ಲವಂಗ ಸೇವನೆಯಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆಯಂತೆ!
ಬೆಂಗಳೂರು; ಲವಂಗವನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಾರೆ.. ಅಷ್ಟೇ ಅಲ್ಲ, ಇಒದು ಲೈಂಗಿಕ ನಿಶ್ಚಕ್ತಿಯನ್ನು ಕಡಿಮೆ ಮಾಡುತ್ತದಂತೆ.. ಲವಂಗವನ್ನು ನಿಯಮಿತವಾಗಿ ಸೇವಿಸುವುದರಿಂದ ಲೈಂಗಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.. ಲವಂಗ ಸೇವನೆ ಮಾಡುವುದರಿಂದ ಒತ್ತಡ ಕಡಿಮೆಯಾಗಿ, ನಮ್ಮ ಹಾರ್ಮೋನುಗಳನ್ನು ಸಮತೋಲನ ಮಾಡುತ್ತದಂತೆ. ಹೀಗಾಗಿ, ಲವಂಗಗಳು ನಮ್ಮಲ್ಲಿ ಲೈಂಗಿಕ ಬಯಕೆಗಳನ್ನು ಹೆಚ್ಚು ಮಾಡುತ್ತವೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ..
ಇದನ್ನೂ ಓದಿ; ಬಿಜೆಪಿ ಮೇಯರ್ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!
ನಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ನಮ್ಮ ಲೈಂಗಿಕ ಬಯಕೆಯ ಮೇಲೆ ಋಣಾತ್ಮಹಕ ಪರಿಣಾಮ ಬೀರುತ್ತದೆ.. ಹೀಗಾಗಿ, ಲವಂಗ ಅನ್ನೋದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು, ಲೈಂಗಿಕ ಬಯಕೆಗಳನ್ನು ಹೆಚ್ಚು ಮಾಡುತ್ತದೆ.. ಲವಂಗದಲ್ಲಿರುವ ಹಲವಾರು ಅಯರ್ವೇದ ಗುಣಗಳು ನಮ್ಮಲ್ಲಿ ಕಾಮೋತ್ತಜನ ಮಾಡುತ್ತವೆ.. ನಿಯಮಿತವಾಗಿ ಲವಂಗ ಸೇವನೆ ಮಾಡುವುದರಿಂದ ನಮ್ಮಲ್ಲಿ ಲೈಂಗಿಕ ಆಸಕ್ತಿಗಳು ಹೆಚ್ಚು ಮಾಡುತ್ತವೆ..
ಇದನ್ನೂ ಓದಿ; 15 ದಿನಗಳ ಕಾಲ ಸಕ್ಕರೆ ಬಳಕೆ ನಿಲ್ಲಿಸಿಬಿಟ್ಟರೆ ನಮ್ಮ ದೇಹದಲ್ಲಿ ಏನಾಗುತ್ತೆ..?
ನಿಮಿರುವಿಕೆ ಮತ್ತು ಲೈಂಗಿಕ ಆರೋಗ್ಯವನ್ನು ಸುಧಾರಿಸಲು ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿರಬೇಕು. ಲವಂಗದಲ್ಲಿರುವ ಯುಜೆನಾಲ್ ಜನನಾಂಗದ ಪ್ರದೇಶದಲ್ಲಿ ರಕ್ತದ ಹರಿವನ್ನು ಸುಗಮಗೊಳಿಸುಯತ್ತದೆ. ಇದು ನಿಮಿರುವಿಕೆಯ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ಲೈಂಗಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಫ್ರೀ ರಾಡಿಕಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳ ನಡುವೆ ಅಸಮತೋಲನ ಉಂಟಾದಾಗ ಆಕ್ಸಿಡೇಟಿವ್ ಒತ್ತಡ ಸಂಭವಿಸುತ್ತದೆ. ಆದಾಗ್ಯೂ, ಲವಂಗದಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ಸ್ವತಂತ್ರ ರಾಡಿಕಲ್‌ಗಳ ಉತ್ತೇಜನಗೊಳಿಸುತ್ತವೆ..
ಇದನ್ನೂ ಓದಿ; ಇಂತಹ ವ್ಯಕ್ತಿಗಳನ್ನು ಬುದ್ಧಿ ಇರುವ ಯಾವ ಹೆಣ್ಣೂ ಮದುವೆ ಆಗೋದಿಲ್ಲ..!
ಪ್ರತಿದಿನ ಕೆಲವು ಲವಂಗಗಳನ್ನು ಅಡುಗೆಯಲ್ಲಿ ಬಳಸಬಹುದು. ಅವುಗಳನ್ನು ಪುಡಿಮಾಡಿ ಮಸಾಲೆಗಳೊಂದಿಗೆ ಮಿಶ್ರಣ ಮಾಡಿ ಕೂಡಾ ಬಳಸಬಹುದು.. ಲವಂಗವನ್ನು ಚಹಾದಂತೆ ಕೂಡಾ ತೆಗೆದುಕೊಳ್ಳಬಹುದು. ಇದಕ್ಕಾಗಿ ನೀರನ್ನು ಕುದಿಸಿ ಅದರಲ್ಲಿ ಎರಡು ಅಥವಾ ಮೂರು ಲವಂಗವನ್ನು ಹಾಕಿ 5 ನಿಮಿಷ ಕುದಿಸಬೇಕು.. ಬೆಚ್ಚಗಾದ ನಂತರ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ತೆಗೆದುಕೊಳ್ಳಬಹುದು.