Lifestyle

ಹಿಟ್ಟಿಗೆ ಹುಳ ಹಿಡಿಯುತ್ತಿದೆಯೇ..?; ಹಾಗಾದ್ರೆ ಈ ಟ್ರಿಕ್ಸ್‌ ಯೂಸ್‌ ಮಾಡಿ!

ಅಡುಗೆ ಮನೆಯಲ್ಲಿ ಹುಳಗಳದ್ದೇ ಕಾರುಬಾರು.. ಅಕ್ಕಿ, ಹಿಟ್ಟುಗಳಿಗೆ ಬಹುಬೇಗ ಹುಳ ಬಂದುಬಿಡುತ್ತೆ.. ಇವುಗಳನ್ನು ಹುಳಗಳಿಂದ ಕಾಪಾಡುವುದೇ ದೊಡ್ಡ ತಲೆನೋವು.. ಗೃಹಿಣಿಯರು ಹಿಟ್ಟುಗಳಲ್ಲಿ ಬರುವ ಹುಳಗಳನ್ನು ತೆಗೆಯಲಾಗದೇ ಸಂಕಷ್ಟಪಡುತ್ತಿದ್ದಾರೆ.. ಕೆಲವರಂತೂ ಹಿಟ್ಟಿನಲ್ಲಿ ಹುಳ ಕಾಣಿಸಿಕೊಂಡ ತಕ್ಷಣ ಇಡೀ ಹಿಟ್ಟನ್ನೇ ಚೆಲ್ಲುತ್ತಿರುತ್ತಾರೆ.. ಇತ್ತೀಚಿನ ದಿನಗಳಲ್ಲಿ ಮಾಲ್‌ ಸಂಸ್ಕೃತಿ ಹೆಚ್ಚಾಗುತ್ತಿದೆ.. ಹೀಗಾಗಿ ತಿಂಗಳಿಗೆ ಬೇಕಾದ ಹಿಟ್ಟು ಸೇರಿ ಎಲ್ಲಾ ವಸ್ತುಗಳನ್ನು ಮನೆಗೆ ತಂದುಬಿಡುತ್ತಾರೆ.. ಹಿಟ್ಟಿನ ಪಾಕೆಟ್‌ಗಳನ್ನು ಓಪನ್‌ ಮಾಡಿದ ಕೆಲ ದಿನಕ್ಕೆಲ್ಲಾ ಅದರಲ್ಲಿ ಹುಳ ಬಿದ್ದಿರುತ್ತೆ.. ಹಿಟ್ಟಿನಲ್ಲಿ ಹುಳ ಇದ್ದರೆ ಅದನ್ನು ತೆಗೆಯೋದೇ ದೊಡ್ಡ ತಲೆನೋವು.. ಹೀಗಾಗಿ ಹಿಟ್ಟಿಗೆ ಹುಳ ಬೀಳುವುದನ್ನು ತಪ್ಪಿಸಲು ಇಲ್ಲಿ ಒಂದಷ್ಟು ಸಿಂಪಲ್‌ ಟ್ರಿಕ್ಸ್‌ ಹೇಳಿಕೊಟ್ಟಿದ್ದೇವೆ.. ಇವುಗಳನ್ನು ಅನುಸರಿಸಿದರೆ ಹುಳಬಾಧೆಯಿಂದ ದೂರವಾಗಬಹುದು..

ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್‌ ಆಗಿ ಕಾಣುಲು ಹೀಗೆ ಮಾಡಿ!

ಮೊದಲು ಹಿಟ್ಟನ್ನು ಜರಡಿ ಹಿಡಿಯಿರಿ;

ಹಿಟ್ಟನ್ನು ಮನೆಗೆ ತಂದ ತಕ್ಷಣ ಅದನ್ನು ಮೊದಲು ಜರಡಿ ಹಿಡಿಯಿರಿ.. ಆಗ ಅದರಲ್ಲಿರುವ ಹುಳಗಳ ಮೊಟ್ಟೆಗಳು, ಹುಳಗಳು ಹೊರೆತೆಗೆದಂತ ಆಗುತ್ತವೆ.. ಯಾಕಂದ್ರೆ, ಅಂಗಡಿಗೆ ಬರುವ ಮೊದಲು ಅದನ್ನು ಬೇರೆ ಬೇರೆ ಕಡೆ ಸಂಗ್ರಹಿಸಿಡಲಾಗಿರುತ್ತದೆ.. ಈ ವೇಳೆ ಅದಕ್ಕೆ ಹುಳಗಳು ಮೊಟ್ಟೆಗಳು ಸೇರಿರಬಹುದು.. ನಾವು ಅವುಗಳನ್ನು ತಂದು ಪಾಕೆಟ್‌ ಓಪನ್‌ ಮಾಡಿ ಇಟ್ಟಾಗ ಬೇಗ ಹುಳ ಆಗುತ್ತವೆ.. ಆದ್ರೆ ನಾವು ಹಿಟ್ಟು ತಂದ ದಿನವೇ ಅದನ್ನು ಜರಡಿ ಹಿಡಿದು ಅನಂತರ ಆ ಹಿಟ್ಟನ್ನು ಶೇಖರಿಸಿಕೊಳ್ಳಬೇಕು.. ಹೀಗೆ ಮಾಡುವುದರಿಂದ ನಾವು ಹಿಟ್ಟಿಗೆ ಹುಳ ಹಿಡಿಯದಂತೆ ತಡೆಯಬಹುದು..

ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

ಆಗಾಗ ಬಿಸಿಲಿಗೆ ಹಾಕುವುದು ಒಳ್ಳೆಯದು;

ಹಿಟ್ಟಿನಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ.. ಈ ಕಾರ್ಬೋಹೈಡ್ರೇಟ್‌ಗಳು ಹುಳಗಳನ್ನು ಆಕರ್ಷಿಸುತ್ತವೆ.. ಹೀಗಾಗಿ, ಹುಳಗಳಿಂದ ತಪ್ಪಿಸಿಕೊಳ್ಳಬೇಕು ಅಂದ್ರೆ, ಹಿಟ್ಟನ್ನು ಒಂದು ಬಿಸಿಲಲ್ಲಿ ಒಣಗಿಸುವುದು ಒಳ್ಳೆಯದು.. ಹಾಗೆ ಮಾಡುವುದರಿಂದ ಸಣ್ಣ ಸಣ್ಣ ಹುಳ ಇದ್ದರೂ ಹೊರಹೋಗುತ್ತದೆ.. ಜೊತೆಗೆ ಮೊಟ್ಟೆಗಳಿದ್ದರೆ ಅವು ಸಾಯುತ್ತವೆ.. ಅದರಿಂದ ಮರಿಗಳು ಆಗುವುದಿಲ್ಲ.. ಹಿಟ್ಟನ್ನು ಬಿಸಿಲಿಗೆ ಹಾಕುವುದರಿಂದ ನಮ್ಮ ದೇಹಕ್ಕೆ ರೋಗಾಣುಗಳು ಸೇರುವುದರಿಂದ ತಪ್ಪಿಸಿಕೊಳ್ಳಬಹುದು..

ಇದನ್ನೂ ಓದಿ; ಡಸ್ಟ್‌ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..

ಫ್ರಿಡ್ಜ್‌ನಲ್ಲಿಟ್ಟರೆ ಹುಳಗಳ ಸಮಸ್ಯೆಯಿಂದ ದೂರ;

ಇನ್ನು ಇತ್ತೀಚೆಗೆ ಮೊದಲೇ ಹೇಳಿದಂತೆ ತಿಂಗಳಿಗೆ ಆಗುವಷ್ಟು ಹಿಟ್ಟನ್ನು ಒಂದೇ ಬಾರಿ ತಂದುಬಿಟ್ಟಿರುತ್ತೇವೆ.. ಅದನ್ನು ಹಾಗೆ ಬಿಡುವುದರಿಂದ ಅದರಲ್ಲಿ ಹುಳ ಆಗುತ್ತದೆ.. ಹೀಗಾಗಿ, ಈಗ ಎಲ್ಲರ ಮನೆಯಲ್ಲೂ ಫ್ರಿಡ್ಜ್‌ ಇರುತ್ತದೆ.. ಫ್ರಿಡ್ಜ್‌ನ ಫ್ರೀಜರ್‌ ನಲ್ಲಿರುವ ಜಾಗವನ್ನು ಹಿಟ್ಟನ್ನು ಸ್ಟೋರ್‌ ಮಾಡಲು ಬಳಸಿಕೊಳ್ಳಬಹುದು.. ಗಾಳಿಯಾಡದ ಚೀಲಗಳಲ್ಲಿ ಹಿಟ್ಟನ್ನು ತುಂಬಬೇಕು.. ನಂತರ ಅದನ್ನು ಫ್ರಿಡ್ಜ್‌ನಲ್ಲಿಡಬೇಕು.. ಯಾವುದೇ ಕೀಟಗಳು ಫ್ರಿಡ್ಜ್‌ ನ್ನು ಪ್ರವೇಶ ಮಾಡುವುದಿಲ್ಲ.. ಹೀಗೆ  ಮಾಡುವುದರಿಂದ ಹಿಟ್ಟನ್ನು ಸರಿಯಾಗಿ ಕಾಪಾಡಿದಂತಾಗುತ್ತದೆ..

ಇದನ್ನೂ ಓದಿ; ಹುಡುಗರಲ್ಲಿ ಸುಂದರ ಹುಡುಗಿಯರು ಇಷ್ಟಪಡೋದು ಇದೇನಂತೆ!

ಇದರ ಜೊತೆಗೆ ಈ ಸಲಹೆಗಳನ್ನೂ ಪಾಲಿಸಿ;

ಹಿಟ್ಟನ್ನು ಯಾವಾಗಲೂ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬೇಕು. ಗಾಳಿಯಾಡುವ ಪಾತ್ರೆಯಲ್ಲಿಟ್ಟರೆ ಬೇಗ ಹುಳ ಹಿಡಿಯುತ್ತದೆ.. ಹೀಗಾಗಿ, ಕಂಟೈನರ್‌ನಿಂದ ಹಿಟ್ಟು ತೆಗೆದುಕೊಂಡ ನಂತರ ಅದರ ಮುಚ್ಚಳವನ್ನು ಟೈಟ್‌ ಆಗಿ ಮುಚ್ಚಬೇಕು.. ಜೊತೆಗೆ ತಿಂಗಳ ಸರಕುಗಳು ತಂದಾಗಿ ಕಂಟೈನರ್‌ ಅನ್ನು ಸ್ವಚ್ಛ ಮಾಡಬೇಕು.. ಇನ್ನು ಹಿಟ್ಟಿನೊಳಗೆ ಬಿರಿಯಾನಿ ಎಲೆ, ಲವಂಗ ಹಾಕಿಟ್ಟರೆ  ಹುಳ ಹಿಡಿಯುವುದಿಲ್ಲ. ಇದರ ಜೊತೆಗೆ ಅಡುಗೆ ಮನೆಯಲ್ಲಿ ಆಹಾದ ಪದಾರ್ಥಗಳನ್ನಿಡುವ ಕಪಾಟನ್ನು ಆಗಾಗ ಚೆನ್ನಾಗಿ ಸ್ವಚ್ಛ ಮಾಡಬೇಕು.. ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಗಿಡುತ್ತೇವೋ ಅಷ್ಟು ನಮಗೇ ಒಳ್ಳೆಯದು.. ಇದರಿಂದಾಗಿ ಯಾವುದೇ ಹುಳಗಳು ಬಾಧಿಸುವುದಿಲ್ಲ..

ಇದನ್ನೂ ಓದಿ; ಸಚಿವರ ಭಾಷಣಕ್ಕೆ ಆಕ್ಷೇಪ; ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಕಿತ್ತಾಟ!

ಇನ್ನು ಯಾವುದೇ ವಸ್ತುಗಳನ್ನು ಹೆಚ್ಚು ಖರೀದಿ ಮಾಡಲು ಹೋಗಬೇಡಿ.. ಬಹುತೇಕರು ಆಫರ್‌ ಇದೆ ಎಂದು ಅಗತ್ಯಕ್ಕಿಂತ ಹೆಚ್ಚು ಖರೀದಿ ಮಾಡುತ್ತಾರೆ.. ಆದ್ರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ. ಇದರಿಂದಾಗಿ ಹುಳ ಹಿಡಿದು ನಮಗೇ ಲಾಸ್‌ ಆಗುತ್ತದೆ..

 

Share Post