ರಾಮನವಮಿ – ಇದು ರಾಮ ಮನುಷ್ಯನ ರೂಪದಲ್ಲಿ ಭೂಮಿಗೆ ಬಂದ ದಿನ!
ಚೈತ್ರ ನವರಾತ್ರಿ ಕೊನೆಯ ದಿನ.. ವಿಷ್ಣು ರಾಮನ ಅವತಾರ ತಾಳಿದ ದಿನ.. ವಾಲ್ಮೀಕಿ ರಾಮಾಯಣದ ಪ್ರಕಾರ, ಅಂದು ಕರ್ಕಾಟಕ ಲಗ್ನದಲ್ಲಿ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮನ ಜನನವಾಯಿತು ಎಂದು ಹೇಳಲಾಗಿದೆ.. ಹೀಗಾಗಿಯೇ ಭಾರತೀಯರು ಈ ದಿನವನ್ನು ಪವಿತ್ರ ದಿನವೆಂದು ಪರಿಗಣಿಸಿದ್ದಾರೆ.. ದೇಶಾದ್ಯಂತ ರಾಮನವಮಿಯನ್ನು ವಿಶೇಷವಾಗಿ, ಭಕ್ತಯಿಂದ ಆಚರಿಸುತ್ತಾರೆ.. ಎಲ್ಲೆಡೆ ಪಾನಕ, ಕೋಸುಂಬರಿ ವಿತರಣೆ ಮಾಡಲಾಗುತ್ತದೆ.. ಈ ಬಾರಿ ನಾಳೆ (ಏಪ್ರಿಲ್ 17)ರಂದು ರಾಮನವಮಿ ಆಚರಿಸಲಾಗುತ್ತಿದ್ದು, ಇದರ ಪ್ರಯುಕ್ತವಾಗಿ ರಾಮನವಮಿಯ ಇತಿಹಾಸ ತಿಳಿಸುವ ಪ್ರಯತ್ನ ಮಾಡಿದ್ದೇವೆ..
ಇದನ್ನೂ ಓದಿ; ರಾಜ್ಯದಲ್ಲಿ ಬಿಜೆಪಿ ಎಂಟೇ ಸ್ಥಾನ ಗೆಲ್ಲೋದಾ..?; Poll Tracker ಸಮೀಕ್ಷೆ ಹೇಳೋದೇನು..?
ರಾಮನವಮಿಯ ಇತಿಹಾಸ ಏನು..?;
ದಶರಥ ರಾಜನಿಗೆ ಮೂವರು ಹೆಂಡತಿಯರಿದ್ದು, ಆದರೂ ಅವರಿಗೆ ಮಕ್ಕಳಾಗರಲಿಲ್ಲ.. ಹೀಗಾಗಿ, ಅವರು ಋಷಿ ವಸಿಷ್ಠರ ಸಲಹೆ ಪಡೆದು, ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗ ಮಾಡುತ್ತಾರೆ.. ಅದರ ಜೊತೆಗೆ ಋಷಿಗಳು ಆಶೀರ್ವದಿಸಿದ ಪಾಯಸವನ್ನು ಹೆಂಡತಿಯರಿಗೆ ನೀಡುತ್ತಾನೆ.. ಇದರಿಂದಾಗಿ ದಶರಥನ ಹೆಂಡತಿಯರು ನಾಲ್ವರು ಗಂಡು ಮಕ್ಕಳ ತಾಯಿಯರಾಗುತ್ತಾರೆ.. ಅದರಲ್ಲಿ ಮೊದಲನೇಯವನೇ ರಾಮ. ಕೌಸಲ್ಯ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನಿಗೆ ಜನ್ಮ ನೀಡುತ್ತಾಳೆ.. ಸುಮಿತ್ರಾ ಅವರು ಶತ್ರುಘ್ನ ಮತ್ತು ಲಕ್ಷ್ಮಣನಿಗೆ ಜನ್ಮ ನೀಡಿದರೆ, ಕೈಕೇಯಿ ಭರತನಿಗೆ ಜನ್ಮ ನೀಡುತ್ತಾಳೆ.
ಇದನ್ನೂ ಓದಿ; ನೀರಿಗಾಗಿ ಹಾಹಾಕಾರ; ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡಿ ಎಂದ ಮೇಯರ್!
ರಾಮ ನವಮಿ ಹಬ್ಬದ ಮಹತ್ವವೇನು..?;
ರಾಮನವಮಿ ಎಂದರೆ ಚೈತ್ರ ಮಾಸದ 9ನೇ ದಿನ.. ಅಂದು ರಾಮ ಮನುಷ್ಯನ ರೂಪದಲ್ಲಿ ಭೂಮಿಗೆ ಬಂದನು.. ಇದು ವಿಷ್ಣುವಿನ ಏಳನೇ ಅವತಾರ.. ಭಗವಾನ್ ರಾಮನು ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಸಲ್ಯೆಯ ಮಗನಾಗಿದ್ದು, ರಾಮನನ್ನು ಭಾರತೀಯ ಆದರ್ಶ ವ್ಯಕ್ತಿಯಾಗಿ ನೋಡುತ್ತಾರೆ.. ಪಂಚಾಂಗದ ಪ್ರಕಾರ, ಏಪ್ರಿಲ್ 17ರಂದು ರಾಮನವಮಿಯ ದಿನ ಬೆಳಿಗ್ಗೆ 11:40 ರಿಂದ ಮಧ್ಯಾಹ್ನ 1:40 ರ ನಡುವೆ ಅಭಿಜಿತ್ ಮುಹೂರ್ತವಿದೆ. ಈ ಸಮಯದಲ್ಲಿ ರಾಮನ ಆರಾಧನೆ ಮಾಡುವುದು ಒಳ್ಳೆಯದು.
ಇದನ್ನೂ ಓದಿ; ಸೇತುವೆ ಮೇಲಿಂದ ಬಸ್ ಪಲ್ಟಿ; ಐದು ಮಂದಿ ದುರ್ಮರಣ!