ಸಚಿವರ ಭಾಷಣಕ್ಕೆ ಆಕ್ಷೇಪ; ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಿತ್ತಾಟ!
ಹಾಸನ; ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ.. ಇದರ ಜೊತೆಗೆ ನಾಯಕರ ಕಿತ್ತಾಟಗಳೂ ಜೋರಾಗುತ್ತಿವೆ.. ಹಾಸನ ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.. ಇದಕ್ಕಾಗಿ ಇಂದು ಹಾಸನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ಆಯೋಜನೆ ಮಾಡಲಾಗಿತ್ತು.. ಈ ವೇಳೆ ಸಚಿವ ಕೆ.ಎನ್.ರಾಜಣ್ಣ ಅವರು ಮಾತು ಕೆಲ ಕಾರ್ಯಕರ್ತರನ್ನು ಕೆರಳಿಸಿದೆ.. ಇದರಿಂದಾಗಿ ಆಕ್ರೋಶಗೊಂಡ ಕೆಲವರು ಚೇರ್‌ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ನೂಕಾಟ, ತಳ್ಳಾಟ ಪ್ರಕರಣಗಳೂ ನಡೆದಿವೆ..
ಇದನ್ನೂ ಓದಿ; ಅಲಸಂದೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಯಾ..?
ಶ್ರೀಧರ್ ಗೌಡ ಬೆಂಬಲಿಗರಿಂದ ಸಚಿವರ ವಿರುದ್ಧ ಆಕ್ರೋಶ;
ಅರಕಲಗೂಡು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀಧರ ಗೌಡ ಅವರು ಸಭೆಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅರಕಲಗೂಡು ಕ್ಷೇತ್ರದಲ್ಲಿ 30 ಸಾವಿರ ಲೀಡ್ ತಂದುಕೊಡುತ್ತೇವೆ ಎಂದು ಹೇಳಿದ್ದರು.. ಇದನ್ನೇ ನಂತರ ಭಾಷಣ ಮಾಡಿದ ಸಚಿವ ಕೆ.ಎನ್.ರಾಜಣ್ಣ ಪ್ರಸ್ತಾಪ ಮಾಡಿದ್ದಾರೆ.. ಶ್ರೀಧರಗೌಡ ಮಾತನ್ನು ಲೇವಡಿ ಮಾಡಿದ್ದಾರೆ. 30 ಸಾವಿರ ಲೀಡ್ ನೀಡುವವನು ಯಾಕಪ್ಪ ಮೂರನೇ ಸ್ಥಾನಕ್ಕೆ ಹೋದೆ ಎಂದು ಕೇಳಿದ್ದಾರೆ.. ಈ ಮಾತು ಕೇಳುತ್ತಲೇ ಶ್ರೀಧರ್ ಗೌಡ ಬೆಂಬಲಿಗರು ಸಿಡಿದೆದ್ದಿದ್ದಾರೆ.. ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಚೇರ್‌ಗಳನ್ನು ಒಡೆದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ಪಂಚಾಮೃತ ಅಂದ್ರೆ ಏನು..?; ಇದನ್ನು ತಯಾರು ಮಾಡೋದು ಹೇಗೆ..?
ಬಾಡಿಗೆ ಗಿರಾಕಿಗಳು ಎಂದಿದ್ದಕ್ಕೆ ಆಕ್ರೋಶ;
ಭಾಷಣ ಮಾಡುವಾಗ ಸಚಿವ ರಾಜಣ್ಣ ಅವರು ಬಾಡಿಗೆ ಗಿರಾಕಿಗಳು ಎಂಬ ಪದ ಬಳಸಿದ್ದರು.. ಇದರ ವಿರುದ್ಧ ಶ್ರೀಧರ್ ಗೌಡ ವಿರುದ್ಧ ಆಕ್ರೋಶ ಹೊರಹಾಕಿದರು.. ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದರು.. ಮಾತನ್ನು ವಾಪಸ್ ಪಡೆಯುವಂತೆ ಆಗ್ರಹ ಮಾಡಿದರು..
ಈ ಘಟನೆಯಿಂದಾಗಿ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ಶಿವಲಿಂಗೇಗೌಡ, ಅಭ್ಯರ್ಥಿ ಶ್ರೇಯಸ್ ಪಟೇಲ್, ಮಾಜಿ ಶಾಸಕ ಸಿಎಸ್.ಪುಟ್ಟೇಗೌಡ ಸೇರಿ ಹಲವರು ಭಾಗಿ ಆಗಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಶ್ರೀಧರ್ ಗೌಡ ಅವರೇ ಮೈಕ್ ತೆಗೆದುಕೊಂಡು ಮಾತನಾಡಿ ಕಾರ್ಯಕರ್ತರನ್ನು ಸಮಾಧಾನ ಮಾಡಿದರು.. ಅನಂತರ ಸಚಿವರು ಮಾತು ಮುಂದುವರೆಸಿದರು..
ಇದನ್ನೂ ಓದಿ; ಕೋಲಾರ ಕಾಂಗ್ರೆಸ್ ನಾಯಕರ ಹೈಡ್ರಾಮಾ; ಇದರ ಹಿಂದೆ ಯಾರಿದ್ದಾರೆ..?