ಮತ್ತೊಂದು ರೆಸ್ಟೋರೆಂಟ್‌ಗೆ ಬಂತು ಬಾಂಬ್ ಬೆದರಿಕೆ; ಕಾರಣ ಕೇಳಿ ಪೊಲೀಸರೇ ಬೇಸ್ತು..!
ಬೆಂಗಳೂರು; ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು.. ಈ ಪ್ರಕರಣ ತನಿಖೆ ಇನ್ನೂ ಮುಂದುವರೆದೇ ಇದೆ.. ಇದನ್ನೂ ಶಂಕಿತ ಉಗ್ರನ ಸುಳಿವು ಸಿಕ್ಕಿಲ್ಲ.. ಎನ್‌ಐಎ ಅಧಿಕಾರಿಗಳು ಹುಡುಕಾಟ ಮುಂದುವರೆಸಿದ್ದಾರೆ.. ಹೀಗಿರುವಾಗಲೇ ಮತ್ತೊಂದು ರೆಸ್ಟೋರೆಂಟ್‌ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು.. ಇದರಿಂದಾಗಿ, ಭೀತಿಯ ವಾತಾವರಣ ಸೃಷ್ಟಿಯಾಗಿತ್ತು..
ಇದನ್ನೂ ಓದಿ; ಹಿಟ್ಟಿಗೆ ಹುಳ ಹಿಡಿಯುತ್ತಿದೆಯೇ..?; ಹಾಗಾದ್ರೆ ಈ ಟ್ರಿಕ್ಸ್ ಯೂಸ್ ಮಾಡಿ!
ಪಾಸ್ತಾ ರೆಸ್ಟೋರೆಂಟ್ ಸ್ಫೋಟಿಸುವ ಬೆದರಿಕೆ;
ವೈಟ್‌ಫೀಲ್ಡ್ ಬಳಿಯ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು.. ಹೀಗಾಗಿ ಬೆಂಗಳೂರಿನ ಜನ ಬಾಂಬ್ ಅಂದರೆ ಈಗಲೂ ಬೆಚ್ಚಿಬೀಳ್ತಾರೆ.. ಹೀಗಿರುವಾಗಲೇ ಮಹದೇವಪುರದಲ್ಲಿರುವ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್‌ಗೆ ಬಾಂಬ್ ಬೆದರಿಕೆ ಕರೆ ಬಂದಿದೆ.. ಇದರಿಂದಾಗಿ ಸ್ಥಳೀಯರು ಹಾಗೂ ರೆಸ್ಟೋರೆಂಟ್ ಮಾಲೀಕರು ತೀವ್ರ ಆತಂಕಗೊಂಡಿದ್ದರು.. ಪೊಲೀಸರು ಕೂಡಾ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದರು.. ಯಾಕಂದ್ರೆ ರೆಸ್ಟೋರೆಂಟ್‌ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಶೀಘ್ರದಲ್ಲೇ ರೆಸ್ಟೋರೆಂಟ್ ಸ್ಫೋಟವಾಗುತ್ತೆ. ಅದರಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿದ್ದ..
ಇದನ್ನೂ ಓದಿ; ಮುಖ ಸುಕ್ಕುಗಟ್ಟದಂತೆ ಯಾವಾಗಲೂ ಯಂಗ್ ಆಗಿ ಕಾಣುಲು ಹೀಗೆ ಮಾಡಿ!
ತಡರಾತ್ರಿಯಲ್ಲಿ ಕರೆ ಮಾಡಿ ನಿದ್ದೆಗೆಡಿಸಿದ್ದ ವ್ಯಕ್ತಿ;
ಅದೂ ಕೂಡಾ ಆರೋಪಿ ತಡರಾತ್ರಿಯಲ್ಲಿ ಕರೆ ಮಾಡಿದ್ದ.. ನಿಮ್ಮ ರೆಸ್ಟೋರೆಂಟ್‌ನಲ್ಲಿ ಬಾಂಬ್ ಇಟ್ಟಿದ್ದೇನೆ.. ಸ್ವಲ್ಪ ಹೊತ್ತಿನಲ್ಲಿ ಅದು ಸ್ಫೋಟವಾಗುತ್ತದೆ.. ಇಡೀ ರೆಸ್ಟೋರೆಂಟ್ ಛಿದ್ರಛಿದ್ರವಾಗುತ್ತದೆ ಎಂದು ಹೇಳಿದ್ದ.. ಇದರಿಂದ ಆತಂಕಗೊಂಡ ರೆಸ್ಟೋರೆಂಟ್ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.. ಕೂಡಲೇ ಬಾಂಬ್ ಸ್ಕ್ವಾಡ್ ಜೊತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.. ಆದ್ರೆ ಅಲ್ಲಿ ಯಾವುದೇ ಸ್ಫೋಟಕ ವಸ್ತು ಸಿಕ್ಕಿಲ್ಲ.. ಇದರಿಂದಾಗಿ ಅದು ಹುಸಿ ಬಾಂಬ್ ಕರೆ ಎಂಬುದು ಸಾಬೀತಾಯಿತು.. ಆದ್ರೆ ರಾಮೇಶ್ವರಂ ಸ್ಫೋಟದ ತನಿಖೆ ತೀವ್ರಗೊಂಡಿರುವುದರಿಂದ ಪೊಲೀಸರು ಈ ಪ್ರಕರಣವನ್ನೂ ಗಂಭೀರವಾಗಿ ತೆಗೆದುಕೊಂಡು ರಾತ್ರಿಯೇ ಕಾರ್ಯಪ್ರವೃತ್ತರಾದರು.
ಇದನ್ನೂ ಓದಿ; ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್!
ರಾತ್ರಿಯೇ ಸಿಕ್ಕಿಬಿದ್ದ ವ್ಯಕ್ತಿ ಹೇಳಿದ್ದೇನು..?;
ಕರೆ ಮಾಡಿ ಬಾಂಬ್ ಇಟ್ಟಿದ್ದೇನೆ ಎಂದು ಹೇಳಿ ವ್ಯಕ್ತಿ ಕರೆ ಕಟ್ ಮಾಡಿದ್ದ.. ಇನ್ನು ಹುಸಿ ಬಾಂಬ್ ಬೆದರಿಕೆ ಎಂದು ಗೊತ್ತಾದ ಕೂಡಲೇ ಪೊಲೀಸರಿಗೆ ಮೊದಲಿಗೆ ರೆಸ್ಟೋರೆಂಟ್ ಸಿಬ್ಬಂದಿಯ ಮೇಲೆಯೇ ಅನುಮಾನ ಬಂದಿದೆ.. ಅನುಮಾನ ಬಂದಾಕ್ಷಣ ಪೊಲೀಸರು, ಇಂದಿರಾನಗರ ಬ್ರಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಲು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.. ಈ ವೇಳೆ ಆತ ಕೊಟ್ಟ ಉತ್ತರ ಕೇಳಿ ಪೊಲೀಸರೇ ಹೌಹಾರಿದ್ದಾರೆ…
ಇದನ್ನೂ ಓದಿ; ಡಸ್ಟ್ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..
ಸಂಬಳ ಕೊಡದಿದ್ದಕ್ಕೆ ಮನನೊಂದು ಬೆದರಿಕೆ ಕರೆ;
ಆರೋಪಿ ವೇಲು ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್‌ನಲ್ಲೇ ಕೆಲಸ ಮಾಡುತ್ತಾನೆ.. ಆತ ಕೆಲಸ ಮಾಡೋದು ಇಂದಿರಾನಗರದ ಬ್ರಾಂಚ್‌ನಲ್ಲಿ.. ಈತನಿಗೆ ಸಂಂಬಳ ನೀಡದೇ ಮಾಲೀಕರು ಸತಾಯಿಸುತ್ತಿದ್ದರಂತೆ.. ಇದರಿಂದ ಆತ ರೋಸಿಹೋಗಿದ್ದಾನೆ.. ಹೀಗಾಗಿ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಅನ್ನೋ ಉದ್ದೇಶದಿಂದ ಆರೋಪಿ ವೇಲು ಈ ರೀತಿಯಾಗಿ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ.. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.. ಆರೋಪಿಯನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ..
ಇದನ್ನೂ ಓದಿ; ಹುಡುಗರಲ್ಲಿ ಸುಂದರ ಹುಡುಗಿಯರು ಇಷ್ಟಪಡೋದು ಇದೇನಂತೆ!
ಇನ್ನೂ ಪತ್ತೆಯಾಗದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಆರೋಪಿ;
ಮಾರ್ಚ್ 1ರಂದು ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು.. ಮಾಸ್ಕ್, ಟೋಪಿ ಧರಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ಟೈಮ್ ಬಾಂಬ್ ಇಟ್ಟು ಪರಾರಿಯಾಗಿದ್ದ.. ಅಂದು ನಡೆದ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದರು.. ಇದೀಗ ಗಾಯಾಳು ಚೇತರಿಸಿಕೊಂಡಿದ್ದಾರೆ.. ಆದ್ರೆ ಬಾಂಬ್ ಇಟ್ಟ ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.. ನಿನ್ನೆ ಕೂಡಾ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.. ಆದ್ರೆ ಮೂಲ ಆರೋಪಿ ಮಾತ್ರ ಎನ್‌ಐಎ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ.. ಸತತವಾಗಿ ತನಿಖೆ ನಡೆಸಲಾಗುತ್ತಿದೆ..
ಇದನ್ನೂ ಓದಿ; ಸಚಿವರ ಭಾಷಣಕ್ಕೆ ಆಕ್ಷೇಪ; ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ!