CrimeNational

ಈ ಕನ್ನಡಕ ಧರಿಸಿದ್ರೆ ಎದುರಿಗಿರುವವರು ಬೆತ್ತಲೆ ಕಾಣ್ತಾರಂತೆ..!; ಏನಿದರ ಅಸಲಿಯತ್ತು..?

ಚೆನ್ನೈ; ಈ ಸ್ಪೆಷಲ್‌ ಕನ್ನಡಕ ಹಾಕಿಕೊಂಡರೆ ಎದುರಿಗಿರುವವರೆಲ್ಲಾ ನಗ್ನವಾಗಿ ಕಾಣುತ್ತಾರಂತೆ. ಇಂತಹದ್ದೊಂದು ಸುದ್ದಿ ಆಗಾಗ ಹರಿದಾಡುತ್ತಿರುತ್ತದೆ. ಕೆಲವರು ಅಂತಹ ಕನ್ನಡಗಳೂ ಇವೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಮೋಸ ಮಾಡುವವರಿಗೆ ಜನರಲ್ಲಿರುವ ಇಂತಹ ನಂಬಿಕೆಯೇ ಅಸ್ತ್ರ. ಚೆನ್ನೈನಲ್ಲಿ ಬೆಂಗಳೂರು ಮೂಲವರು ಇದೇ ರೀತಿಯ ಕನ್ನಡಕ ಕಥೆ ಕಟ್ಟಿ ಭಾರಿ ಮೊತ್ತ ಪಡೆಯಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನಿಂದ ಚೆನ್ನೈಗೆ ಬಂದಿದ್ದ ನಾಲ್ವರು ಕೋಯಂಬೀಓಡ್‌ ಬಸ್‌ ನಿಲ್ದಾಣದ ಬಳಿಯ ಲಾಡ್ಜ್‌ ಒಂದರಲ್ಲಿ ರೂಂ ಮಾಡಿದ್ದರು. ನಮ್ಮ ಬಳಿ ವಿಶೇಷ ಕನ್ನಡಕಗಳಿದ್ದು, ಅವುಗಳನ್ನು ಧರಿಸಿದರೆ ಎದುರಿಗಿರುವವರು ನಗ್ನವಾಗಿ ಕಾಣುತ್ತಾರೆ ಎಂದು ನಂಬಿಸುತ್ತಿದ್ದರು. ಹಲವರ ಬಳಿ ಭಾರಿ ಮೊತ್ತದ ಹಣ ಪಡೆದು ನಕಲಿ ಕನ್ನಡಕಗಳನ್ನು ಕೊಟ್ಟಿದ್ದರು. ಆದ್ರೆ ಅದು ಧರಿಸಿದ ಮೇಲೆ ಯಾರೂ ನಗ್ನವಾಗಿ ಕಾಣದಿದ್ದು ನೋಡಿ, ಆರೋಪಿಗಳ ಬಳಿ ಪ್ರಶ್ನಿಸಿದರೆ ಪಿಸ್ತೂಲ್‌ ತೋರಿಸಿ ಕೊಲ್ಲುವುದಾಗಿ ಹೆದರಿಸುತ್ತಿದ್ದಂತೆ. ಇದೇ ಅಲ್ಲದೆ ರೈಸ್‌ ಪುಲ್ಲಿಂಗ್‌ ಸೇರಿದಂತೆ ಹಲವು ರೀತಿಯಲ್ಲಿ ಜನರನ್ನು ವಂಚಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಲಾಡ್ಜ್‌ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಅರೆಸ್ಟ್‌ ಮಾಡಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಎಂಬುವವರನ್ನು ಬಂಧಿಸಲಾಗಿದೆ.

Share Post