ಅತ್ತೆಯನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ ಸೊಸೆಯರು; ಚಪ್ಪಾಳೆ ಹೊಡೆದ ಮಗ!
ಗ್ವಾಲಿಯರ್; ಅತ್ತೆ-ಸೊಸೆಯರ ಜಗಳ ಮಾಮೂಲಿ.. ಕೆಲವು ಗಯ್ಯಾಲಿ ಅತ್ತೆಯಂದಿರನ್ನೂ ನೋಡಿದ್ದೇವೆ.. ಆದ್ರೆ ಇಲ್ಲಿ ಇಬ್ಬರು ಸೊಸೆಯರು ಸೇರಿಕೊಂಡು ಅತ್ತೆಯನ್ನು ಬೀದಿಯಲ್ಲೇ ಕಲ್ಲು, ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ.. ಇದನ್ನು ನೋಡಿ ಸ್ವಂತ ಮಗನೇ ಚಪ್ಪಾಳೆ ತಟ್ಟಿದ್ದಾನಂತೆ.. ಇದೆಂಥಾ ವಿಕೃತಿ ನೋಡಿ.. ಈ ಕೃತ್ಯ ನಡೆದಿರೋದು ಮಧ್ಯಪ್ರದೇಶದ ಗ್ರಾಮವೊಂದರಲ್ಲಿ..
ಇದನ್ನೂ ಓದಿ; ರಾಮನವಮಿ – ಇದು ರಾಮ ಮನುಷ್ಯನ ರೂಪದಲ್ಲಿ ಭೂಮಿಗೆ ಬಂದ ದಿನ!
ಅತ್ತೆಯನ್ನು ಅಟ್ಟಾಡಿಸಿ ಕೊಂದ ಸೊಸೆಯರು..!;
ಮುನ್ನಿದೇವಿ ಎಂಬ ವೃದ್ಧೆಯೇ ಸೊಸೆಯರಿಂದ ಕೊಲೆಗೀಡಾದಾಕೆ.. ಈಕೆಗೆ ಇಬ್ಬರು ಸೊಸೆಯಂದಿರಿದ್ದು, ಈ ಹಿಂದೆ ಮೊದಲನೇ ಸೊಸೆ ಸಾವಿತ್ರಿ ಅತ್ತೆ ಮುನ್ನಿಬಾಯಿ ಮೇಲೆ ದಾಳಿ ಮಾಡಿದ್ದಳು. ಈ ವೇಳೆ ತಲೆಗೆ ಪೆಟ್ಟು ಬಿದ್ದು ಆರು ಹೊಲಿಗೆ ಕೂಡಾ ಹಾಕಲಾಗಿತ್ತು.. ಇದಾದ ಮೇಲೆ ಎರಡನೇ ಮಗ ಚಂದಾಕುಮಾರಿ ಎಂಬಾಕೆಯನ್ನು ಮದುವೆ ಮಾಡಿಕೊಂಡಿಕೊಂಡು ಬಂದಿದ್ದ. ಎರಡನೇ ಸೊಸೆ ಬಂದ ಮೇಲೆ ಮುನ್ನಿದೇವಿಗೆ ಕಿರುಕುಳ ಮತ್ತಷ್ಟು ಹೆಚ್ಚಾಯ್ತು.. ಇಬ್ಬರೂ ಸೊಸೆಯರು ಸೇರಿಕೊಂಡು ಅತ್ತೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು..
ಇದನ್ನೂ ಓದಿ; ರಾಜ್ಯದಲ್ಲಿ ಬಿಜೆಪಿ ಎಂಟೇ ಸ್ಥಾನ ಗೆಲ್ಲೋದಾ..?; Poll Tracker ಸಮೀಕ್ಷೆ ಹೇಳೋದೇನು..?
ಎಲ್ಲರನ್ನೂ ಬಂಧಿಸಿದ ಪೊಲೀಸರು!;
ಬೀಗರು ಮನೆಗೆ ಬಂದ್ದ ಸಮಯದಲ್ಲೇ ಅತ್ತೆ ಸೊಸೆಯರ ಜಗಳ ನಡೆದಿದೆ.. ಇದೇ ವೇಳೆ ಇಬ್ಬರೂ ಸೊಸೆಯರು ಸೇರಿ ಅತ್ತೆಯನ್ನು ಹೊಡೆದು ಕೊಂದುಬಿಟ್ಟಿದ್ದಾರೆ.. ಇದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಸ್ಥಳಕ್ಕೆ ಬಂದ ಪೊಲೀಸರು, ಇಬ್ಬರು ಸೊಸೆಯಂದಿರು, ಒಬ್ಬ ಮಗ , ಇಬ್ಬರು ಸಹೋದರರು ಹಾಗೇ ಬೀಗರನ್ನು ಕೂಡ ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ; ನೀರಿಗಾಗಿ ಹಾಹಾಕಾರ; ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡಿ ಎಂದ ಮೇಯರ್!