Politics

ರಾಜ್ಯದಲ್ಲಿ ಬಿಜೆಪಿ ಎಂಟೇ ಸ್ಥಾನ ಗೆಲ್ಲೋದಾ..?; Poll Tracker ಸಮೀಕ್ಷೆ ಹೇಳೋದೇನು..?

ಬೆಂಗಳೂರು; ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟ 28 ಕ್ಕೆ 28 ಸೀಟೂ ಗೆಲ್ಲಬೇಕೆಂಬ ಪಣ ತೊಟ್ಟಿದೆ.. ಇತ್ತ ಕಾಂಗ್ರೆಸ್‌ ನಾವು ಕನಿಷ್ಟ 20 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದೆ.. ಆದ್ರೆ ಚುನಾವಣಾ ಪೂರ್ವ ಸಮೀಕ್ಷೆಗಳು ಮಾತ್ರ ದಿನಕ್ಕೊಂದು ಭವಿಷ್ಯ ಹೇಳುತ್ತಿವೆ.. ಒಂದು ಸಮೀಕ್ಷೆ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತೆ ಅಂತ ಹೇಳಿದ್ರೆ, ಇನ್ನೊಂದು ಸಮೀಕ್ಷೆ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದು ಹೇಳುತ್ತಿವೆ..

ಇದನ್ನೂ ಓದಿ; ನೀರಿಗಾಗಿ ಹಾಹಾಕಾರ; ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡಿ ಎಂದ ಮೇಯರ್‌!

ಹಿಂದೆಂದೂ ಇಲ್ಲದ ರೀತಿ ಸಮೀಕ್ಷೆ;

ಯಾವುದೇ ಸಮೀಕ್ಷೆ ಆದರೂ ಒಂದೆರಡು ಸೀಟು ವ್ಯತ್ಯಾಸ ಇರುತ್ತದೆ.. ಫಲಿತಾಂಶವೇ ಉಲ್ಟಾ ಆಗುವ ರೀತಿಯಲ್ಲಿ ಯಾರೂ ಸಮೀಕ್ಷೆ ಮಾಡೋದಿಲ್ಲ.. ಆದ್ರೆ ಕರ್ನಾಟಕದಲ್ಲಿ ಈ ಬಾರಿ ಅಂತಹ ಸಮೀಕ್ಷಾ ವರದಿಗಳು ಹೊರಬರುತ್ತಿವೆ.. ಕೆಲ ಸಮೀಕ್ಷೆಗಳು ಬಿಜೆಪಿ ಹಾಗೂ ಜೆಡಿಎಸ್‌ 20-24 ಸ್ಥಾನಗಳವರೆಗೆ ಗೆಲ್ಲುತ್ತೆ ಎಂದು ಹೇಳುತ್ತಿವೆ.. ಆದ್ರೆ ಕೆಲವು ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಅತಿಹೆಚ್ಚು ಸ್ಥಾನ ಗಳಿಸುತ್ತೆ ಎಂದು ಹೇಳುತ್ತಿವೆ.. ಹೀಗಾಗಿ, ಜನಕ್ಕೆ ಹಾಗೂ ರಾಜಕೀಯ ಪಕ್ಷಗಳಿಗೆ ಇದು ಸಾಕಷ್ಟು ಕನ್ಪ್ಯೂಸ್‌ ಮಾಡುತ್ತಿದೆ..

ಇದನ್ನೂ ಓದಿ; ಸೇತುವೆ ಮೇಲಿಂದ ಬಸ್‌ ಪಲ್ಟಿ; ಐದು ಮಂದಿ ದುರ್ಮರಣ!

ಕಾಂಗ್ರೆಸ್‌ 18 ಸ್ಥಾನ ಗೆಲ್ಲುತ್ತೆ ಎಂದ ಪೋಲ್‌ ಟ್ರ್ಯಾಕರ್‌;

ಈಗಾಗಲೇ ಮೊನ್ನೆಯಷ್ಟೇ ಸಿ-ವೋಟರ್‌ ಸಮೀಕ್ಷೆ ವರದಿ ರಿಲೀಸ್‌ ಆಗಿತ್ತು.. ಇದರಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟ ಅತಿಹೆಚ್ಚು ಸ್ಥಾನಗಳು ಗಳಿಸಲಿವೆ ಎಂದು ಹೇಳಿತ್ತು.. ಆದ್ರೆ ಇದೀಗ ಪೋಲ್‌ ಟ್ರ್ಯಾಕರ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಹೊರಬಿದ್ದಿದೆ.. ಅದರ ಪ್ರಕಾರ ಕಾಂಗ್ರೆಸ್‌ ಪಕ್ಷ 18 ಸ್ಥಾನಗಳಲ್ಲಿ ಗೆಲ್ಲಲಿದೆಯಂತೆ, ಬಿಜೆಪಿ 8, ಜೆಡಿಎಸ್‌ 1 ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬ ಗೆಲ್ಲಲಿದ್ದಾರೆ ಎಂದು ಈ ಸಮೀಕ್ಷೆ ಹೇಳಿದೆ.. ಇವರ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ 51 ಪರ್ಸೆಂಟ್‌ ಮತಗಳನ್ನು ಪಡೆದರೆ, ಬಿಜೆಪಿ 31 ಪರ್ಸೆಂಟ್‌, ಜೆಡಿಎಸ್‌ 11 ಪರ್ಸೆಂಟ್‌ ಹಾಗೂ ಇತರರು 7 ಪರ್ಸೆಂಟ್‌ ವೋಟ್‌ ಪಡೆಯಲಿದ್ದಾರೆ.

ಇದನ್ನೂ ಓದಿ; ಪ್ಯಾರಾಸಿಟಮೋಲ್‌ ಹೆಚ್ಚು ತೆಗೆದುಕೊಂಡರೆ ಹೃದಯಾಘಾತ ಆಗುತ್ತಂತೆ!

ಪೋಲ್‌ ಟ್ರ್ಯಾಕರ್‌ ಸಮೀಕ್ಷೆ ವರದಿ;

=======================
ಕಾಂಗ್ರೆಸ್ – 18
ಬಿಜೆಪಿ – 8
ಜೆಡಿಎಸ್ – 01
ಇತರೆ – 01

 

ಇದನ್ನೂ ಓದಿ; ಕೃಷಿ ಹೊಂಡಕ್ಕೆ ಬಿದ್ದ ಬಾಲಕ; ಮೇಲೆ ಬರಲಾರದೇ ಸಾವು!

Share Post