕು..?;

ಕೊಳಕು ನೀರಿನಲ್ಲಿ ಫೋನ್‌ ಬೀಳಿಸಿದರೆ ಏನು ಮಾಡಬೇಕು..? ಕೊಳಕು ನೀರಿನಲ್ಲಿ ಮುಳುಗಿರುವ ಫೋನ್ ಅನ್ನು ಶುದ್ಧ ನೀರಿನಿಂದ ಮೊದಲು ತೊಳೆಯಬೇಕು.  ಫೋನ್‌ನಲ್ಲಿರುವ ಕೊಳೆಯನ್ನು ತೆಗೆದುಹಾಕಬೇಕು. ಹೀಗೆ ಮಾಡುವುದರಿಂದ ಫೋನ್‌ನ ಸರ್ಕ್ಯೂಟ್‌ನಲ್ಲಿನ ತುಕ್ಕು ಮುಂತಾದ ತೊಂದರೆಗಳು ದೂರವಾಗುತ್ತವೆ. ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಒದ್ದೆಯಾದ ಫೋನ್‌ಗಳನ್ನು ಗಾಳಿ ಇರುವ ಪ್ರದೇಶದಲ್ಲಿ ಇಡಬೇಕು ಎಂದು ಹೇಳುತ್ತವೆ. ಆದರೆ ಗೂಗಲ್ ಪ್ರಕಾರ ಒದ್ದೆಯಾದ ಫೋನ್ ಅನ್ನು ಕೋಣೆಯ ಉಷ್ಣಾಂಶದಲ್ಲಿ ಮಾತ್ರ ಇಡಬೇಕು.

ತಪ್ಪಾಗಿಯೂ ಇದನ್ನು ಮಾಡಬೇಡಿ;

ನೀರಿನಲ್ಲಿ ನೆನೆಸಿದ ಫೋನ್‌ನಲ್ಲಿ ಹೇರ್ ಡ್ರೈಯರ್ ಅಥವಾ ಸಂಕುಚಿತ ಗಾಳಿಯನ್ನು ಎಂದಿಗೂ ಬಳಸಬೇಡಿ. ಅಷ್ಟೇ ಅಲ್ಲ ಫ್ರೀಜರ್ ನಲ್ಲೂ ಇಡಬಾರದು. ಇದರಿಂದ ಫೋನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಫೋನ್‌ ಪೂರ್ತಿಯಾಗಿ ಕೆಲಸ ಮಾಡದಂತೆ ಆಗಬಹುದು. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ..

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

Share Post