International

ನೀರಿಗಾಗಿ ಹಾಹಾಕಾರ; ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡಿ ಎಂದ ಮೇಯರ್‌!

ಬೊಗೋಟಾ; ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿರೋದು ಎಲ್ಲರಿಗೂ ಗೊತ್ತಿರುವ ವಿಚಾರ.. ಆದ್ರೆ ನಮ್ಮ ಬೆಂಗಳೂರೇ ಅಲ್ಲ, ಪ್ರಪಂಚದ ಹಲವಾರು ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ.. ಅದು ಎಷ್ಟರ ಮಟ್ಟಿಗೆ ಅಂದ್ರೆ ಸರಿಯಾಗಿ ಸ್ನಾನ ಮಾಡೋದಕ್ಕೂ ನೀರು ಸಿಗುತ್ತಿಲ್ಲ.. ಇದರಿಂದ ಸ್ಥಳೀಯ ಸಂಸ್ಥೆಗಳು ಸಾಕಷ್ಟು ತಲೆಕೆಡಿಸಿಕೊಂಡಿವೆ.. ಅದ್ರಲ್ಲೂ ಕೂಡಾ ದಕ್ಷಿಣ ಅಮೆರಿಕದ ಬೋಗೋಟಾ ನಗರದಲ್ಲಂತೂ ನೀರಿನ ಸಮಸ್ಯೆ ಹೇಳತೀರದು.. ಇಲ್ಲಿ ನೀರು ಪೋಲಾಗದಂತೆ ಉಳಿಸುವುದಕ್ಕಾಗಿ ನಾನಾ ಪಡಿಪಾಟಲು  ಪಡಲಾಗುತ್ತಿದೆ..

ಇದನ್ನೂ ಓದಿ; ಸೇತುವೆ ಮೇಲಿಂದ ಬಸ್‌ ಪಲ್ಟಿ; ಐದು ಮಂದಿ ದುರ್ಮರಣ!

ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡಿ;

ಬೊಗೋಟಾ ನಗರದಲ್ಲಿ ನೀರಿನ ಸಮಸ್ಯೆ ತುಂಬಾನೇ ಇದೆ.. ಈ ನಗರಕ್ಕೆ ಜಲಮೂಲವಾಗಿದ್ದ ಜಲಾಶಯಗಳು ಬತ್ತಿಹೋಗುತ್ತಿವೆ.. ಈ ಹಿನ್ನೆಲೆಯಲ್ಲಿ ಇಲ್ಲಿನ ಪಾಲಿಕೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ.. ಬೇರೆ ಬೇರೆ ಕಡೆಯಿಂದ ನೀರು ತರಿಸಿ ಪೂರೈಕೆ ಮಾಡಲಾಗುತ್ತಿದೆ.. ಇದರ ಜೊತೆಗೆ ನೀರು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.. ಈ ಬಗ್ಗೆ ಮಾತನಾಡಿರುವ ಬೊಗೋಟಾ ಮೇಯರ್‌ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ , ಗಂಡ-ಹೆಂಡತಿ ಒಟ್ಟಿಗೆ ಸ್ನಾನ ಮಾಡಿದರೆ ನೀರು ಮಿತವ್ಯಯ ಮಾಡಬಹುದು.. ಮನೆಯಲ್ಲಿ ಒಬ್ಬೊಬ್ಬರೇ ಸ್ನಾನ ಮಾಡುವ ಬದಲು ಸಂಗಾತಿಗಳು ಒಟ್ಟಿಗೆ ಸ್ನಾನ ಮಾಡಿ ಎಂದು ಸೂಚನೆ ಕೊಟ್ಟಿದ್ದಾರೆ.. ಇದರ ಜೊತೆಗೆ ವಾರದ ರಜೆ ದಿನಗಳಲ್ಲಿ ಹೊರಗೆ ಹೋಗದೇ ಇದ್ದು, ಮನೆಯಲ್ಲೇ ಇರುವುದಾದರೆ ಆ ದಿನ ಸ್ನಾನ ಮಾಡುವುದನ್ನು ತಪ್ಪಿಸಿ ಎಂದೂ ಅವರು ಸಲಹೆ ಕೊಟ್ಟಿದ್ದಾರೆ..

ಇದನ್ನೂ ಓದಿ; ಪ್ಯಾರಾಸಿಟಮೋಲ್‌ ಹೆಚ್ಚು ತೆಗೆದುಕೊಂಡರೆ ಹೃದಯಾಘಾತ ಆಗುತ್ತಂತೆ!

ಈ ಹಿಂದೆ ಉಂಟಾಗಿತ್ತು ಜಲಕ್ಷಾಮ;

ಬೊಗೋಟಾ ನಗರದಲ್ಲಿ ಈ ಹಿಂದೆ ಕೂಡಾ ಇಂತಹದ್ದೇ ಜಲಕ್ಷಾಮ ಉಂಟಾಗಿತ್ತು.. 1980ರಲ್ಲಿ ಬೊಗೋಟಾ ಜನರು ಕುಡಿಯೋದಕ್ಕೂ ನೀರು ಸಿಗದೇ ಸಾಕಷ್ಟು ತೊಂದರೆ ಅನುಭವಿಸಿದ್ದರು.. ಈ ಬಾರಿ ಕೂಡಾ ಅಂತಹದ್ದೇ ಸಮಸ್ಯೆ ಎದುರಾಗಿದೆ.. ನಗರಕ್ಕೆ ನೀರು ಪೂರೈಕೆಯಾಗುವ ಜಲಾಶಯದಲ್ಲಿ ಶೇ.17ರಷ್ಟು ನೀರು ಕಡಿಮೆಯಾಗಿದೆ.. ಈ ಹಿನ್ನೆಲೆಯಲ್ಲಿ ನೀರು ಮತವಾಗಿ ಬಳಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.. ಇದರ ಜೊತೆಗೆ ಇಲ್ಲಿನ ಮೇಯರ್‌ ಜನರಿಗೆ ವಿಚಿತ್ರ ಸಲಹೆಗಳನ್ನು ಕೂಡಾ ನೀಡಿದ್ದಾರೆ. ಸಂಗಾತಿಗಳು ಒಟ್ಟಿಗೆ ಸ್ನಾನ ಮಾಡಬೇಕೆಂಬ ಅವರ ಸಲಹೆ ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ..

ಇದನ್ನೂ ಓದಿ; ಕೃಷಿ ಹೊಂಡಕ್ಕೆ ಬಿದ್ದ ಬಾಲಕ; ಮೇಲೆ ಬರಲಾರದೇ ಸಾವು!

 

Share Post