ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಿದ ಯದುವೀರ್; ಅವರ ಆಸ್ತಿ ಎಷ್ಟಿದೆ ಗೊತ್ತಾ..?
ಮೈಸೂರು; ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ.. ಯಾಕಂದ್ರೆ ಈ ಬಾರಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಅವರು ಅಖಾಡಕ್ಕಿಳಿದಿದ್ದಾರೆ.. ಹೀಗಾಗಿ ಅವರ ಬಗ್ಗೆ ಕುತೂಹಲ ಇದ್ದೇ ಇದೆ.. ಇನ್ನು ಯದುವೀರ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದರು.. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ಎಷ್ಟು..? ಅವರ ಬಳಿ ಎಷ್ಟು ಹಣ ಇದೆ..? ಎಷ್ಟು ಚಿನ್ನ ಎಂಬುದರ ಬಗ್ಗೆ ಕುತೂಹಲ ಇದ್ದೇ ಇದೆ..
ಇದನ್ನೂ ಓದಿ; ನಾಳೆ ಬೆಂಗಳೂರಿನಲ್ಲಿ ಅಮಿತ್ ಶಾ ಸಮಾವೇಶ; ಚೆನ್ನಪಟ್ಟಣದಲ್ಲಿ ರೋಡ್ ಶೋ..
ಬಿಜೆಪಿ ಅಭ್ಯರ್ಥಿ ಯದುವೀರ್ ಆಸ್ತಿ ಎಷ್ಟಿದೆ..?
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಚರಾಸ್ತಿಯ ಮೌಲ್ಯ 4 ಕೋಟಿ 99 ಲಕ್ಷ 59 ಸಾವಿರದ 303 ರೂಪಾಯಿ ಎಂದು ಘೋಷಣೆ ಮಾಡಿಕೊಳ್ಳಲಾಗಿದೆ.. ಯದುವೀರ್ ಅವರ ಬಳಿ ಈಗ ಒಂದು ಲಕ್ಷ ರೂಪಾಯಿ ನಗದು ಮಾತ್ರ ಇದೆಯಂತೆ. ಇನ್ನು ಅವರಿಗೆ 2 ಬ್ಯಾಂಕ್ ಖಾತೆಗಳಿವೆ… ಇವುಗಳಲ್ಲಿ 23.55 ಲಕ್ಷ ರೂಪಾಯಿ ಹಣ ಇದೆ ಎಂದು ಘೋಷಣೆ ಮಾಡಿಕೊಳ್ಳಲಾಗಿದೆ.. ವಿವಿಧ ಕಂಪನಿಗಳಲ್ಲಿ ಒಂದು ಕೋಟಿ ಮೌಲ್ಯದ ಬಾಂಡ್ ಮತ್ತು ಶೇರ್ ಗಳನ್ನು ಯದುವೀರ್ ಅವರು ಹೊಂದಿದ್ದಾರೆ. 4 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ವಸ್ತುಗಳು ನನ್ನ ಬಳಿ ಇವೆ ಎಂದು ಯದುವೀರ್ ಅವರು ನಾಮಪತ್ರದ ಅಫಿಡೆವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಕಾಂಗ್ರೆಸ್; ಸುಪ್ರೀಂನಿಂದ ಬಿಗ್ ರಿಲೀಫ್!
ಕೃಷಿ ಭೂಮಿ, ಸ್ವಂತ ಮನೆ ಕೂಡಾ ಇಲ್ಲವಂತೆ;
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜವಂಶಸ್ಥರು.. ಆದ್ರೆ ಇವರಿಗೆ ಒಂದು ಎಕರೆ ಕೂಡಾ ಕೃಷಿ ಭೂಮಿ ಇಲ್ಲವಂತೆ.. ಯಾವುದೇ ಕೃಷಿ ಭೂಮಿ, ಸ್ವಂತ ಮನೆ ಕೂಡಾ ಇಲ್ಲ ಎಂದು ಯದುವೀರ್ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.. ಜೊತೆಗೆ ನನ್ನ ಬಳಿ ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ, ಯಾವ ಬ್ಯಾಂಕ್‌ನಿಂದಲೂ ಸಾಲವನ್ನೂ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.. ಹಾಗೇ ಯಾವುದೇ ರೀತಿಯ ಆದಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ, ನನ್ನ ವಿರುದ್ಧ ಯಾವ ಪ್ರಕರಣವೂ ಇಲ್ಲ ಎಂದು ಯದುವೀರ್ ಹೇಳಿಕೊಂಡಿದ್ದಾರೆ.