ಡಸ್ಟ್ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..
ನಗರದಲ್ಲಿ ಕಲುಷಿತ ವಾತಾವರಣಕ್ಕೆ ಜನ ದಿನವೂ ಒಂದಿಲ್ಲೊಂದು ಕಿರಿಕಿರಿ ಅನುಭವಿಸುತ್ತಿರುತ್ತಾರೆ.. ಅದರಲ್ಲೂ ಕೆಲವರು ಈ ಡಸ್ಟ್ ಅಲರ್ಜಿಯಿಂದ ನಾನಾ ತೊಂದರೆಗಳಿಗೆ ದಾರಿ ಮಾಡಿಕೊಂಡಿರುತ್ತಾರೆ.. ಅಂದಹಾಗೆ ಡಸ್ಟ್ ಅಲರ್ಜಿ ಒಂದು ಸಾಮಾನ್ಯ ಸಮಸ್ಯೆ.. ಆದರೂ ಅದನ್ನು ನಿರ್ಲಕ್ಷಿಸುವಂತಿಲ್ಲ.. ನಿರ್ಲಕ್ಷ್ಯ ಮಾಡಿದರೆ ಮುಂದೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಮೂಗು ಸೋರುವಿಕೆ, ಸೀನುವಿಕೆ, ಕೆಮ್ಮು, ಕಣ್ಣುಗಳು ಕೆಮಪಾಗುವುದು ಮತ್ತು ಗಂಟಲು ನೋವು ಎಲ್ಲವೂ ಕೂಡಾ ಧೂಳಿನ ಅಲರ್ಜಿಯಿಂದ ಬರುವಂತಹ ತೊಂದರೆಗಳಾಗಿವೆ.. ಶೀತ ಋತುವಿನಲ್ಲಿ ಈ ಸಮಸ್ಯೆ ಹೆಚ್ಚು ಬಾಧಿಸುತ್ತದೆ.. ಬೇಸಿಗೆ ಕಾಲದಲ್ಲೂ ಧೂಳು ಹೆಚ್ಚಿರುವುದರಿಂದ ಜನರು ಕಿರಿಕಿರಿ ಅನುಭವಿಸುತ್ತಿರುತ್ತಾರೆ.
ಇದನ್ನೂ ಓದಿ; ಹುಡುಗರಲ್ಲಿ ಸುಂದರ ಹುಡುಗಿಯರು ಇಷ್ಟಪಡೋದು ಇದೇನಂತೆ!
ಧೂಳಿನಲ್ಲಿ ಸೂಕ್ಷ್ಮಾಣುಗಳಿಂದ ಅಲರ್ಜಿ;
ಧೂಳಿನಲ್ಲಿರುವ ಸೂಕ್ಷ್ಮಾಣುಗಳಿಂದ ಧೂಳಿನ ಅಲರ್ಜಿ ಉಂಟಾಗುತ್ತದೆ. ಕೆಲವು ವೈದ್ಯಕೀಯ ಸಲಹೆಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ದೂರವಾಗಬಹುದು.. ನಮ್ಮ ಆಹಾರದಲ್ಲಿನ ಬದಲಾವಣೆ, ಜೀವಶೈಲಿಯಲ್ಲಿ ಬದಲಾವಣೆ, ಸುತ್ತಿಲಿನ ಪರಿಸರವನ್ನು ನೀಟಾಗಿ ಇಟ್ಟುಕೊಳ್ಳುವುದರ ಮುಖಾಂತರ ಧೂಳಿನ ಅಲರ್ಜಿಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.
ಇದನ್ನೂ ಓದಿ; ಸಚಿವರ ಭಾಷಣಕ್ಕೆ ಆಕ್ಷೇಪ; ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ!
ರೋಗನಿರೋಧಕ ಹೆಚ್ಚಿಸುವ ಆಹಾರಗಳನ್ನು ಸೇವಿಸಿ;
ಧೂಳಿನ ಅಲರ್ಜಿ ಇರುವವರು ಆ್ಯಂಟಿಆಕ್ಸಿಡೆಂಟ್ಗಳಿರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಜೇನುತುಪ್ಪ, ಅರಿಶಿನ, ಹಣ್ಣುಗಳು, ಹಸಿರು ತರಕಾರಿಗಳು, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಕಾಳುಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಡೈರಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು.. ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರಗಳು ಹಾಗೂ ದೇಹಕ್ಕೆ ಹೆಚ್ಚು ಪೌಷ್ಠಿಕಾಂಶಗಳನ್ನು ನೀಡುವ ಆಹಾರಗಳನ್ನು ಹೆಚ್ಚು ತೆಗೆದುಕೊಂಡಾಗ ದೇಹ ಯಾವುದೇ ಸೂಕ್ಷ್ಮಾಣುಗಳನ್ನು ಸಹಿಸಬಲ್ಲದು, ಅದನ್ನು ದೇಹದಿಂದ ಒದ್ದೋಡಿಸಬಲ್ಲದು.. ಹೀಗಾಗಿ, ಮನೆಯಲ್ಲೇ ಮಾಡಿದ ಉತ್ತಮ ಆಹಾರವನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು..
ಇದನ್ನೂ ಓದಿ; ಅಲಸಂದೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಯಾ..?
ಆಯುರ್ವೇದ ಗಿಡಮೂಲಿಕೆಗಳನ್ನು ಸೇವಿಸಿ;
ತುಳಸಿ, ಬ್ರಾಹ್ಮಿ, ಅಶ್ವಗಂಧ ಮುಂತಾದ ಆಯುರ್ವೇದ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಧೂಳಿನ ಅಲರ್ಜಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾಗಳು, ಪಾನೀಯಗಳು ಮತ್ತು ಕಷಾಯಗಳನ್ನು ಕುಡಿಯಬಹುದು. ಅಶ್ವಗಂದ, ಬ್ರಾಹ್ಮಿ, ತುಳಸಿ ಇಂತಹ ಆಯುರ್ವೇದ ವಸ್ತುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಕಾಫಿ, ಟೀ ಯಂತಹ ಪಾನೀಯಗಳಿಗೆ ಬದಲಾಗಿ, ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ಕುಡಿಯುತ್ತಾ ಬಂದರೆ ಆರೋಗ್ಯ ಚೆನ್ನಾಗಿರುತ್ತದೆ.. ಯಾವುದೇ ಅಲರ್ಜಿಗಳು ನಮ್ಮ ದೇಹಕ್ಕೆ ತಾಗುವುದಿಲ್ಲ..
ಇದನ್ನೂ ಓದಿ; ಪಂಚಾಮೃತ ಅಂದ್ರೆ ಏನು..?; ಇದನ್ನು ತಯಾರು ಮಾಡೋದು ಹೇಗೆ..?
ಉಸಿರಾಟದ ವ್ಯಾಯಾಮ ಮಾಡುವುದು ಉತ್ತಮ;
ಮನುಷ್ಯ ಆರೋಗ್ಯವಾಗಿರಬೇಕಾದರೆ ಯಾವಾಗಲೂ ವ್ಯಾಯಾಮಗಳನ್ನು ಮಾಡಬೇಕು.. ನಮಗೆ ಪೌಷ್ಠಿಕ ಆಹಾರ ಎಷ್ಟು ಮುಖ್ಯವೋ ವ್ಯಾಯಾಮ ಕೂಡಾ ಅಷ್ಟೇ ಮುಖ್ಯವಾಗುತ್ತದೆ.. ಅದರಲ್ಲೂ ಯೋಗಾಗಳನ್ನು ಮಾಡುವುದರಿಂದ ನಮ್ಮ ದೇಹ ಆರೋಗ್ಯವಾಗಿರುತ್ತದೆ.. ಅದ್ರಲ್ಲೂ ಉಸಿರಾಟ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಡಸ್ಟ್ ಅಲರ್ಜಿ ನಮಗೆ ಬರುವುದಿಲ್ಲ.. ಪ್ರಾಣಾಯಾಮಗಳು ನಮಗೆ ಸೂಕ್ತ ಪರಿಹಾರವನ್ನು ನೀಡುತ್ತವೆ.. ಮನುಷ್ಯ ನೆಮ್ಮದಿಯ ಜೀವನ ನಡೆಸಬೇಕಾದರೆ, ಒತ್ತಡದಿಂದ ದೂರ ಇರಬೇಕಾದರೆ ಕೂಡಾ ವ್ಯಾಯಾಮ, ಯೋಗಾ ಅತ್ಯಂತ ಮುಖ್ಯವಾದುದು.. ಪ್ರತಿದಿನ ಬೆಳಗ್ಗೆ ಎದ್ದಾಗ ಯೋಗಾ ಮಾಡುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು..
ಇದನ್ನೂ ಓದಿ; ಕೋಲಾರ ಕಾಂಗ್ರೆಸ್ ನಾಯಕರ ಹೈಡ್ರಾಮಾ; ಇದರ ಹಿಂದೆ ಯಾರಿದ್ದಾರೆ..?
ಚೆನ್ನಾಗಿ ನೀರು ಕುಡಿಯಿರಿ, ಸಾಕಷ್ಟು ನಿದ್ದೆ ಮಾಡಿ;
ಮನುಷ್ಯನಿಗೆ ಆಹಾರದ ಜೊತೆ ಧ್ಯಾನ, ವ್ಯಾಯಾಮ ಕೂಡಾ ಬೇಕು.. ಇದರ ಜೊತೆಗೆ ಹೆಚ್ಚು ನೀರು ಕುಡಿಯಬೇಕು.. ಮನುಷ್ಯ ಹೆಚ್ಚು ನೀರು ಕುಡಿದಷ್ಟೂ ದೇಹದಿಂದ ಮಲಿನಗಳು ಹೊರಹೋಗುತ್ತವೆ.. ಆಗ ನಮಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ.. ಅದರಲ್ಲೂ ಉಸಿರಾಟದಂತ ಸಮಸ್ಯೆಗಳು ಬರುವುದಿಲ್ಲ.. ಇನ್ನು ದಿನವೂ ಕನಿಷ್ಠ 8 ಗಂಟೆಗಳಾದರೂ ದೀರ್ಘ ನಿದ್ದೆ ಮಾಡಬೇಕು.. ಚೆನ್ನಾಗಿ ನಿದ್ದೆ ಮಾಡುವವರು ಯಾವಾಗಲೂ ಆರೋಗ್ಯವಾಗಿರುತ್ತಾರೆ.. ಒತ್ತಡದ ಜೀವನದ ಮಧ್ಯೆ ಜನರು ನಿದ್ದೆ ಮಾಡುವುದನ್ನೂ ಮರೆಯುತ್ತಿದ್ದಾರೆ.. ಇದರಿಂದಾಗಿ ಜನ ಅನಾರೋಗ್ಯಕ್ಕೀಡಾಗುತ್ತಿದ್ದಾರೆ..
ಇದನ್ನೂ ಓದಿ; ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ ಮೆಗಾಸ್ಟಾರ್ ಚಿರಂಜೀವಿ!