Skip to content
Thursday, May 15, 2025
Latest:
  • ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಮಹಿಳೆ!
  • ಕೆಲಸದ ಒತ್ತಡ; ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ!
  • ಇರಾನ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ!
  • KSRTC ಬಸ್‌ನಲ್ಲಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು!
  • ನೀರು ಹೆಚ್ಚು ಸೇವಿಸಿದರೆ ರಕ್ತದೊತ್ತಡ ನಿವಾರಿಸಬಹುದೇ..?
Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |

  • Bengaluru
  • Districts
  • Politics
  • Crime
  • National
  • International
  • Cinema
  • Health
  • Sports
  • Others
    • ASTROLOGY
    • History
    • Interviews
    • Lifestyle
    • Technology
InternationalLifestyle

ವಿಚಿತ್ರ ಕಾಡು; ಈ ಕಾಡಿಗೆ ಹೋದರೆ ಆತ್ಮಹತ್ಯೆ ಮಾಡ್ಕೋಬೇಕು ಅನಿಸುತ್ತಂತೆ!

April 2, 2024 ITV Network

ಮಾನಸಿಕವಾಗಿ ವೀಕ್‌ ಇರುವವರು ಆತ್ಮಹತ್ಯೆಯಂತಹ ಯೋಚನೆಗಳನ್ನು ಮಾಡುತ್ತಾರೆ.. ಸಣ್ಣ ಸಮಸ್ಯೆ ಬಂದರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಯೋಚಿಸುತ್ತಿರುತ್ತಾರೆ.. ಧೈರ್ಯವಂತರು ಯಾರೂ ಕೂಡಾ ಆತ್ಮಹತ್ಯೆಯಂತಹ ಕೆಟ್ಟ ಪ್ರಯತ್ನಕ್ಕೆ ಕೈಹಾಕುವುದಿಲ್ಲ… ಬದುಕಿ ತೋರಿಸುತ್ತಾರೆ.. ಎಂತಹ ಸಮಸ್ಯೆಯನ್ನೇ ಆದರೂ ಎದುರಿಸುತ್ತಾರೆ.. ಆದ್ರೆ, ಜಪಾನ್‌ನಲ್ಲಿ ಒಂದು ಜಾಗ ಇದೆ.. ಎಂಥಾ ಧೈರ್ಯವಂತ ವ್ಯಕ್ತಿಯೇ ಆದರೂ ಈ ಸ್ಥಳಕ್ಕೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಾನೆ.. ವಿಚಿತ್ರ ಆದರೂ ಸತ್ಯ…

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಬೋರ್ಡ್‌;

ಕಾಡಿನ ಪ್ರದೇಶದಲ್ಲಿ ಕಾಡುಮೃಗಗಳಿವೆ ಎಂದು ಬೋರ್ಡ್‌ ಹಾಕಲಾಗಿರುತ್ತದೆ.. ಅಪಾಯಕಾರಿ ಪ್ರಾಣಿಗಳಿರುತ್ತವೆ. ಎಚ್ಚರಿಕೆಯಿಂದ ಓಡಾಡಿ ಎಂದು ಸೂಚನಾ ಫಲಕಗಳನ್ನು ಹಾಕಲಾಗಿರುತ್ತದೆ.. ಆದ್ರೆ ಇಲ್ಲೊಂದು ಕಾಡಿದೆ.. ಈ ಕಾಡಿನ ಹೊರಗಡೆ ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂಬ ಬೋರ್ಡ್‌ ಹಾಕಲಾಗಿದೆ.. ಜಪಾನ್‌ನ ರಾಜಧಾನಿ ಟೋಕಿಯೊ ಬಳಿ ಇಂತಹದ್ದೊಂದು ಕಾಡಿದೆ.. ಟೋಕಿಯೊದಿಂದ 2 ಗಂಟೆ ಪ್ರಯಾಣ ಮಾಡಿದರೆ ಈ ಅರಣ್ಯ ತಲುಪಬಹುದು. ಈ ಅರಣ್ಯದ ಹೆಸರು ಅಕಿಗಹರಾ.. ಇದು ವಿಶ್ವದ ಅತ್ಯಂತ ಪ್ರಸಿದ್ಧ ಆತ್ಮಹತ್ಯಾ ಕೇಂದ್ರಗಳಲ್ಲಿ ಒಂದು ಎಂದು ಹೇಳಲಾಗಿದೆ.. ಏನು ಕಾರಣವೋ ಏನೋ ಈ ಕಾಡಿಗೆ ಕಾಲಿಟ್ಟರೆ ಎಂತಹವರಿಗೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸುತ್ತದಂತೆ..

ಇದನ್ನೂ ಓದಿ; ಬಿಸಿಲಲ್ಲಿ ನೀವು ಮಾಡುವ ಮಿಸ್ಟೇಕ್‌ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಹುಷಾರ್‌!

ಅಕಿಗಹರಾ ಅರಣ್ಯ ಅಂದ್ರೆ ಅದು ಮರಗಳ ಸಮುದ್ರ;

ಟೋಕಿಯೋ ನಗರದಿಂದ ಸುಮಾರು 100 ಕಿಲೋ  ಮೀಟರ್‌ ದೂರದಲ್ಲಿರುವ ಈ ಅಕಿಗಹರಾ ಅರಣ್ಯ ಸುಮಾರು 35 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿದೆ.. ಮರಗಳು ತುಂಬಾ ದಟ್ಟವಾಗಿರುವುದರಿಂದ ಇದನ್ನು ಮರಗಳ ಸಮುದ್ರ ಅಂತಾನೇ ಕರೀತಾರೆ.. ಹೀಗಾಗಿ ತಾಜಾ ಗಾಳಿ ಹಾಗೂ ಪ್ರಕೃತಿಯ ನಡುವೆ ಸಮಯ ಕಳೆಯಲು ಜನ ಆಗಾಗ ಇಲ್ಲಿಗೆ ಬರುತ್ತಾರೆ.. ಆದ್ರೆ ಈ ಕಾಡಿಗೆ ಕಾಲಿಟ್ಟ ಮೇಲೆ ಕೆಲವರಿಗೆ ಆತ್ಮಹತ್ಯೆ ಯೋಚನೆ ಬರುತ್ತದಂತೆ.. ಇಲ್ಲಿ ವರ್ಷಕ್ಕೆ ಸರಾಸರಿ 100 ಮಂದಿಯಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.. ಹೀಗಾಗಿ ಕಾಡಿನ ಹೊರಗೆ ಬೋರ್ಡ್‌ ಒಂದನ್ನು ಹಾಕಲಾಗಿದೆ.. ಜೀವನ ಅಮೂಲ್ಯವಾದುದು.. ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಈ ಬೋರ್ಡ್‌ನಲ್ಲಿ ಬರೆಯಲಾಗಿದೆ..

ಇದನ್ನೂ ಓದಿ; ಬೆಳ್ಳುಳ್ಳಿ ರಸಂ ತಿನ್ನಿ; ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಈ ಕಾಡನ್ನು ಸೂಸೈಡ್‌ ಫಾರೆಸ್ಟ್‌ ಅಂತಾರೆ;

ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಸೇತುವೆಯ ನಂತರ, ವಿಶ್ವದ ಅತಿ ಹೆಚ್ಚು ಆತ್ಮಹತ್ಯೆಗಳು ಈ ಅಕಿಗಹರಾ ಅರಣ್ಯದಲ್ಲೇ ಸಂಭವಿಸಿವೆ ಎಂದು ವರದಿಗಳು ಹೇಳುತ್ತವೆ. ಈ ಕಾರಣದಿಂದಾಗಿಯೇ ಈ ಅಕಿಗಹರಾ ಕಾಡನ್ನು ‘ಸೂಸೈಡ್‌ ಫಾರೆಸ್ಟ್‌’ ಅಂತಾನೂ ಕರೆಯುತ್ತಾರೆ. ಆದ್ರೆ ಇತ್ತೀಚೊನ ದಿನಗಳಲ್ಲಿ ಇದು ಕಡಿಮೆಯಾಗಿದೆ.. ಅಂದಹಾಗೆ, ಜಪಾನಿನ ಇತಿಹಾಸ ಪುಟಗಳನ್ನು ತಿರುವಿ ಹಾಕಿದ್ರೆ ಸಾವಿರ ವರ್ಷಗಳ ಹಿಂದೆ ಇಲ್ಲಿ ಕಾಡೇ ಇರಲಿಲ್ಲ.. ಸಾವಿರ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಲಾವಾ ಹರಿಯುತ್ತಿತ್ತು. 864 ರಲ್ಲಿ ಜಪಾನ್‌ನ ಮೌಂಟ್ ಫ್ಯೂಜಿಯಲ್ಲಿ 6 ತಿಂಗಳ ಕಾಲ ದೊಡ್ಡ ಸ್ಫೋಟ ಸಂಭವಿಸಿತ್ತು. ಆ ಸಮಯದಲ್ಲಿ ಹತ್ತಿರದ ಅನೇಕ ಹಳ್ಳಿಗಳು ಆಹುತಿಯಾದವು.. ನಂತರದ ದಿನಗಳಲ್ಲಿ ಇಲ್ಲಿ ದಟ್ಟವಾದ ಕಾಡು ಸೃಷ್ಟಿಯಾಯಿತು.

ಇದನ್ನೂ ಓದಿ; ಕಣ್ಣು ಮಂಜಾಗುತ್ತಿದೆಯಾ..?; ಹಾಗಾದರೆ ಈ ಟ್ರಿಕ್ಸ್‌ ಬಳಸಿ, ಕಣ್ಣುಗಳನ್ನು ಕಾಪಾಡಿ!

ಇಲ್ಲಿ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ..?;

1960 ರ ಪ್ರಸಿದ್ಧ ಸಣ್ಣ ಕಥೆಯಾದ ‘ಟವರ್ ಆಫ್ ವೇವ್ಸ್’ ನಲ್ಲಿಯೂ ಅಕಿಗಹರಾವನ್ನು ಉಲ್ಲೇಖಿಸಲಾಗಿದೆ. ಕಥೆಯು ಸಮಾಜದಿಂದ ಭೇಟಿಯಾಗದಂತೆ ತಡೆಯುವ ಜೋಡಿ ಪ್ರೇಮಿಗಳ ಮೇಲೆ ಕೇಂದ್ರೀಕರಿಸುತ್ತದೆ. ಅಂತಿಮವಾಗಿ ಮುಖ್ಯ ಸ್ತ್ರೀ ಪಾತ್ರವು ಕಾಡಿಗೆ ಹೋಗಿ ತನ್ನ ಪ್ರಾಣವನ್ನು ತೆಗೆದುಕೊಳ್ಳುತ್ತದೆ. ಪ್ರೇಮಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಬಗ್ಗೆ ಜಾನಪದ ಕಥೆಗಳು ಜಪಾನ್‌ನಲ್ಲಿ ಈಗಾಗಲೇ ಜನಪ್ರಿಯವಾಗಿವೆ. ಈ ರೀತಿಯ ಕಥೆಗಳು ಆ ಕಲ್ಪನೆಯನ್ನು ಬಲಪಡಿಸುತ್ತವೆ. ಆದರೆ ಅಕಿಗಹರಾ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಇದೊಂದೇ ಕಾರಣವಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ; ಈ ತರಕಾರಿ ನೀರು ಕುಡಿದರೆ ಸ್ಲಿಮ್ ಆಗಬಹುದು!

ಭ್ರಮೆ ಉಂಟುಮಾಡುವ ಶಕ್ತಿಗಳ ಪರಿಣಾಮ;

ಈ ನಿಗೂಢ ಅರಣ್ಯ ಅದೇನೋ ನಿಗೂಢ ಶಕ್ತಿಯನ್ನು ಹೊಂದಿದೆ ಎಂದು ಹೇಳುತ್ತಾರೆ. ಕಾಡಿನಲ್ಲಿ ದೆವ್ವ ವಾಸಿಸುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಇವು ಕಾಡಿಗೆ ಕಾಲಿಟ್ಟವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತವೆ ಎಂಬ ನಂಬಿಕೆ ಇದೆ. ಅಕಿಗಹಾರದ ದಟ್ಟವಾದ ಕಾಡಿನಲ್ಲಿ ಒಮ್ಮೆ ಕಳೆದುಹೋದರೆ, ಹೊರಬರುವುದು ತುಂಬಾ ಕಷ್ಟ ಎಂಬ ವಾದವೂ ಇದೆ. ದಿಕ್ಸೂಚಿ ಅಥವಾ ಮೊಬೈಲ್‌ನಂತಹ ಸಾಧನಗಳು ಸಹ ಇಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅನೇಕ ಜನರು ತಮ್ಮ ದಾರಿಯನ್ನು ತಿಳಿಯುವ ಮೊದಲು ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ; ಬೆವರು ದುರ್ವಾಸನೆಯಿಂದ ರೋಸಿಹೋಗಿದ್ದೀರಾ..?; ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ..

Share Post
  • ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!
  • 30ಕ್ಕೂ ಹೆಚ್ಚು ನಾಯಕರಿಗೆ ಕಾಂಗ್ರೆಸ್‌ ಗಾಳ; ಮೈಸೂರಲ್ಲಿ ಆಪರೇಷನ್‌ ಹಸ್ತ ಜೋರು!

You May Also Like

ಪಾಕಿಸ್ತಾನ ಪ್ರಧಾನಿ ಇಮ್ರಾಜ್‌ ಖಾನ್‌ಗೆ ಕುರ್ಚಿ ಕಳೆದುಕೊಳ್ಳುವ ಭೀತಿ

March 18, 2022 ITV Network

ಚಳಿಯಲ್ಲಿ ಈ ವ್ಯಾಯಾಮಗಳನ್ನು ಮಾಡಿದರೆ ತುಂಬಾ ಒಳ್ಳೆಯದಂತೆ!

November 11, 2023 ITV Network

ಇಂದು ಮಧ್ಯರಾತ್ರಿ ಒಳಗಾಗಿ ಕೀವ್‌ ನಗರ ತೊರೆದು ಬನ್ನಿ-ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ

March 1, 2022 ITV Network
Copyright © 2025 Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |. All rights reserved.
Theme: ColorMag by ThemeGrill. Powered by WordPress.