CrimeNational

ಸೇತುವೆ ಮೇಲಿಂದ ಬಸ್‌ ಪಲ್ಟಿ; ಐದು ಮಂದಿ ದುರ್ಮರಣ!

ಜಾಜ್‌ಪುರ; ಸೇತುವೆ ಮೇಲಿಂದ ಬಸ್ಸೊಂದು ಉರುಳಿಬಿದ್ದು ದುರಂತ ನಡೆದಿದ್ದು, ದುರಂತದಲ್ಲಿ 5 ಮಂದಿ ದಾರುಣ ಸಾವನ್ನಪ್ಪಿದ್ದಾರೆ.. ಘಟನೆಯಲ್ಲಿ 38ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಒಡಿಶಾ ಜಾಜ್‌ಪುರ ಜಿಲ್ಲೆಯ ಎನ್‌ಹೆಚ್‌ 16 ಹೈವೇ ನಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ; ಪ್ಯಾರಾಸಿಟಮೋಲ್‌ ಹೆಚ್ಚು ತೆಗೆದುಕೊಂಡರೆ ಹೃದಯಾಘಾತ ಆಗುತ್ತಂತೆ!

ಹಾಲ್ದಿಯಾಗೆ ತೆರಳುತ್ತಿದ್ದ ಬಸ್‌ ಪಲ್ಟಿ;

ಬಸ್‌ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ್‌ ಜಿಲ್ಲೆಯ ಹಾಲ್ದಿಯಾಗೆ ತೆರಳುತ್ತಿತ್ತು.. ಬಸ್‌ ಈ ಬಾರಾಮತಿ ಚೌಕ್‌ ಬಳಿ ಇರುವ ಸೇತುವೆ ಮೇಲೆ ಬಂದಾಗ ಚಾಲಕನ ನಿಯಂತ್ರಣ ತಪ್ಪಿದೆ.. ನೋಡನೋಡುತ್ತಿದ್ದಂತೆ ಬಸ್‌ ಮೇಲ್ವೇತುವೆ ಮೇಲಿಂದ ಕೆಳಕ್ಕೆ ಉರುಳಿಬಿದ್ದಿದೆ.. ಬಸ್​​ನಲ್ಲಿ ಮಹಿಳೆಯರು, ಮಕ್ಕಳು ಸೇರಿ ಸುಮಾರು 55 ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಮನೆಯ ಮುಂದೆಯೇ ಕಾಡಾನೆಗಳ ಕಾಳಗ; ನೋಡಲು ರೋಚಕ, ಆದ್ರೆ ಪ್ರಾಣಸಂಕಟ!

ಮದ್ಯಪಾನ ಮಾಡಿ ಬಸ್‌ ಚಾಲನೆ ಮಾಡಿದ್ದೇ ಕಾರಣ;

ಘಟನೆಯಲ್ಲಿ ಬಸ್‌ ಚಾಲಕ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾನೆ.. ದುರ್ಘಟನೆಗೆ ಬಸ್‌ ಚಾಲಕನೇ ಕಾರಣ ಎಂದು ಹೇಳಲಾಗುತ್ತಿದೆ.. ಚಾಲಕ ಮದ್ಯಪಾನ ಮಾಡಿ ಬಸ್‌ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಆತನಿಗೆ ಬಸ್‌ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಬಸ್‌ ಸೇತುವೆ ಮೇಲಿಂದ ಉರುಳಿಬಿದ್ದಿದೆ ಎಂದು ಆರೋಪಿಸಲಾಗಿದೆ.. ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ; ರಾಹುಲ್‌ ಗಾಂಧಿ ಹೆಲಿಕಾಪ್ಟರ್‌ ತಪಾಸಣೆ; ಏನು ಸಿಕ್ತು..?

 

Share Post