HealthLifestyle

ರಾತ್ರಿಯಿಡೀ ನೆನೆಸಿಟ್ಟ ಒಣದ್ರಾಕ್ಷಿ ತಿಂದರೆ ಅನಾರೋಗ್ಯಕ್ಕೆ ಚೆಕ್‌!

ಬೆಂಗಳೂರು; ಒಣ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.. ವೈದ್ಯರು ಕೂಡಾ ಒಣಹಣ್ಣುಗಳನ್ನು ತಿನ್ನುವಂತೆ ಸೂಚಿಸುತ್ತಾರೆ.. ಅದರಲ್ಲೂ ಒಣದ್ರಾಕ್ಷಿಯನ್ನು ವಿಶ್ವದೆಲ್ಲೆಡೆ ಜನ ಬಳಸುತ್ತಾರೆ.. ಆಹಾರ ಪದಾರ್ಥಗಳಲ್ಲೂ ಯಾವಾಗಲೂ ಒಣದ್ರಾಕ್ಷಿಯನ್ನು ಬಳಸುತ್ತಿರುತ್ತಾರೆ.. ಹೀಗಾಗಿಯೇ ಒಣದ್ರಾಕ್ಷಿಯನ್ನು ವಿಶ್ವದ ಅತ್ಯಂತ ಪೌಷ್ಠಿಕ ಆಹಾರ ಎಂದು ಗುರುತಿಸಲಾಗಿದೆ..

ಇದನ್ನೂ ಓದಿ; ಡಸ್ಟ್‌ ಅಲರ್ಜಿಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ..?; ಹಾಗಾದರೆ ಇದನ್ನು ಓದಿ..

ಒಣದ್ರಾಕ್ಷಿಯಲ್ಲಿ ಇಷ್ಟೊಂದು ಪೌಷ್ಠಿಕಾಂಶಗಳಿವೆಯಾ..?

ಒಣದ್ರಾಕ್ಷಿಯನ್ನು ಕಿಸ್ಮಿಸ್ ಎಂದೂ ಕರೆಯುವವರಿದ್ದಾರೆ. ಈ ಒಣದ್ರಾಕ್ಷಿಯಲ್ಲಿ ವಿಟಮಿನ್‌ಗಳು, ಡಯೆಟರಿ ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಹಲವು ಪೋಷಕಾಂಶಗಳು ಹೇರಳವಾಗಿವೆ.. ಇವುಗಳಿಂದಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.. ಆಯುರ್ವೇದದ ಪ್ರಕಾರ, ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ತುಂಬಾನೇ ಒಳ್ಳೆಯದು.. ನೆನೆಸಿಟ್ಟು ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಒಣದ್ರಾಕ್ಷಿ ತಿನ್ನುವುದುರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಂತೆ..

ಇದನ್ನೂ ಓದಿ; ಹುಡುಗರಲ್ಲಿ ಸುಂದರ ಹುಡುಗಿಯರು ಇಷ್ಟಪಡೋದು ಇದೇನಂತೆ!

ಒಣದ್ರಾಕ್ಷಿ ನೀರಿನಿಂದ ನಿಮ್ಮ ದಿನ ಆರಂಭಿಸಿ;

ಒಂದು ಲೋಟ ನೆನೆಸಿದ ಒಣದ್ರಾಕ್ಷಿ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬೇಕು.. ಯಾಕಂದ್ರೆ ಇದರಿಂದ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.. ಬೆಳಗ್ಗೆ ನೆನೆಪಿಸಿಟ್ಟ ಒಣದ್ರಾಕ್ಷಿ ತಿಂದು, ಅದರ ನೀರು ಕುಡಿದರೆ ದೇಹಕ್ಕೆ ಸಾಕಷ್ಟು ಅನುಕೂಲವಾಗಲಿದೆ..  ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು.. ಹೀಗಾಗಿ, ನೀವು ಒಣದ್ರಾಕ್ಷಿ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ಆಗ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು..

ಇದನ್ನೂ ಓದಿ; ಅಲಸಂದೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಯಾ..?

ದೇಹ ಡಿಟಾಕ್ಸ್‌ ಮಾಡಲು 10 ಒಣದ್ರಾಕ್ಷಿ ಸಾಕು!;

ನಮ್ಮ ದೇಹದಲ್ಲಿ ಮಲಿನಗಳನ್ನು ತೆಗೆದುಹಾಕಲು, ದೇಹವನ್ನು ಆರೋಗ್ಯವಾಗಿಡಲು ಹತ್ತು ಒಣದ್ರಾಕ್ಷಿ ಸಾಕು.. ದಿನವೂ ರಾತ್ರಿ ಹತ್ತು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಡಬೇಕು.. ಶುದ್ಧವಾಗಿ ನೀರನ್ನು ಒಂದು ಲೋಟದಲ್ಲಿ ತೆಗೆದುಕೊಂಡು ಅದರಲ್ಲಿ ಹತ್ತು ಒಳ್ಳೆಯ ಒಣ ದ್ರಾಕ್ಷಿ ಹಾಕಬೇಕು.. ಅದನ್ನು ಬೆಳಗ್ಗೆಯೇ ಬರೀ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹ ಡಿಟಾಕ್ಸ್‌ ಆಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.. ಹೀಗೆ ಮಾಡುವುದರಿಂದ  ಇದು ನಮ್ಮ ಯಕೃತ್ತನ್ನು ಆರೋಗ್ಯವಾಗಿರಿಸುತ್ತದೆ.

ಇದನ್ನೂ ಓದಿ; ಪಂಚಾಮೃತ ಅಂದ್ರೆ ಏನು..?; ಇದನ್ನು ತಯಾರು ಮಾಡೋದು ಹೇಗೆ..?

ಕ್ಯಾನ್ಸರ್‌ ಕಣಗಳನ್ನು ನಾಶ ಮಾಡುವ ಗುಣವಿದೆ;

ಒಣದ್ರಾಕ್ಷಿ ನೆನೆಸಿದ ನೀರು ಕುಡಿಯುವುದರಿಂದ ದೆಹದಲ್ಲಿನ ಕ್ಯಾನ್ಸರ್ ಕೋಶಗಳು ಸಂಪೂರ್ಣ ನಾಶವಾಗುತ್ತವೆ. ಕ್ಯಾನ್ಸರ್‌ ಬರದಂತೆ ತಡೆಯಬಹುದು.. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಡಿಟಾಕ್ಸ್ ಪಾನೀಯವಾಗಿದೆ. ಪ್ರತಿದಿನ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ನೀರನ್ನು ಕುಡಿಯುವುದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮಕ್ಕೆ ಉತ್ತಮ ಹೊಳಪನ್ನು ನೀಡುತ್ತದೆ. ಇದು ಮುಖದ ಮೇಲಿನ ಮೊಡವೆಗಳನ್ನು ತಡೆಯುತ್ತದೆ. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸುವುದರಿಂದ ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ದ್ವಿಗುಣಗೊಳಿಸುತ್ತದೆ.

ಇದನ್ನೂ ಓದಿ; ಕೋಲಾರ ಕಾಂಗ್ರೆಸ್‌ ನಾಯಕರ ಹೈಡ್ರಾಮಾ; ಇದರ ಹಿಂದೆ ಯಾರಿದ್ದಾರೆ..?

ಇದು ಅಂತಿಂಥಾ ನೀರಲ್ಲ.. ಡಿಟಾಕ್ಸ್ ವಾಟರ್ ..!

ಯಕೃತ್ತು ನಮ್ಮ ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸುವ ಪ್ರಮುಖ ಅಂಗವಾಗಿದೆ. ಆದರೆ ಕೆಟ್ಟ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ರಾತ್ರಿಯಿಡೀ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಯಕೃತ್ತಿನ ನಿರ್ವಿಶೀಕರಣದ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಯಕೃತ್ತು ಮತ್ತು ಜೀವರಾಸಾಯನಿಕ ಕಾರ್ಯಗಳನ್ನು ಉತ್ತೇಜಿಸುತ್ತದೆ. ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಅದಕ್ಕಾಗಿಯೇ ಒಣದ್ರಾಕ್ಷಿ ನೆನೆಸಿದ ನೀರನ್ನು ಅತ್ಯುತ್ತಮವಾದ ನಿರ್ವಿಷಗೊಳಿಸುವ ಬೆಳಗಿನ ಪಾನೀಯ ಎಂದು ಕರೆಯಲಾಗುತ್ತದೆ. ಇದು ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ; ಬೆಂಗಳೂರು ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದ ಮೆಗಾಸ್ಟಾರ್‌ ಚಿರಂಜೀವಿ!

ಹೊಟ್ಟೆಯ ಆರೋಗ್ಯ ಕಾಪಾಡುತ್ತೆ..!;

ಕರಗದ ನಾರು, ನೈಸರ್ಗಿಕ ದ್ರವಗಳ ಜೀರ್ಣಕ್ರಿಯೆಗೆ ಒಣದ್ರಾಕ್ಷಿ ನೆನೆಸಿದ ನೀರು ಸಹಾಯ ಮಾಡುತ್ತದೆ. ಇವೆಲ್ಲವೂ ಒಣದ್ರಾಕ್ಷಿ ನೀರಿನಲ್ಲಿ ಹೇರಳವಾಗಿವೆ. ಒಣದ್ರಾಕ್ಷಿಯಲ್ಲಿರುವ ಫ್ಲೇವನಾಯ್ಡ್ ಅಂಶಗಳು ವಿರೇಚಕ ಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಗಳ ನೀರನ್ನು ಕುಡಿಯುವುದು ಆರೋಗ್ಯಕರ, ಸ್ವಚ್ಛವಾದ ಹೊಟ್ಟೆಯನ್ನು ಕಾಪಾಡಿಕೊಳ್ಳಲು ಯಶಸ್ವಿ ಮನೆಮದ್ದಾಗಿದೆ.

ಇದನ್ನೂ ಓದಿ; ಯೂರಿಕ್‌ ಆಮ್ಲ ಕಡಿಮೆ ಮಾಡಲು ಈ ಡ್ರೈಫ್ರೂಟ್ಸ್‌ ತಿನ್ನಿ ಸಾಕು!

ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ;

ಆಸಿಡೋಸಿಸ್ ಎನ್ನುವುದು ಉಸಿರಾಟದ ವ್ಯವಸ್ಥೆಯಲ್ಲಿ ರಕ್ತದ ಅನಿಲಗಳ ಉಪಸ್ಥಿತಿಯಿಂದಾಗಿ ರಕ್ತದಲ್ಲಿನ ಆಮ್ಲೀಯತೆಯ ಹಠಾತ್ ಹೆಚ್ಚಳದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ. ಕಪ್ಪು ದ್ರಾಕ್ಷಿಯ ನೀರಿನಲ್ಲಿ ಆಂಟಾಸಿಡ್ಗಳು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇರುತ್ತದೆ. ಇವೆಲ್ಲವೂ ವಿಶೇಷವಾಗಿ ಹೊಟ್ಟೆಯ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಈ ದೀರ್ಘಕಾಲದ ಸ್ಥಿತಿಯನ್ನು ತಪ್ಪಿಸಬಹುದು.

ಇದನ್ನೂ ಓದಿ; ಹೀರೇಕಾಯಿ ಬಗ್ಗೆ ನಿರ್ಲಕ್ಷ್ಯ ಬೇಡ; ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಗೊತ್ತಾ..?

ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ;

ಒಣದ್ರಾಕ್ಷಿಯಲ್ಲಿ ಕಬ್ಬಿಣ, ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಮತ್ತು ತಾಮ್ರ ಸಮೃದ್ಧವಾಗಿದೆ. ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಮತ್ತು ಕಬ್ಬಿಣವು ಹೊಸ ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ತಾಮ್ರವು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಒಣದ್ರಾಕ್ಷಿ ವಿಟಮಿನ್ ಡಿ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದರ ಸೇವನೆಯಿಂದ ರಕ್ತಹೀನತೆ ಕಡಿಮೆಯಾಗುತ್ತದೆ. ಬೆಳಿಗ್ಗೆ ಬೇಗ ಒಣದ್ರಾಕ್ಷಿ ತಿನ್ನುವುದರಿಂದ ದೇಹಕ್ಕೆ ದಿನವಿಡೀ ಚಟುವಟಿಕೆಯಿಂದ ಇರಲು ಬೇಕಾದ ಶಕ್ತಿ ದೊರೆಯುತ್ತದೆ.

ಇದನ್ನೂ ಓದಿ; Loksabha; ಅಭ್ಯರ್ಥಿ ಆಯ್ಕೆಯಲ್ಲಿ ಯಡಿಯೂರಪ್ಪ ಎಡವಿದ್ರಾ..?; ಬಿಜೆಪಿಯಲ್ಲಿ ಇಷ್ಟೊಂದು ಅಪಸ್ವರ ಯಾಕೆ..?

Share Post