ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ
ಸಾಮಾನ್ಯವಾಗಿ ದಿನಿತ್ಯ ಸೇವಿಸುವ ಆಹಾರದಲ್ಲಿ ಏನಾದ್ರು ವ್ಯತ್ಯಾಸವಾದರೆ ಅದು ಗ್ಯಾಸ್ಟ್ರಿಕ್ ಉಂಟಾಗುತ್ತದೆ. ಆ ಸಮಸ್ಯೆ ಎದುರಾದಾಗ ವಾಕರಿಕೆ, ವಾಂತಿ, ಹೊಟ್ಟೆನೋವು, ಎದೆಉರಿ, ತಲೆನೋವಿನಂತಹ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಆಸಿಡಿಯನ್ನು ಆಹಾರಕ್ರಮದಲ್ಲೇ ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಆಸಿಡಿ ಸಮಸ್ಯೆಗೆ ಪರಿಹಾರ ಸಿಗಲಿದೆ.
ದೇಹದ ತೂಕದ ಬಗ್ಗೆ ಎಚ್ಚರವಿರಲಿ
ದೇಹದ ತೂಕದ ನಿರ್ವಹಣೆಯಿಂದ ನಿಮ್ಮ ಹೃದಯ, ಮೂಳೆಗಳನ್ನೂ ಕೂಡ ಆರೋಗ್ಯಯುತವಾಗಿರುತ್ತದೆ. ಆದ್ದರಿಂದ ಸರಿಯಾದ ದೇಹ ತೂಕ ಕಾಪಾಡಿಕೊಂಡರೆ ಆಸಿಡಿಟಿ ಅಥವಾ ಇತರ ಕಾಯಿಲೆಗಳಿಂದಲೂ ದೂರವಿರಬಹುದು.
ಆಹಾರ ಪದ್ಧತಿ ಸರಿಯಾಗಿರಲಿ
ನೀವು ಸೇವಿಸುವ ಜಂಕ್ ಫುಡ್ ಹಾಗೂ ಅನಾರೋಗ್ಯಕರ ಆಹಾರವು ಆಸಿಡಿಟಿ ರಿಫ್ಲೆಕ್ಸ್ಗೆ ಕಾರಣವಾಗುತ್ತದೆ. ಜತೆಗೆ ಆತುರದಿಂದ ಊಟಮಾಬೇಡಿ. ಅದೇ ರಿತಿ ಊಟ ಮಾಡಿದ ತಕ್ಷಣ ಮಲಗಬೇಡಿ ಮತ್ತು ದೇಹಕ್ಕೆ ಶ್ರಮವಾಗುವ ಯಾವುದೇ ಕೆಲಸಗಳನ್ನು ಮಾಡಬೇಡಿ.
ಪಾನೀಯಗಳೆಡೆಗೆ ಗಮನವಿರಲಿ
ನೀವು ಸೇವಿಸುವ ಪಾನೀಯಗಳೂ ಕೂಡ ಆಸಿಡಿಟಿ ರಿಫ್ಲೆಕ್ಸ್ ಗೆ ಕಾರಣವಾಗುತ್ತದೆ. ಹೀಗಾಗಿ ಆಲ್ಕೋಹಾಲ್ ಅಥವಾ ಕಾಫಿ ಸೇವನೆಯ ವೇಳೆ ಎಚ್ಚರವಹಿಸಿ. ಹಸಿದ ಹೊಟ್ಟೆಯಲ್ಲಿ ಎಂದಿಗೂ ಕಾಫಿಯನ್ನು ಸೇವಿಸಬೇಡಿ ಇದು ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟು ಮಾಡಬಹುದು.
ಧೂಮಪಾನದಿಂದ ದೂರವಿರಿ
ಕ್ಯಾನ್ಸರ್ಗೆ ಕಾರಣವಾಗುವ ಸಿಗರೇಟ್ನಂತಹ ಧೂಮಪಾನ ಆಸಿಡಿಟಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಅಲ್ಲದೆ ನಿಮ್ಮ ಅನ್ನನಾಳದಲ್ಲಿ ನಿಕೋಟಿನ್ ಅಂಶಗಳು ಸೇರಿ ಆಸಿಡಿಟಿ ರಿಫ್ಲೆಕ್ಸ್ ಗೆ ಕಾರಣವಾಗುತ್ತದೆ.