LifestyleNational

ಶ್ರಾವಣದಲ್ಲಿ ಭಾರತದ ಈ ಗ್ರಾಮದ ಮಹಿಳೆಯರು ಬಟ್ಟೆಯೇ ಧರಿಸುವುದಿಲ್ಲ..!

ಹಿಮಾಲಯ; ಭಾರತ ವೈವಿದ್ಯತೆಯಿಂದ ಕೂಡಿರುವ ದೇಶ.. ಇಲ್ಲಿ ಅನೇಕ ಸಂಪ್ರದಾಯಗಳು, ಆಚರಣೆಗಳನ್ನು ಜನ ಪಾಲಿಸಿಕೊಂಡು ಬಂದಿದ್ದಾರೆ.. ಪ್ರಪಂಚ ಎಷ್ಟೇ ಮುಂದುವರೆದರೂ ಕೂಡಾ ಜನರು ತಮ್ಮ ನಂಬಿಕೆಗಳು, ಆಚರಣೆಗಳನ್ನು ಮಾತ್ರ ಬಿಟ್ಟಿಲ್ಲ.. ಇದಕ್ಕೊಂದು ಉದಾಹರಣೆ, ಹಿಮಾಲಯದ ಮಣಿಕರ್ಣ ಕಣಿವೆಯಲ್ಲಿರುವ ಪಿಣಿ ಎಂಬ ಗ್ರಾಮ.. ಈ ಗ್ರಾಮದಲ್ಲಿ ಬುಡಕಟ್ಟು ಜನಾಂಗದವರು ವಾಸವಿದ್ದು, ಶ್ರಾವಣದಲ್ಲಿ ಇಲ್ಲಿ ವಿಚಿತ್ರ ಆಚರಣೆಯೊಂದು ನಡೆಯುತ್ತದೆ.. ಈ ಗ್ರಾಮದ ಮಹಿಳೆಯರು ಶ್ರಾವಣದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಬೆತ್ತಲೆಯಾಗಿರುತ್ತಾರೆ.. ಯಾವುದೇ ಬಟ್ಟೆ ಧರಿಸದೆ ತಮ್ಮ ವ್ರತವನ್ನು ಮಾಡುತ್ತಾರೆ.. ಈಗಲೂ ಕೂಡಾ ಇಲ್ಲಿ ಈ ಪದ್ಧತಿ ಮುಂದುವರೆದಿದೆ..

ಇದನ್ನೂ ಓದಿ; ರಾಂಚಿ ಬಳಿ ಹಳಿ ತಪ್ಪಿದ ಮುಂಬೈ-ಹೌರಾ ರೈಲು; ಭಾರೀ ನಷ್ಟ!

ಪಿಣಿ ಗ್ರಾಮದ ಮಹಿಳೆಯರು ಈ ಪದ್ಧತಿಯನ್ನು ತುಂಬಾನೇ ಗೌರವಿಸುತ್ತಾರೆ.. ಒಂದು ವೇಳೆ ಪದ್ಧತಿಯನ್ನು ಧಿಕ್ಕರಿಸಿದರೆ ಕೆಲವೇ ದಿನಗಳಲ್ಲಿ ಕೆಟ್ಟ ಅನುಭವಗಳಾಗುತ್ತವೆ ಎಂದು ಇಲ್ಲಿನವರು ನಂಬಿದ್ದಾರೆ.. ಹೀಗಾಗಿಯೇ ಶ್ರಾವಣದಲ್ಲಿ ಗ್ರಾಮದ ಎಲ್ಲಾ ಮಹಿಳೆಯರೂ ಕೂಡಾ ಐದು ದಿನಗಳ ಕಾಲ ಬೆತ್ತಲೆಯಾಗಿದ್ದು ವ್ರತಾಚರಣೆ ಮಾಡುತ್ತಾರೆ.. ಈ ವೇಳೆ ಬಟ್ಟೆ ಧರಿಸುವುದು ಅಪರಾಧ ಎಂದು ಅವರು ಭಾವಿಸಿದ್ದಾರೆ..
ಅಂದಹಾಗೆ ಪಿಣಿ ಗ್ರಾಮದ ಮಹಿಳೆಯರು ಐದು ದಿನಗಳ ಕಾಲ ಬೆತ್ತಲೆಯಾಗಿದ್ದು, ವ್ರತಾಚರಣೆ ಮಾಡಿದರೂ ಅವರು ಮನೆಯಿಂದ ಹೊರಗೆ ಬರೋದಿಲ್ಲ.. ಮನೆಯಲ್ಲಿಯೇ ಇದ್ದು ಐದು ದಿನಗಳ ವ್ರತ ಪೂರ್ಣಗೊಳಿಸುತ್ತಾರೆ.. ಇದರಿಂದ ಮಹಿಳೆಯರಿಗೆ ಯಾವುದೇ ತೊಂದರೆಯಾಗೋದಿಲ್ಲ.. ಈ ಐದು ದಿನಗಳ ಕಾಲ ಗಂಡಸರು ಕೂಡಾ ಮನೆಯೊಳಗೆ ಹೋಗೋದಿಲ್ಲ..

ಇದನ್ನೂ ಓದಿ; ಬ್ಯಾಡರಹಳ್ಳಿಯ ಮಾನಸ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ..?

ಇನ್ನು ಗ್ರಾಮದ ಪುರುಷರು ಕೂಡಾ ಈ ಐದು ದಿನಗಳಲ್ಲಿ ತುಂಬಾ ಕಟ್ಟು ನಿಟ್ಟಿನ ವ್ರತಾಚರಣೆ ಮಾಡುತ್ತಾರೆ.. ಈ ಐದು ದಿನ ಪುರುಷರು ತಮ್ಮ ಪತ್ನಿಯ ಚೊತೆ ಮಾತನಾಡುವಂತೆಯೇ ಇಲ್ಲ.. ಇಬ್ಬರೂ ಪರಸ್ಪರ ಸೇರದೇ ಅಂತರವನ್ನೂ ಕಾಯ್ದುಕೊಳ್ಳಬೇಕು.. ಒಬ್ಬರನ್ನು ನೋಡಿ ಒಬ್ಬರು ಯಾವುದೇ ಕಾರಣಕ್ಕೂ ನಗಬಾರದು.. ಇನ್ನು ಪುರುಷರು ಮಾಂಸ, ಮದ್ಯ ಸೇವನೆ ಮಾಡುವುದು ಈ ಸಮಯದಲ್ಲಿ ಅಪರಾಧ ಎಂದೇ ಪರಿಗಣಿಸಲಾಗುತ್ತದೆ..
ಪಿಣಿ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆ ಭೂತಗಳು ಜನರಿಗೆ ಕಾಟ ಕೊಡುತ್ತಿದ್ದವಂತೆ.. ಚೆನ್ನಾಗಿ ಬಟ್ಟೆ ಧರಿಸಿದ್ದ ಮಹಿಳೆಯರು ಕಂಡರೆ ಅವರನ್ನು ಭೂತಗಳು ಆವರಿಸುತ್ತಿದ್ದವಂತೆ.. ಇದರಿಂದ ಮಹಿಳೆಯರು ಭಯಬೀತಗೊಂಡಿದ್ದರು.. ಈ ವೇಳೆ ಲಹುವಾ ಘೋಂಡ್ ಎಂಬ ದೇವರು ಭೂತಗಳ ಸಂಹಾರ ಮಾಡಿದ್ದನಂತೆ.. ಅಂದಿನಿಂದ ಮಹಿಳೆಯರು ಶ್ರಾವಣದಲ್ಲಿ ಐದು ದಿನ ಬೆತ್ತಲೆ ಇದ್ದು ವ್ರತಾಚರಣೆ ಮಾಡುತ್ತಾರೆ..

ಇದನ್ನೂ ಓದಿ; ನಾಳೆ ದೆಹಲಿಗೆ ಹೊರಡಲಿರುವ ಸಿಎಂ, ಡಿಸಿಎಂ; ಸಂಪುಟಕ್ಕೆ ಸರ್ಜರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯತೆ!

Share Post