CrimeNational

ವಿಮಾನದಲ್ಲಿ ಬಂದು ದರೋಡೆ!; ಈ ಗ್ಯಾಂಗ್‌ಗೆ ವಾರದಲ್ಲಿ ಒಂದೇ ದಿನ ಡ್ಯೂಟಿ!

ಬೆಂಗಳೂರು; ಎಲ್ಲರೂ ವಾರದಲ್ಲಿ ಆರು ದಿನ ಕೆಲಸ ಮಾಡಿ ಭಾನುವಾರ ಒಂದು ದಿನ ವಿಶ್ರಾಂತಿ ಪಡೆಯುತ್ತಾರೆ.. ಸಾಫ್ಟ್‌ವೇರ್‌ ಕಂಪನಿ ನೌಕಕರಿಗಾದರೆ ವಾರದಲ್ಲಿ ಎರಡು ದಿನ ರಜೆ ಇರುತ್ತದೆ.. ಆದ್ರೆ ಇಲ್ಲೊಂದು ಗ್ಯಾಂಗ್‌ ಇದೆ.. ಈ ಗ್ಯಾಂಗ್‌ಗೆ ವಾರದಲ್ಲಿ ಒಂದೇ ದಿನ ಕೆಲಸ.. ಉಳಿದ ಆರು ದಿನಗಳು ಅವರಿಗೆ ವಿಶ್ರಾಂತಿ… ಆ ಆರು ದಿನಗಳಲ್ಲಿ ಚೆನ್ನಾಗಿ ತಿಂದುಂಡು ಮಜಾ ಉಡಾಯಿಸುತ್ತಾರೆ..

ಇದನ್ನೂ ಓದಿ; ಹೆಗಲ ಮೇಲೇ ಸಾವನ್ನಪ್ಪಿದ ಸಹೋದರಿ; 5 ಕಿಮೀ ಹಾಗೇ ಸಾಗಿದ ಸಹೋದರ!

ಕಳ್ಳತನ ಮಾಡೋ ಗ್ಯಾಂಗ್‌ಗಳದ್ದು ಬೇರೆ ಬೇರೆ ಸ್ಟೈಲ್‌ ಇರುತ್ತದೆ.. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಳ್ಳತನ ಮಾಡುತ್ತಾರೆ.. ಕಳ್ಳತನ ಹೇಗಾಗಿದೆ ಎಂದು ನೋಡಿಯೇ ಪೊಲೀಸರು ಇಂತಹವರಿಂದಲೇ ಕಳ್ಳತನ ಆಗಿರಬಹುದು ಎಂದು ಶಂಕಿಸಿಬಿಡುತ್ತಾರೆ.. ಅದ್ರಲ್ಲೂ ಕೂಡಾ ಕೆಲವರು ಹೈಟೆಕ್‌ ಕಳ್ಳರಿರುತ್ತಾರೆ.. ಅದು ಕಳ್ಳತನ ದರೋಡೆ ಮಾಡಿಯೇ ಹೈಟೆಕ್‌ ಜೀವನ ಮಾಡುತ್ತಿರುತ್ತಾರೆ.. ಅವರು ಕಳ್ಳತನ ಮಾಡೋದಕ್ಕೂ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ.. ಇಂತಹದ್ದೊಂದು ಹೈಟೆಕ್‌ ದರೋಡೆ ಗ್ಯಾಂಗ್‌ ನ್ನು ಮುಂಬೈನ ಮಾಟುಂಗಾ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ..

ಇದನ್ನೂ ಓದಿ; ಸತತವಾಗಿ ಒಂದು ತಿಂಗಳು ಈರುಳ್ಳಿ ತಿನ್ನದೇ ಇದ್ದರೆ ಏನಾಗುತ್ತದೆ..?

ಉತ್ತರ ಪ್ರದೇಶದ ಮೀರತ್‌ನಲ್ಲಿ ಒಂದು ಗ್ಯಾಂಗ್‌ ಇದೆ.. ಈ ಗ್ಯಾಂಗ್‌ ವಾರಕ್ಕೊಂದು ದಿನ 1500 ಕಿಲೋ ಮೀಟರ್‌ ದೂರದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತೆ.. ಬೆಳಗ್ಗೆಯೇ ವಿಮಾನ ಹತ್ತಿ ಮುಂಬೈಗೆ ಬರುವ ಈ ಗ್ಯಾಂಗ್‌ ಸಂಜೆಯಷ್ಟೊತ್ತಿಗೆ ಒಂದಷ್ಟು ಕಡೆ ದರೋಡೆ ಮಾಡಿಕೊಂಡು ಸಂಜೆ ಮೀರತ್‌ಗೆ ವಿಮಾನದಲ್ಲೇ ವಾಪಸ್ಸಾಗುತ್ತದೆ.. ಅದಾದ ಮೇಲೆ ಇನ್ನು ಆರು ದಿನ ಅವರಿಗೆ ಫುಲ್‌ ರೆಸ್ಟ್‌.. ಹೀಗೆ ಹಲವು ವರ್ಷಗಳಿಂದ ಲೂಟಿ ಮಾಡಿದ್ದ ಗ್ಯಾಂಗ್‌ ಈಗ ಸಿಕ್ಕಿಬಿದ್ದಿದೆ..

ಇದನ್ನೂ ಓದಿ;ಗಟ್ಟಿಮೇಳಕ್ಕೆ ಸರಿಯಾಗಿ ಮೊಬೈಲ್‌ ಮೊಳಗಿತು..!; ಮದುವೆ ಕ್ಯಾನ್ಸಲ್‌ ಮಾಡಿ ಹೊರಟ ವರ..!

ಮುಂಬೈನ ಮಾಟುಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಒಂದು ದರೋಡೆ ನಡೆದಿತ್ತು.. ಈ ಭಾಗದಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್‌ನಲ್ಲಿ ಈ ಗ್ಯಾಂಗ್‌ ಕೈಚಳಕ ತೋರಿಸಿತ್ತು.. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಂದ ಈ ಗ್ಯಾಂಗ್‌ ಚಿನ್ನಾಭರಣ ಎಗರಿಸಿತ್ತು.. ಮತ್ತು ಬರಿಸುವ ವಸ್ತು ಹಾಕಿದ್ದ ಕಾಫಿಯನ್ನು ಮಹಿಳೆಗೆ ಕುಡಿಸಿ, ಪ್ರಜ್ಞೆ ತಪ್ಪಿಸಿ ಆಕೆಯ ಬಳಿ ಇದ್ದ ಚಿನ್ನಾಭರಣವನ್ನು ತೋಚಿದ್ದರು..
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಅಡ್ರೆಸ್‌ ಸಂಗ್ರಹಿಸಿದ್ದಾರೆ.. ಮೀರತ್‌ನ ಕೊತ್ವಾಲಿ ಪ್ರದೇಶದಲ್ಲಿ ದಾಳಿ ನಡೆಸಿದ ಪೊಲೀಸರು ಯೂನಸ್ ಎಂಬಾತನನ್ನು ಬಂಧಿಸಿದ್ದಾರೆ.. ಬ್ರಹ್ಮಪುರಿಯನ್ನು ಇನ್ನಷ್ಟು ಆರೋಪಿಗಳಿದ್ದಾರೆಂದು ತಿಳಿದು ಪೊಲೀಸರು ಅಲ್ಲಿಗೆ ಹೋಗುವಷ್ಟರಲ್ಲಿ ಎಸ್ಕೇಪ್‌ ಆಗಿದ್ದಾರೆ.. ಅವರಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ..

Share Post