ಸಮುದ್ರದಿಂದ ಹೊರಬಂದು ಪಕ್ಷಿಗಳಿಗೆ ʻಹಾಯ್ʼ ಹೇಳಿದ ತಿಮಿಂಗಿಲ
ಸಮುದ್ರದಲ್ಲಿ ಸಣ್ಣ ಪುಟ್ಟ ಸುಂದರವಾದ ಮೀನುಗಳಿಂದ ಹಿಡಿದು ಅತ್ಯಂತ ಬೃಹತ್ ತಿಮಿಂಗಿಲಗಳು ಸಹ ಬದುಕುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಣ್ಣ ಮೀನು ದೊಡ್ಡ ಮೀನನ್ನು ತಿಂದು ಬದುಕಿದರೆ, ಶಾರ್ಕ್ ದೊಡ್ಡ ಮೀನನ್ನು ಬೇಟೆಯಾಡುತ್ತದೆ. ತಿಮಿಂಗಿಲಗಳು ಭಯಾನಕ ಶಾರ್ಕ್ಗಳನ್ನು ಬೇಟೆಯಾಡುತ್ತವೆ. ಅಂತಹ ಬೃಹತ್ ತಿಮಿಂಗಿಲ ಪಕ್ಷಿಗಳೊಂದಿಗೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುದ್ದಾದ ಮತ್ತು ವಿಚಿತ್ರವಾಗಿ ದೊಡ್ಡದಾಗಿ ಕಾಣುವ ಸಮುದ್ರ ಜೀವಿಗಳು ಎಷ್ಟು ಅಪಾಯಕಾರಿ ಎಂಬುದನ್ನು ನೋಡುವುದು ಸಹ ಆಸಕ್ತಿದಾಯಕವಾಗಿದೆ. ತಿಮಿಂಗಿಲಗಳು ಮತ್ತು ಕಡಲ ಪಕ್ಷಿಗಳ ದೊಡ್ಡ ಗುಂಪು ಸಮುದ್ರದ ನೀರಿನ ಮೇಲೆ ಹಾರಾಟ ನಡೆಸುತ್ತಿತ್ತು. ಪಕ್ಷಿಗಳ ಹಿಂಡು ಸಮುದ್ರದ ನೀರಿನಲ್ಲಿ ಸುತ್ತುತ್ತಾ ಕಾಲ ಕಳೆಯುತ್ತಿದ್ದವು. ಅನಿರೀಕ್ಷಿತವಾಗಿ ಬಂದ ದೊಡ್ಡ ತಿಮಿಂಗಿಲವನ್ನು ಕಂಡು ನೋಡುಗರು ಹೌಹಾರಿದ್ರು.
ತಿಮಿಂಗಿಲ ಬಂದ ವೇಗಕ್ಕೆ ಪಕ್ಷಿಗಳನ್ನು ತಿನ್ನುತ್ತದೆ ಅಂದುಕೊಂಡಿದ್ರು. ಆದರೆ ತಿಮಿಂಗಿಲ ಪಕ್ಷಿ ಹಿಂಡಿನೊಂದಿಗೆ ಕಾಲ ಕಳೆಯಿತು. ತಿಮಿಂಗಿಲವು ಯಾವುದೇ ಪಕ್ಷಿಯನ್ನು ತಿನ್ನುವುದರಿಲಿ ಕನಿಷ್ಠ ಪ್ರಯತ್ನ ಕೂಡ ಪಡಲಿಲ್ಲ. ಹೀಗಾಗಿ ದೊಡ್ಡ ತಿಮಿಂಗಿಲವನ್ನು ಕಂಡು ಪಕ್ಷಿಗಳು ಕೂಡ ಅದರ ಸುತ್ತಮುತ್ತ ಹಾರಾಟ ನಡೆಸಿದ್ವು. ಕೆಳಗೆ ಹೋಗಿ ಮೇಲೆ ಬಂದು ತಿಮಿಂಗಿಲವನ್ನು ಸುತ್ತುವರೆದು ಶಬ್ದ ಮಾಡುತ್ತಾ ಆ ಅದ್ಭುತ ದೃಶ್ಯ ನೋಡುವುದೇ ಸುಂದರ.